ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಯುಸಿ ಓದಿ ಮೈಸೂರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದರು ಈ ನಕಲಿ ವೈದ್ಯರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 14: ಪಿಯುಸಿ ಓದಿ, ವೈದ್ಯರ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ವೆಂಕಟೇಶ್‌ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಇಲವಾಲ ಗ್ರಾಮದಲ್ಲಿ ಕ್ಲಿನಿಕ್‌ ನಡೆಸುತ್ತಿದ್ದ ಇಬ್ಬರು ನಕಲಿ ವೈದ್ಯರನ್ನು ಪೋಲೀಸರಿಗೆ ಒಪ್ಪಿಸಿದೆ. ಇಲ್ಲಿ ಹಲವಾರು ವರ್ಷಗಳಿಂದ ಚಾಮುಂಡೇಶ್ವರಿ ಕ್ಲಿನಿಕ್‌ ಮತ್ತು ದಿವ್ಯ ಶ್ರೀ ಹೆಲ್ತ್ ಕೇರ್‌ ಎಂದು ಕ್ಲಿನಿಕ್‌ ಗಳನ್ನು ನಡೆಸುತಿದ್ದ ವಿಜಯ ಕುಮಾರ್‌ ಮತ್ತು ದೇವೇಂದ್ರ ಎಂಬುವವರು ಸರ್ಕಾರದ ಯಾವುದೇ ಅನುಮತಿ ಮತ್ತು ನೋಂದಣಿ ಇಲ್ಲದೆ ಜನರಿಗೆ ಚಿಕಿತ್ಸೆ ನೀಡುತಿದ್ದರು ಎಂದು ತಿಳಿದುಬಂದಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಕಲಿ ವೈದ್ಯರ ಹಾವಳಿ?ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಕಲಿ ವೈದ್ಯರ ಹಾವಳಿ?

ಈ ಇಬ್ಬರೂ ಕೇವಲ ಪಿಯುಸಿ ಓದಿಕೊಂಡಿದ್ದು, ಈ ಹಿಂದೆ ಆಸ್ಪತ್ರೆಗಳಲ್ಲಿ ವೈದ್ಯರ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದರು. ಅದನ್ನೇ ಅನುಭವ ಮಾಡಿಕೊಂಡ ಇಬ್ಬರೂ ಮೈಸೂರು-ಮಂಗಳೂರು ಹೆದ್ದಾರಿಯ ಬದಿಯಲ್ಲಿರುವ ಇಲವಾಲದಲ್ಲಿ ಕ್ಲಿನಿಕ್‌ ತೆರೆದು ಅಕ್ರಮ ಗರ್ಭಪಾತವನ್ನೂ ಮಾಡಿಸುತಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಮಾಹಿತಿ ಪಡೆದ ಡಿಎಚ್ ‌ಒ ವೆಂಕಟೇಶ್‌ ನೇತೃತ್ವದ ತಂಡ ದಾಳಿ ನಡೆಸಿ ಕ್ಲಿನಿಕ್‌ ಗೆ ಬೀಗಮುದ್ರೆ ಜಡಿದಿದೆ.

Two Fake Doctors Who Studied PUC Arrested By Police In Ilavala

ಬೆಂಗಳೂರು: ಕಿಡ್ನಿ ಮಾರಾಟ ಹೈಟೆಕ್ ಜಾಲ ಭೇದಿಸಿದ ಪೊಲೀಸರುಬೆಂಗಳೂರು: ಕಿಡ್ನಿ ಮಾರಾಟ ಹೈಟೆಕ್ ಜಾಲ ಭೇದಿಸಿದ ಪೊಲೀಸರು

ಇಬ್ಬರು ನಕಲಿ ವೈದ್ಯರು ನಕಲಿ ವೈದ್ಯಕೀಯ ಪ್ರಮಾಣಪತ್ರ ಇಟ್ಟುಕೊಂಡು ಕ್ಲಿನಿಕ್ ನಡೆಸುತ್ತಿದ್ದರು. ಪೊಲೀಸರು ಇಬ್ಬರು ನಕಲಿ ವೈದ್ಯರನ್ನ ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಇಲವಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

English summary
Police arrested two fake doctors who studied PUC and run health clinics in ilavala in Mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X