ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ನಂಟು; ನಂಜನಗೂಡಿನ ಮತ್ತೆರಡು ಗ್ರಾಮಗಳು ಸೀಲ್ ಡೌನ್‌

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 23: ಮಂಡ್ಯ ಜಿಲ್ಲೆಯ ಕೊರೊನಾ ಸೋಂಕಿತ ವ್ಯಕ್ತಿಯು ನಂಜನಗೂಡು ತಾಲೂಕಿನ ಹೆಳವರಹುಂಡಿ ಮತ್ತು ಅಂಜಾನಪುರ ಗ್ರಾಮಗಳಿಗೆ ಭೇಟಿ ನೀಡಿದ ಕಾರಣ ಆ ಗ್ರಾಮಗಳನ್ನು ಸರ್ಕಾರ ಸೀಲ್ ​​​​ಡೌನ್ ಮಾಡಿದೆ.

Recommended Video

ಅವನಿಗೆ ಇರೋ ಅಷ್ಟು ಬುದ್ಧಿ ನನಗಿಲ್ಲ ಎಂದ GT DeveGowda

ಹೆಳವರಹುಂಡಿ ಗ್ರಾಮದ 19 ಮಂದಿ ಮತ್ತು ಅಂಜಾನಪುರ ಗ್ರಾಮದ 6 ಮಂದಿ ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದು, ಎಲ್ಲಾ 25 ಮಂದಿಯನ್ನು ಸಂಪರ್ಕ ತಡೆಯಲ್ಲಿ ಇರಿಸಲಾಗಿದೆ. ಗ್ರಾಮದಲ್ಲಿರುವ 395 ಕುಟುಂಬಗಳ ಎಲ್ಲಾ ಸದಸ್ಯರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಅಂಜಾನಪುರ ಗ್ರಾಮದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯು ಭೇಟಿ ಮಾಡಿದ ಮನೆ ಊರಿನ ಹೊರಗೆ ಇರುವುದರಿಂದ ಆ ಮನೆಯೊಂದನ್ನು ಮಾತ್ರ ಸಂಪರ್ಕ ತಡೆ ಮಾಡಲಾಗಿದೆ.

ಮೈಸೂರಿನ ಜುಬಿಲಿಯಂಟ್ ಪುನರಾರಂಭಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಮೈಸೂರಿನ ಜುಬಿಲಿಯಂಟ್ ಪುನರಾರಂಭಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ

ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಗಳ ನೇತೃತ್ವದಲ್ಲಿ ಈ ಎರಡು ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದೆ. ಈ ಮೊದಲೇ ಕೊರೊನಾ ಸೋಂಕಿತನೊಬ್ಬನಿಂದಾಗಿ ಬಳಲಿದ್ದ ನಂಜನಗೂಡಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವವರಿಗೆ ಸೋಂಕು ಕಂಡುಬಂದರೆ ದ್ವಿತೀಯ ಸಂಪರ್ಕದಲ್ಲಿರುವವರನ್ನೂ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Two Villages Seal Down In Nanjanagudu Because Of Mandya Coronavirus Positive Person Visit

ಕೊರೊನಾ ಸೋಂಕಿನಿಂದಾಗಿ 28 ನಿಯಂತ್ರಿತ ವಲಯಗಳನ್ನು ಗುರುತಿಸಿ ಸೀಲ್ ‌ಡೌನ್ ಮಾಡಲಾಗಿತ್ತು. ಅದರಲ್ಲಿ ಈಗಾಗಲೇ 28 ವಲಯಗಳಲ್ಲಿನ ಸೀಲ್ ‌ಡೌನ್‌ ತೆರವುಗೊಳಿಸಲಾಗಿತ್ತು. ಮೇ 23ರಂದು ಬ್ಯಾಳಾರು ಹಾಗೂ ಮೇ 27ಕ್ಕೆ ನಗರದ ಬಸವನಹುಡಿ ಬ್ಲಾಕ್ ಸೀಲ್ ‌ಡೌನ್ ತೆರವಾಗಲಿವೆ. ಇವುಗಳಲ್ಲಿ ಸೀಲ್ ಡೌನ್‌ ಹಿಂಪಡೆಯುತಿದ್ದಂತೆಯೇ ಮತ್ತೆರಡು ಗ್ರಾಮಗಳು ಸೇರ್ಪಡೆಗೊಂಡಿರುವುದು ತಾಲ್ಲೂಕಿನ ಜನತೆಯನ್ನು ನಿರಾಸೆಗೊಳಿಸಿದೆ.

English summary
Two villages in nanjanagudu seal down because of mandya coronavirus positive person visited these villages,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X