ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂ. 4ರಂದು ನಾನು ಕನ್ನಂಬಾಡಿ ಕಟ್ಟೆ-ಹೀಗೊಂದು ಆತ್ಮಕಥೆ ಪುಸ್ತಕ ಬಿಡುಗಡೆ

By Yashaswini
|
Google Oneindia Kannada News

ಮೈಸೂರು, ಜೂನ್ 02 : "ನಾನು ಕನ್ನಂಬಾಡಿ ಕಟ್ಟೆ-ಹೀಗೊಂದು ಆತ್ಮಕಥೆ ಪುಸ್ತಕವನ್ನು ಜೂನ್ 4ರಂದು ಲೋಕಾರ್ಪಣೆ ಮಾಡಲಾಗುತ್ತದೆ" ಎಂದು ಇತಿಹಾಸ ತಜ್ಞ ಪ್ರೊ. ಪಿ.ವಿ. ನಂಜರಾಜ ಅರಸ್ ತಿಳಿಸಿದರು.

ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ ಇತಿಹಾಸ ತಜ್ಞ ಪ್ರೊ. ಪಿ.ವಿ. ನಂಜರಾಜ ಅರಸ್, "ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಿಎಂ ಸಿದ್ದರಾಮಯ್ಯ ನಾನು ಕನ್ನಂಬಾಡಿ ಕಟ್ಟೆ-ಹೀಗೊಂದು ಪುಸ್ತಕ ಲೋಕಾರ್ಪಣೆ ಮಾಡುವರು.

ಕನ್ನಂಬಾಡಿ ಕಟ್ಟೆ ಕಟ್ಟಿದ್ದು ಸರ್.ಎಂ. ವಿಶ್ವೇಶ್ವರಯ್ಯ ಅಲ್ಲ ಎಂಬುದನ್ನು ನಿರೂಪಿಸುವ ಪುಸ್ತಕವಿದು. ಇದಕ್ಕಾಗಿ ಹಲವಾರು ದಾಖಲೆಗಳ ಸಮೇತ ಪುಸ್ತಕ ಬರೆದಿದ್ದೇನೆ ಎಂದರು.

Truth behind the construction of KRS dam book released on June 4 in Mysuru

ಕನ್ನಂಬಾಡಿ ಕಟ್ಟೆ ಕಟ್ಟಿದ್ದು ಸರ್.ಎಂ. ವಿಶ್ವೇಶ್ವರಯ್ಯ ಅಲ್ಲ ಎಂಬುದನ್ನು ನಿರೂಪಿಸುವ ಪುಸ್ತಕವಿದು. ಇದಕ್ಕಾಗಿ ಹಲವಾರು ದಾಖಲೆಗಳ ಸಮೇತ ಪುಸ್ತಕ ಬರೆದಿದ್ದೇನೆ. ಕೆ.ಆರ್.ಎಸ್. ಡ್ಯಾಂ ನಿರ್ಮಾಣ ಮಾಡಿದ್ದು ವಿಶ್ವೇಶ್ವರಯ್ಯ ಎಂಬ ತಪ್ಪು ಭಾವನೆ ಜನರಲ್ಲಿದೆ.

ಆದರೆ. ಈ ಪುಸ್ತಕದಲ್ಲಿ ಅದರ ಸತ್ಯಾನ್ವೇಷಣೆಯಿದೆ. ಇತಿಹಾಸವನ್ನು ತಿರುಚಿ ಡ್ಯಾಂ ನಿರ್ಮಾಣದ ಕಥೆ ಕಟ್ಟಲಾಗಿತ್ತು, ಆದರೆ, ಕನ್ನಂಬಾಡಿ ಆತ್ಮಕಥೆಯಲ್ಲಿ ಸತ್ಯವನ್ನು ತೆರೆದಿಟ್ಟೆದ್ದೇನೆ ಎಂದು ನಂಜರಾಜ್ ಅರಸ್ ತಿಳಿಸಿದರು.

English summary
The book containing the unknown truths behind the construction of KRS dam by historian Prof Nanjaraje Urs will be released on June 4,” said publisher Abhiruchi Ganesh. He was addressing a press meet at the Mysuru Press Club on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X