ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ 2 ವರ್ಷಗಳಲ್ಲಿ 21 ಅತ್ಯಾಚಾರ ಪ್ರಕರಣ ದಾಖಲು

|
Google Oneindia Kannada News

ಮೈಸೂರು, ಮೇ 16: ಮೈಸೂರಿನ ಲಿಂಗಾಬುದಿ ಪಾಳ್ಯದ ಬಳಿ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿರುವ ಪೊಲೀಸರು ಮುಂದಿನ ಮೂರು ದಿನಗಳ ಒಳಗಾಗಿ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊಬೈಲ್ ಟವರ್ ಆಧಾರದ ಮೇಲೆ ಪಡೆದುಕೊಂಡಿರುವ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡುತ್ತಿರುವ ಪೊಲೀಸರು ಶಂಕಿತರನ್ನು ಠಾಣೆಗೆ ಬರುವಂತೆ ಸೂಚನೆ ನೀಡಿ ತನಿಖೆ ಕೈಗೊಂಡಿದ್ದಾರೆ. ಅದರಲ್ಲಿ ಸ್ವಿಚ್ ಆಫ್ ಆಗಿರುವ ಮೊಬೈಲ್ ಸಂಖ್ಯೆಗಳ ವಿವರ ಹಾಗೂ ಮನೆಯ ವಿಳಾಸವನ್ನು ಪತ್ತೆ ಹಚ್ಚಿ, ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಕಣಿವೆ ರಾಜ್ಯದಲ್ಲಿ ಮತ್ತೋರ್ವ ಅಪ್ರಾಪ್ತೆಯ ಮೇಲೆ ಅತ್ಯಾಚಾರಕಣಿವೆ ರಾಜ್ಯದಲ್ಲಿ ಮತ್ತೋರ್ವ ಅಪ್ರಾಪ್ತೆಯ ಮೇಲೆ ಅತ್ಯಾಚಾರ

ಈ ವೇಳೆ ಕೆಲ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿದಾಗ ಒಂದು ವಾರದಿಂದ ತಮ್ಮ ಊರುಗಳನ್ನು ತೊರೆದು ಬೇರೆಡೆಗೆ ತೆರಳಿರುವ ಬಗ್ಗೆ ಮಾಹಿತಿ ಬಂದಿದೆ. ಪೊಲೀಸರು ಅಂಥವರ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ. ಈ ಸಂಬಂಧ ಕೆಲವರನ್ನು ಹುಡುಕುವ ಪ್ರಯತ್ನವನ್ನೂ ಖಾಕಿ ಪಡೆ ಮಾಡಿದೆ.

Twenty One rape cases have been registered in 2 years at Mysuru

ಇನ್ನು ಮೈಸೂರಿನಲ್ಲಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳೆದ 2 ವರ್ಷಗಳ ಅವಧಿಯಲ್ಲಿ ಒಟ್ಟು 21 ಅತ್ಯಾಚಾರ ಪ್ರಕರಣ ದಾಖಲೆಯಾಗಿದೆ. ಅನುಮತಿ ಇಲ್ಲದೆ ಪತ್ನಿಯನ್ನು ಕೂಡ ಪತಿ ತನ್ನ ಕಾಮತೃಷೆಗೆ ಬಳಸಿಕೊಳ್ಳುವಂತಿಲ್ಲ ಎಂಬ ಕಠಿಣ ನಿಯಮ ಜಾರಿಯಲ್ಲಿದೆ. ಅತ್ಯಾಚಾರದ ಪ್ರಕರಣ ತಡೆಗಟ್ಟಲು ಸಾಕಷ್ಟು ಕಾನೂನುಗಳಿವೆ.

ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಅತ್ಯಾಚಾರ ಸಂತ್ರಸ್ತೆಯ ಸ್ನೇಹಿತ ಚೇತರಿಕೆಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಅತ್ಯಾಚಾರ ಸಂತ್ರಸ್ತೆಯ ಸ್ನೇಹಿತ ಚೇತರಿಕೆ

ಹೀಗಿದ್ದರೂ ಕಾಮುಕರು ಮಾತ್ರ ತಮ್ಮ ಅಟ್ಟಹಾಸ ಮುಂದುವರೆಸಿದ್ದಾರೆ. ಪೊಲೀಸ್ ಇಲಾಖೆ ನೀಡಿರುವ ಅಂಕಿ ಅಂಶದ ಪ್ರಕಾರ 2017-2018ರಲ್ಲಿ 14 ಹಾಗೂ 2019ನೇ ಸಾಲಿನಲ್ಲಿ 9 ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ.

ಗಾರ್ಮೆಂಟ್ಸ್, ಕಚೇರಿ, ಸಣ್ಣಪುಟ್ಟ ಸಂಸ್ಥೆಯ ಯುವತಿಯರು, ಮಹಿಳೆಯರನ್ನು ಗುರಿಯಾಗಿಸಿಕೊಳ್ಳುವ ಕಾಮುಕರು ಮೊದಲಿಗೆ ಪರಿಚಯ ಮಾಡಿಕೊಳ್ಳುತ್ತಾರೆ. ನಂತರ ಪ್ರೀತಿಯ ನಾಟಕವಾಡಿ ಅತ್ಯಾಚಾರ ಮಾಡುತ್ತಾರೆ. ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲೂ ಕೂಡ ವಿವಾಹವಾಗುತ್ತೇನೆ ಎಂದು ನಂಬಿಸುವ ಮೂಲಕ ಅತ್ಯಾಚಾರವೆಸಗುವ ಪ್ರಕರಣಗಳೇ ಸಾಕಷ್ಟು ದಾಖಲಾಗಿದೆ.

English summary
Mysuru police, who have reported enough information on the mass rape case. They promised to arrest the accused within the next three days.Twenty One rape cases have been registered in 2 years at Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X