ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾದಿಂದ ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಸೇವೆ ಸ್ಥಗಿತ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 21: ಎಲ್ಲೆಡೆ ಆತಂಕ ಸೃಷ್ಟಿಸಿರುವ ಕೊರೊನಾ ಬಿಸಿ ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನ ಹಲವರ ಪಾಲಿಗೆ ಸಂಚಾರಕ್ಕೆ ನೆರವಾಗುತ್ತಿದ್ದ ಟ್ರಿಣ್ ಟ್ರಿಣ್ ಸೈಕಲ್‌ಗೂ ತಟ್ಟಿದೆ.

ಸದ್ಯ ಎಲ್ಲೆಡೆ ಕೊರೊನಾ ಸೋಂಕಿನ ಆತಂಕ ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಟ್ರಿಣ್ ಟ್ರಿಣ್ ಸೇವೆಯನ್ನು ಮಾ.31ರವರೆಗೆ ತಾತ್ಕಾಲಿಕವಾಗಿ ನಿಲ್ಲಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಕೊರೊನಾ ಭೀತಿ: ದೇಶದಲ್ಲಿ ಓಲಾ ಕ್ಯಾಬ್ ಶೇರ್ ರೈಡ್ ಸೇವೆ ಸ್ಥಗಿತಕೊರೊನಾ ಭೀತಿ: ದೇಶದಲ್ಲಿ ಓಲಾ ಕ್ಯಾಬ್ ಶೇರ್ ರೈಡ್ ಸೇವೆ ಸ್ಥಗಿತ

ನಗರದಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಟ್ರಿಣ್ ಟ್ರಿಣ್ ಸೈಕಲ್ ಸೇವೆಯನ್ನು ಆರಂಭಿಸಲಾಗಿತ್ತು. ಆದರೆ ಇದೀಗ ಎಲ್ಲೆಡೆ ಕೊರೊನಾ ಭೀತಿ ಎದುರಾಗಿರುವ ಪರಿಣಾಮ ಟ್ರಿಣ್ ಟ್ರಿಣ್ ಸೈಕಲ್‌ಗಳ ಸ್ವಚ್ಛತೆ ಕಾಪಾಡುವುದು ಕಷ್ಟವಾಗಿರುವ ಕಾರಣದಿಂದ ಸೇವೆಯನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

Trin Trin Cycle Service Temporarily Closed Due To Corona

ಹೀಗಾಗಿ ನಗರದಲ್ಲಿರುವ 450 ಟ್ರಿಣ್ ಟ್ರಿಣ್ ಸೈಕಲ್‌ಗಳು ಹಾಗೂ 52 ಹಬ್ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಸದ್ಯ ಮಾ.31ರವರೆಗೆ ಈ ಸೇವೆಯನ್ನು ನಿಲ್ಲಿಸಲು ನಿರ್ಧರಿಸಿದ್ದು, ಪರಿಸ್ಥಿತಿ ಹತೋಟಿಗೆ ಬಂದಲ್ಲಿ ಏಪ್ರಿಲ್ 1ರಿಂದ ಟ್ರಿಣ್ ಟ್ರಿಣ್ ಸೇವೆಯನ್ನು ಪುನರಾರಂಭಿಸುವ ಸಾಧ್ಯತೆ ಇದೆ.

English summary
Mysuru District administration has decided to close trin trin cycle service temporarily due to coronavirus in country,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X