ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸೋಂಕಿಗೆ ಮೈಸೂರು ಪಾಲಿಕೆಯ ಇಬ್ಬರು ನೌಕರರು ಸಾವು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 15: ಕೊರೊನಾ ಹಾಟ್‌ಸ್ಪಾಟ್ ಆಗುವ ಆತಂಕ ಮೂಡಿಸಿರುವ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮಹಾಮಾರಿಯ ರಣಕೇಕೆ ಮುಂದುವರೆದಿದೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಮಹಾನಗರ ಪಾಲಿಕೆಯ ಇಬ್ಬರು ನೌಕರರು ಸಾವನ್ನಪ್ಪಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಜಮೇದಾರ್ ಅನಂತು ಹಾಗೂ ಪಾಲಿಕೆ ವಲಯ ಕಚೇರಿ 3ರ ಇಂಜಿನಿಯರ್ ಕಾರು ಚಾಲಕ ಸತೀಶ್ ಮಹಾಮಾರಿಗೆ ಬಲಿಯಾಗಿದ್ದಾರೆ. ಇವರಿಬ್ಬರ ಸಾವಿನ ಸಂಗತಿ ಪಾಲಿಕೆಯ ಇತರೆ ಸಿಬ್ಬಂದಿಯಲ್ಲಿ ದುಃಖದ ಜೊತೆಗೆ ಆತಂಕವನ್ನು ಸೃಷ್ಟಿಸಿದೆ.

ರೆಮಿಡಿಸ್ವಿರ್ ಔಷಧ ದುರ್ಬಳಕೆ ಮಾಡಿದರೆ ಹುಷಾರ್!: ಬೊಮ್ಮಾಯಿ ಖಡಕ್ ಎಚ್ಚರಿಕೆರೆಮಿಡಿಸ್ವಿರ್ ಔಷಧ ದುರ್ಬಳಕೆ ಮಾಡಿದರೆ ಹುಷಾರ್!: ಬೊಮ್ಮಾಯಿ ಖಡಕ್ ಎಚ್ಚರಿಕೆ

ಕಳೆದ ಕೆಲವು ದಿನಗಳ ಹಿಂದೆ ಮೇಯರ್ ರುಕ್ಮಿಣಿ ಮಾದೇಗೌಡ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ, ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೂ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಈ ವೇಳೆ ಜಮೇದಾರ್ ಅನಂತು ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

Two Employees Of Mysuru City Corporation Die of Covid-19

ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಅನಂತು ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕೊರೊನಾ ಸೋಂಕಿನಿಂದ ಚೇತರಿಕೆ ಕಾಣದ ಅನಂತು, ಕೊರೊನಾಗೆ ಬಲಿಯಾಗಿದ್ದಾರೆ.

ಅನಂತು ಅವರು ತಮ್ಮ ಸೇವಾ ಅವಧಿಯ ಅಂತಿಮ ಘಟ್ಟದಲ್ಲಿದ್ದರು. ಇನ್ನೂ ಪಾಲಿಕೆ ವಲಯ ಕಚೇರಿ 3ರ ಇಂಜಿಯರ್ ಗೆ ಕೊರೊನಾ ಸೋಂಕು ದೃಢವಾದ ಮೇಲೆ ಅವರು ಕಾರು ಚಾಲಕ ಸತೀಶ್ ಅವರಿಗೂ ಸೋಂಕು ದೃಢವಾಗಿತ್ತು.

English summary
Two employees of Mysuru City Corporation have died of Coronavirus infection. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X