ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ಒಬ್ಬಂಟಿ ಓಡಾಡುತ್ತಿದ್ದವರ ಸುಲಿಗೆ ಮಾಡುತ್ತಿದ್ದ ಇಬ್ಬರ ಬಂಧನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 18: ಒಬ್ಬಂಟಿಯಾಗಿ ಸಂಚರಿಸುವವರನ್ನು ಬೆದರಿಸಿ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಉದಯಗಿರಿ ಪೊಲೀಸರು 45 ಸಾವಿರ ಮೌಲ್ಯದ 1 ಲ್ಯಾಪ್‌ಟಾಪ್, 1 ಮೊಬೈಲ್ ಫೋನ್, ದ್ವಿಚಕ್ರ ವಾಹನ ಹಾಗೂ ಅಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ.

ಕಲ್ಯಾಣಗಿರಿ ನಗರದ ಮೊಹಮ್ಮದ್ ಜಮೀರ್ ಉರ್ ರೆಹಮಾನ್ (20), ರಾಘವೇಂದ್ರ ಬಡಾವಣೆ ಶೋಯಬ್ ಅಕ್ತರ್ (21) ಬಂಧಿತರು.

ಮೈಸೂರು ಜಿಲ್ಲೆಗೆ ಕಂಟಕರಾಗಿದ್ದ ದರೋಡೆಕೋರರ ಬಂಧನ
ನ.13ರಂದು ಶಕ್ತಿನಗರದಲ್ಲಿ ಶ್ರೀರಾಗ್ ಎಂಬುವರು ಹೂ ಬಿಡಿಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಚಾಕು ತೋರಿಸಿ ಬೆದರಿಸಿ, ಹಲ್ಲೆ ಮಾಡಿ, ಮೊಬೈಲ್ ಫೋನನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದ. ಅದೇ ದಿನ ಸಂಜೆ ಕಲ್ಯಾಣಗಿರಿ ನಗರದಲ್ಲಿ ಮತ್ತೊಬ್ಬ, ಮೊಹಮ್ಮದ್ ಜವಾದ್ ಎಂಬುವವರ ಮನೆಗೆ ನುಗ್ಗಿ, 10 ಸಾವಿರ ರೂ. ಹಣ ಕೊಡುವಂತೆ ಚಾಕು ತೋರಿಸಿ ಬೆದರಿಕೆ ಒಡ್ಡಿ, ಮನೆಯಲ್ಲಿದ್ದ ಲ್ಯಾಪ್‌ಟಾಪ್‌ ತೆಗೆದುಕೊಂಡು ಹೋಗಿದ್ದ. ಉದಯಗಿರಿ ಠಾಣೆಯಲ್ಲಿ ಈ ಕುರಿತು ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

Mysuru: Udayagiri Police Arrested Two Inrelation To Robbery Case

ತನಿಖೆ ಕೈಗೊಂಡ ಉದಯಗಿರಿ ಪೊಲೀಸರು, ನ.17ರಂದು ರಾಜೀವನಗರ ಮಾದೇಗೌಡ ವೃತ್ತದ ಬಳಿ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಇವರನ್ನು ಬಂಧಿಸಿದ್ದಾರೆ. ಡಿಸಿಪಿ ಗೀತ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ.

English summary
Mysuru Udayagiri police have arrested two robbers and seized 45,000 worth of 1 laptop, 1 mobile phone, two wheeler and a weapon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X