ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಜಿಲ್ಲೆಯಾದ್ಯಂತ 4 ಲಕ್ಷ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಾಟ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್‌ 15: ಮನೆಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂಬ ಕೇಂದ್ರ ಸರಕಾರದ ಸೂಚನೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 250 ಗ್ರಾಪಂಗಳಿವೆ. ಪ್ರತಿ ಗ್ರಾಮ ಪಂಚಾಯಿತಿಗಳಿಗೆ 550 ಬಾವುಟಗಳನ್ನು ವಿತರಿಸುವ ಗುರಿಯನ್ನು ಜಿಲ್ಲಾ ಪಂಚಾಯಿತಿ ಇಟ್ಟುಕೊಂಡಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 4,45,000 ಮನೆಗಳಿದ್ದು, ಇಲ್ಲಿಯವರೆಗೆ 140, 800 ಬಾವುಟಗಳನ್ನು ವಿತರಣೆ ಮಾಡಲಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ 4 ಲಕ್ಷಕ್ಕೂ ಅಧಿಕ ಬಾವುಟಗಳನ್ನು ಗ್ರಾಮ ಪಂಚಾಯಿತಿ, ನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಂಚೆ ಇಲಾಖೆ ಮೂಲಕ ಬಿಡಿಸಿ ಜನರಿಗೆ ವಿತರಿಸಲಾಗಿದೆ.

Tricolor Flag Hoisted at 4 Lakhs Houses in Mysore District

" ನಗರಪಾಲಿಕೆ ವ್ಯಾಪ್ತಿಗೆ ಒಳಪಡುವ 65 ವಾರ್ಡ್‌ಗಳಿಗೂ ನಮ್ಮ ಸಿಬ್ಬಂದಿಗಳೇ ಹೋಗಿ ಬಾವುಟ ವಿತರಣೆ ಮಾಡಿದ್ದಾರೆ. ಕೆಲವರು ಪಾಲಿಕೆಗೆ ಬಂದು ಖರೀದಿಸಿದ್ದಾರೆ. ಒಟ್ಟು 1.5 ಲಕ್ಷ ಬಾವುಟಗಳನ್ನು ನಾಗರಿಕರಿಗೆ ವಿತರಿಸಲಾಗಿದೆ, ಹೊರಗಡೆಯಿಂದ ಖರೀದಿಸಿ ಬಾವುಟಗಳನ್ನು ವಿತರಣೆ ಮಾಡಲಾಗಿದೆ" ಎಂದು ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ," ತಿಳಿಸಿದ್ದಾರೆ.

ಸ್ಥಳೀಯವಾಗಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಬಾವುಟಗಳನ್ನು ಹೊಲಿಸಲು ಜಿಲ್ಲಾ ಪಂಚಾಯತಿನಿರ್ಧರಿಸಿತ್ತು. ಅದರಂತೆ ಜಿಲ್ಲೆಯಲ್ಲಿ 18 ಮಹಿಳಾ ಸ್ವಸಹಾಯ ಸಂಘಗಳು ಬಾವುಟವನ್ನು ತಯಾರಿಸಿ ವಿತರಣೆ ಮಾಡಿವೆ. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಪ್ರತಿಮನೆಯಲ್ಲೂ ತಿಂಗ ಹಾರಿಸುವ ಅಭಿಯಾನದ ಅಂಗವಾಗಿ ಇಡೀ ದೇಶದಲ್ಲಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ಆಗಸ್ಟ್‌ 13ರಿಂದ ಚಾಲನೆ ಸಿಕ್ಕಿದ್ದು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 50 ಸಾವಿರ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಹಿರಿಯ ಸಾಹಿತಿ ಎಸ್. ಎಲ್.ಭೈರಪ್ಪ ಅವರ ಮನೆಯ ಮೇಲೆ ತ್ರಿವರ್ಣ ಧ್ಚಜ ಹಾರಿಸಲಾಗಿದೆ.

Tricolor Flag Hoisted at 4 Lakhs Houses in Mysore District

18 ಕೇಂದ್ರದಲ್ಲಿ ತಯಾರಿ
ಮೈಸೂರಿನ ಎಲ್ಲಾ ತಾಲೂಕಿನಲ್ಲಿರುವ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಬಾವುಟ ತಯಾರಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರತಿ ತಾಲೂಕಿನಲ್ಲಿ ಎರಡು ಕೇಂದ್ರಗಳಂತೆ ಒಟ್ಟು 18 ಮಹಿಳಾ ಸ್ವಸಹಾಯ ಕೇಂದ್ರಗಳಲ್ಲಿ ಒಂದೂವರೆ ಲಕ್ಷ ಬಾವುಟಗಳನ್ನು ತಯಾರಿಸಿ ಅದನ್ನು ಎಲ್ಲಾ ಗ್ರಾಪಂ ಮೂಲಕ ಸಾರ್ವಜನಿಕರಿಗೆ ವಿತರಿಸಲಾಗಿದೆ. ಜಿಲ್ಲಾಡಳಿತಕ್ಕೂ ಒಂದಷ್ಟು ಬಾವುಟಗಳನ್ನು ಜಿಪಂ ವತಿಯಿಂದ ವಿತರಣೆ ಮಾಡಲಾಗಿದೆ. ಉಳಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 50 ಸಾವಿರ ಬಾವುಟಗಳನ್ನು ವಿತರಣೆ ಮಾಡಲಾಗಿದೆ.

ಎರಡು ವಿಧದ ಬೆಲೆ
ಸ್ವಸಹಾಯ ಸಂಘಗಳ ಮಹಿಳೆಯರು ಸಿದ್ಧಪಡಿಸಿಕೊಟ್ಟಿರುವ ಪ್ರತಿ ರಾಷ್ಟ್ರಧ್ವಜಕ್ಕೆ ಎರಡು ವಿಧದ ಬೆಲೆ ನಿಗದಿಪಡಿಲಾಗಿತ್ತು 16/22 ಅಳತೆಯ ಬಾವುಟಕ್ಕೆ 32 ರೂ. ಹಾಗೂ 20/30 ಅಳತೆಯ ಬಾವುಟಕ್ಕೆ 14 ನಿಗದಿಪಡಿಸಲಾಗಿತ್ತು. ಇದಲ್ಲದೆ ನಗರಪಾಲಿಕೆಯಿಂದಲೂ ಮೈಸೂರು ನಗರದ ವಿವಿಧ ಮನೆಗಳಿಗೆ ಬಾವುಟ ವಿತರಣೆ ಮಾಡಲಾಗಿತ್ತು ಇದಕ್ಕೆ 25 ರೂ. ನಿಗದಿಪಡಿಸಲಾಗಿತ್ತು.

English summary
As part of the Har Ghar Tiranga campaign, tricolor flags were hoisted in 4.4 lakhs houses in Mysore district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X