ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್‌ಎಸ್ ನೀರಿನ ಮಟ್ಟ ಇಳಿಕೆ:ಮುಂದೆ ಎದುರಾಗಲಿದೆ ನೀರಿನ ಸಂಕಷ್ಟ

|
Google Oneindia Kannada News

ಮೈಸೂರು, ಮೇ 8: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೀರಿನ ಅಭಾವ ಕೂಡ ಕಾಡುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ನೂರಾರು ಎಕರೆಗಳಲ್ಲಿ ಬೆಳೆಗಳು ಬೆಳೆದು ನಿಂತಿದೆ. ಕಟಾವಿಗೆ ಬಂದಿರುವ ಬೆಳೆಗಳು ನೀರಿನ ಕೊರತೆಯಿಂದ ಕಳೆಗುಂದಿದ ಹಂತಕ್ಕೆ ತಲುಪಿದೆ.

ಕುಡಿಯುವ ನೀರಿಗೂ ತತ್ವಾರ ಎದುರಾಗಿದ್ದು, ದಿನ ಬಿಟ್ಟು ದಿನ ನೀರು ಪೂರೈಕೆ ಮಾಡುವ ಚಿಂತನೆ ಕೂಡ ನಡೆದಿದೆ. ಪ್ರಸ್ತುತ ಕೃಷ್ಣರಾಜಸಾಗರ ಜಲಾಶಯದಿಂದ ನಾಲೆಗಳ ಮೂಲಕ ಬಿಡುತ್ತಿರುವ ಅಲ್ಪ ಪ್ರಮಾಣದ ನೀರು ಬೆಳೆದು ನಿಂತಿರುವ ಭತ್ತಕ್ಕೆ ಸಾಲುತ್ತಿಲ್ಲ.

ಮಂಗಳೂರಿನಲ್ಲಿ ಎರಡು ದಿನಗಳಿಂದ ಕುಡಿಯುವ ನೀರೇ ಇಲ್ಲ!ಮಂಗಳೂರಿನಲ್ಲಿ ಎರಡು ದಿನಗಳಿಂದ ಕುಡಿಯುವ ನೀರೇ ಇಲ್ಲ!

ಮೇ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯೂ ಬರುವುದಿಲ್ಲ. ಇದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಮಂಡ್ಯದ ಜೀವನಾಡಿ ಕೃಷ್ಣರಾಜ ಸಾಗರ ಜಲಾಶಯದ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗಲಿದ್ದು, ಅಲ್ಲಿಯವರೆಗೂ ನೀರಿನ ಮಟ್ಟವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಪ್ರಸ್ತುತ ಜಲಾಶಯದಲ್ಲಿರುವ ನೀರಿನ ಮಟ್ಟವನ್ನು ಬೆಳೆದು ನಿಂತಿರುವ ಬೆಳೆಯ ರಕ್ಷಣೆ ಹಾಗೂ ಕುಡಿಯುವ ನೀರಿಗಾಗಿ ಕನಿಷ್ಠ ಒಂದು ತಿಂಗಳವರೆಗೆ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕರಾವಳಿಗರಿಗೆ ಕಾಡುತ್ತಿರುವ ನೀರಿನ ಸಮಸ್ಯೆ:ಕೈಗಾರಿಕೆಗಳ ಮೇಲೂ ಎಫೆಕ್ಟ್ಕರಾವಳಿಗರಿಗೆ ಕಾಡುತ್ತಿರುವ ನೀರಿನ ಸಮಸ್ಯೆ:ಕೈಗಾರಿಕೆಗಳ ಮೇಲೂ ಎಫೆಕ್ಟ್

ದಿನಬಳಕೆ ಮತ್ತು ಕುಡಿಯುವ ನೀರಿನ ಬಗ್ಗೆ ಸಮತೋಲನ ಕಾಯ್ದುಕೊಳ್ಳಲು ಮೈಸೂರು, ಮಂಡ್ಯ , ಬೆಂಗಳೂರು ಸೇರಿದಂತೆ ಕಾವೇರಿ ವ್ಯಾಪ್ತಿಯ ನಗರಗಳಲ್ಲಿ ದಿನಬಿಟ್ಟು ದಿನ ಕೂಡ ಕುಡಿಯುವ ನೀರಿನ ಪೂರೈಕೆ ಮಾಡುವ ಚಿಂತನೆ ನಡೆದಿದೆ.

ಕಳೆದ ವರ್ಷ ನೀರಿನ ಸಮಸ್ಯೆ ಎದುರಾಗಿರಲಿಲ್ಲ

ಕಳೆದ ವರ್ಷ ನೀರಿನ ಸಮಸ್ಯೆ ಎದುರಾಗಿರಲಿಲ್ಲ

ಪ್ರಸಕ್ತ ವರ್ಷ ಈ ಸಮಯದಲ್ಲಿ ಸಮಾಧಾನಕರ ಮಟ್ಟದಲ್ಲಿ ನೀರನ್ನು ಕೆಆರ್ ಎಸ್ ನಲ್ಲಿ ಕಾಯ್ದುಕೊಳ್ಳಲಾಗಿತ್ತು. ಕಳೆದ ವರ್ಷ ಇದೇ ದಿನ 71.36 ಅಡಿಗಳಿದ್ದು, ಇದೇ ಸಂದರ್ಭದಲ್ಲಿ ಬೆಳೆಗಳಿಗೆ ನೀರು ಬಿಡಲು ಆಗದಿದ್ದರೂ, ಕುಡಿಯುವ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಕೃಷಿ ಇಲಾಖೆಯ ಗುರಿ 22.38 ಹೆಕ್ಟೇರ್ ಪ್ರದೇಶವಾಗಿ ಇದ್ದರೂ, ಇದೀಗ ಮಂಡ್ಯ ಜಿಲ್ಲೆಯಲ್ಲಿ ಸುಮಾರು 15,434 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ. ಇದರಲ್ಲಿ ಶೇ.85ರಷ್ಟು ನಾಲೆಗಳ ವ್ಯಾಪ್ತಿಗೆ ಬರಲಿದೆ.ಕೃಷಿ ಭೂಮಿಗೆ ಕೆಲವು ದಿನಗಳವರೆಗೆ ನೀರನ್ನು ದಿನ ಬಿಟ್ಟು ದಿನ ಬಿಡುವ ಮಾದರಿಯಲ್ಲಿ ಹರಿಬಿಡಲಾಗುತ್ತಿದೆ. ಆದರೆ ಇದು ಸಾಕಾಗುವುದಿಲ್ಲ ಹಾಗೂ ಬೆಳೆಯ ಉತ್ಪಾದನೆ ಮೇಲಿನ ಪರಿಣಾಮ ಎದುರಾಗಲಿದೆ.

ಎಚ್ಚರಿಕೆ ನೀಡಿದ ಕೃಷಿ ಇಲಾಖೆ

ಎಚ್ಚರಿಕೆ ನೀಡಿದ ಕೃಷಿ ಇಲಾಖೆ

ನೀರನ್ನು ಮಿತವಾಗಿ ಹರಿಸುತ್ತಿರುವ ಹಿನ್ನೆಲೆಯಲ್ಲಿ ರೈತರು ಹಸನಾಗಿ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಬಾರದೆಂದು ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ.ಮೈಸೂರು, ಮಂಡ್ಯ ಹಾಗೂ ಬೆಂಗಳೂರು ನಗರಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರು ಸರಬರಾಜು ಮಾಡಬೇಕಾಗಿರುವುದರಿಂದ ವಿಶ್ವೇಶ್ವರಯ್ಯ ನಾಲೆಗೆ ಹರಿಸುತ್ತಿರುವ ನೀರನ್ನು ಮೇ 8 ರಿಂದ ಸ್ಥಗಿತಗೊಳಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮ ನಿಯಮಿತದ ಸೂಪರಿಂಟೆಂಡಿಂಗ್ ಇಂಜಿನಿಯರ್ ರವೀಂದ್ರ ತಿಳಿಸಿದ್ದಾರೆ.

ತುರ್ತು ನೀರಿನ ಪೂರೈಕೆಗಾಗಿ ದಕ್ಷಿಣ ಕನ್ನಡಕ್ಕೆ 6 ಕೋಟಿ ರೂ.ಬಿಡುಗಡೆತುರ್ತು ನೀರಿನ ಪೂರೈಕೆಗಾಗಿ ದಕ್ಷಿಣ ಕನ್ನಡಕ್ಕೆ 6 ಕೋಟಿ ರೂ.ಬಿಡುಗಡೆ

ಕೃಷ್ಣರಾಜಸಾಗರದ ಮಟ್ಟ ಎಷ್ಟಿದೆ?

ಕೃಷ್ಣರಾಜಸಾಗರದ ಮಟ್ಟ ಎಷ್ಟಿದೆ?

ಕೃಷ್ಣರಾಜ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಯಿದ್ದು, ಕನಿಷ್ಠ ನೀರಿನ ಮಟ್ಟ 74.76 ಅಡಿಗೆ ತಲುಪಿದಾಗ ಡೆಡ್ ಸ್ಟೋರೇಜ್ ಎಂದು ಪರಿಗಣಿಸಲಾಗುತ್ತದೆ. ಮೈಸೂರು, ಬೆಂಗಳೂರು ನಗರ ಸೇರಿದಂತೆ 47 ಪಟ್ಟಣಗಳು ಮತ್ತು 625 ಹಳ್ಳಿಗಳು ಕುಡಿಯಲು ಕೆಆರ್‍ಎಸ್ ಕಾವೇರಿ ನೀರನ್ನೇ ಅವಲಂಬಿಸಿರುವುದರಿಂದ ನಿಗಮವು ವ್ಯವಸಾಯ ಉದ್ದೇಶಕ್ಕೆ ಪೂರೈಸುತ್ತಿರುವುದನ್ನು ನಿಲ್ಲಿಸಿ ಕುಡಿಯುವ ಉದ್ದೇಶಕ್ಕೆ ಮೀಸಲಿಡುವುದು ವಾಡಿಕೆ.

ಮೇ 8ರಿಂದ ಸ್ಥಗಿತಗೊಳಿಸಲಾಗಿದೆ

ಮೇ 8ರಿಂದ ಸ್ಥಗಿತಗೊಳಿಸಲಾಗಿದೆ

ಈ ಬಾರಿ ಬೇಸಿಗೆ ಬಿಸಿಲಿನ ತೀವ್ರತೆ ಹೆಚ್ಚಾಗಿರುವ ಕಾರಣ ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತ ಕಬ್ಬಿನ ಬೆಳೆಗೆ ವಿಶ್ವೇಶ್ವರಯ್ಯ ನಾಲೆ ಮೂಲಕ ಹರಿಸುತ್ತಿರುವ ನೀರನ್ನು ಮೇ 8ರಂದು ಸ್ಥಗಿತಗೊಳಿಸಲಾಗಿದೆ. ಕಬ್ಬಿನ ಬೆಳೆ 1 ವರ್ಷದಾಗಿದ್ದು, ಕಳೆದ ಜೂನ್-ಜುಲೈ ಮಾಹೆಯಲ್ಲಿ ಮಾಡಿರುವ ಬಿತ್ತನೆಯು ಈಗ ಕಟಾವು ಹಂತಕ್ಕೆ ಬಂದಿರುವುದರಿಂದ ಸರ್ಕಾರದ ನಿರ್ದೇಶನದಂತೆ ಹಾಗೂ ಮುಂದಿನ ಆದೇಶದವರೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುವುದು.

English summary
Two days once the water supply plan thinking by KRS officials.Cauvery Neeravari Nigam Limited (CNNL) have decided to stop water release for irrigation into Visvesvaraya Canal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X