ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಕೇಕ್ ಉತ್ಸವ: ಗಮನ ಸೆಳೆವ ದುಬೈ ಬುರ್ಜ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 28 : ಜಿಲ್ಲಾಡಳಿತ, ಹೋಟೆಲ್ಸ್, ರೆಸ್ಟೋರೆಂಟ್ಸ್ ಹಾಗೂ ಬೇಕರಿ ಮಾಲೀಕರ ಸಂಘದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ಕೇಕ್ ಉತ್ಸವಕ್ಕೆ ಶಾಸಕ ವಾಸು ಮಂಗಳವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮೈಸೂರು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕೇಕ್ ಉತ್ಸವ ಆಯೋಜಿಸಲಾಗಿದೆ. ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್ ಮಸ್ ಹಾಗೂ ಹೊಸವರ್ಷವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸುವುದರಿಂದ ಕೇಕ್ ಪ್ರಿಯರನ್ನು ಸೆಳೆಯಲು ಕಳೆದ ಮೂರು ವರ್ಷಗಳಿಂದ ಈ ಉತ್ಸವವನ್ನು ಆಚರಿಸಲಾಗುತ್ತಿದ್ದು, ವಿಭಿನ್ನ ಕೇಕ್ ಗಳನ್ನು ವಸ್ತುಪ್ರದರ್ಶನದ ರೀತಿ ಸಿದ್ಧಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬಗೆಬಗೆಯ ಕೇಕ್ ಸವಿಯಬಹುದು ಎಂದರು.[ಕ್ರಿಸ್ಮಸ್ ವಿಶೇಷ : ವಾರ್ಷಿಕ ಕೇಕ್ ಶೋಗೆ ಬನ್ನಿ ಬನ್ನಿ!]

Two-day ‘cake festival’ to herald New Year in Mysore

ಲಾಯಲ್ ವರ್ಲ್ಡ್ ತಯಾರಿಸಿರುವ 650 ಕೆಜಿ ತೂಕದ ವಿಂಟೇಜ್ ಕಾರ್, 230 ಕೆಜಿ ತೂಕದ ದುಬೈ ಬುರ್ಜ್, ಸ್ವೀಟ್ ಪ್ಯಾಲೆಸ್‍ನ ಸ್ಪೈಡರ್ ಮ್ಯಾನ್, ಬುಕ್ ಆಕಾರದ ಕೇಕ್, ಆಂಗ್ರಿ ಬರ್ಡ್, ವಿವಿಧ ವೆಡ್ಡಿಂಗ್ ಕೇಕ್ ಗಳು, ಕಿಡ್ಸ್ ಕೇಕ್, ಬಾಬಿ ಗರ್ಲ್, ಲೆಮನ್ ಟಾಟ್ರ್ಸ್, ಕನ್ಪೆಷನರಿ ಕೇಕ್ ಗಳು, ಫ್ರೆಂಚ್ ಡ್ಯಾನಿಸಸ್, ಸ್ಟ್ರಾಬೆರಿ ಮೆಸ್ ಸೇರಿದಂತೆ ವಿಭಿನ್ನ ಬಗೆಯ ಕೇಕ್ ಗಳನ್ನು ಮಾರಾಟ ಹಾಗೂ ಪ್ರದರ್ಶನಕ್ಕಿಡಲಾಗಿತ್ತು.[ಗಿನ್ನಿಸ್ ದಾಖಲೆಗೆ ಬೆಂಗಳೂರಿನ ಜಸ್ಟ್ ಬೇಕ್ ಕೇಕ್!]

ಡಾಲ್ಫಿನ್, ಅರೋಮ, ಬಿಂದು ಬೇಕರಿ, ಶ್ರೀರಾಮ್ ಬೇಕರಿ, ಮಾಸ್ಟರ್ ಬೇಕರ್ಸ್, ವಿನಾಯಕ ಬೇಕರಿ, ಪಾಸ್ಟ್ರಿ ವರ್ಡ್ ಸೇರಿದಂತೆ 22 ಕೇಕ್ ಅಂಗಡಿಗಳು ಹಾಗೂ 5 ಟೀ ಸ್ಟಾಲ್ ಗಳನ್ನು ತೆರೆಯಲಾಗಿದೆ. ಜತೆಗೆ ಕೇಕ್ ತಿನ್ನುವ ಸ್ಪರ್ಧೆ, ಗಾಯನ ಸ್ಪರ್ಧೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

English summary
Two-day ‘cake festival’ to herald New Year in Mysore. Dubai Burj, The Sweet Palace of Spider-Man, book-shaped cake, Angry Bird Drew attention to the different types of cakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X