ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೃಗಾಲಯ ಪ್ರವೇಶ ಮುಕ್ತ: ಹರಿದ ಜನಸಾಗರ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಫೆಬ್ರವರಿ 3: ಒಂದು ತಿಂಗಳಿಂದ ಪ್ರವೇಶ ನಿರ್ಬಂಧ ಹೇರಲಾಗಿದ್ದ ಮೈಸೂರು ಮೃಗಾಲಯವನ್ನು ಶುಕ್ರವಾರ ಮತ್ತೆ ತೆರೆಯಲಾಗಿದೆ. ವನ್ಯಜೀವಿಗಳ ವೀಕ್ಷಣೆಗೆ ಪ್ರವಾಸಿಗರ ದಂಡು ಹರಿದು ಬಂದಿದೆ.

ವಿಶೇಷಪೂಜೆಯೊಂದಿಗೆ ಮೃಗಾಲಯವನ್ನು ಒಂದು ತಿಂಗಳ ನಂತರ ತೆರೆಯಲಾಗಿದ್ದು, ಮೃಗಾಲಯದ ಸಿಬ್ಬಂದಿಗಳಿಗೆ ಸಿಹಿ ವಿತರಿಸಲಾಯಿತು. ಕಳೆದ ಒಂದು ತಿಂಗಳಿನಿಂದ ಎಚ್5ಎನ್8 ಸೋಂಕಿನಿಂದ ಮೃಗಾಲಯದ ಪ್ರಾಣಿ ಪಕ್ಷಿಗಳಿಗೆ ಮಾರಣಾಂತಿಕ ಆಪತ್ತು ಎದುರಾಗಿದ್ದ ಹಿನ್ನೆಲೆ ಮೃಗಾಲಯವನ್ನು ಮಚ್ಚಲಾಗಿತ್ತು. ಈಗ ಸೊಂಕು ನಿಯಂತ್ರಣಗೊಂಡಿದೆ ಎಂಬ ಭೋಪಾಲ್ ಲ್ಯಾಬ್ ವರದಿ ಸಂಬಂಧ ಮತ್ತೆ ಮೃಗಾಲಯವನ್ನು ತೆರೆಯಲಾಗಿದೆ.[ಮೈಸೂರು ಮೃಗಾಲಯ ಸೋಂಕು ಮುಕ್ತ: ಕೆಲವೇ ದಿನದಲ್ಲಿ ಪ್ರವೇಶ]

Travelers freed from the mysuru zoo's entrance, over the flocks of tourists

ಸಾರ್ವಜನಿಕರ ಸಾರ್ವತ್ರಿಕ ಪ್ರವೇಶಕ್ಕೆ ಅರಣ್ಯ ಇಲಾಖೆ ಕಾರ್ಯದರ್ಶಿ ಹಾಗೂ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮತಿ ದೊರಕಿದೆ. ಹೀಗಾಗಿ ಮೃಗಾಲಯಕ್ಕೆ ಬೆಳಗ್ಗೆ 8:30ರಿಂದಲೇ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಸಂಭ್ರಮದ ವಾತಾವರಣವೂ ನಿರ್ಮಾಣವಾಗಿದೆ. ಮೊದಲ ದಿನವೇ ವಿದ್ಯಾರ್ಥಿಗಳ ದಂಡು ಹರಿದು ಬಂದಿದ್ದು, ಪ್ರಾಣಿಗಳನ್ನ ಕಂಡು ಹರ್ಷ ವ್ಯಕ್ತ ಪಡಿಸಿದರು.[ಫೆ.3 ರಿಂದ ಮೈಸೂರು ಮೃಗಾಲಯ ಪ್ರವೇಶ ಮುಕ್ತ]

Travelers freed from the mysuru zoo's entrance, over the flocks of tourists

125 ವರ್ಷಗಳ ಇತಿಹಾಸವಿರುವ ಮೈಸೂರು ಮೃಗಾಲಯಕ್ಕೆ H5N8 ವೈರಸ್‌ನಿಂದಾಗಿ ಜನವರಿ 4ರಿಂದ ಫೆಬ್ರವರಿ 2 ರವರೆಗೆ ನಿರ್ಬಂಧ ಹೇರಲಾಗಿತ್ತು. ಈ ಕಾರಣದಿಂದ ಮೃಗಾಲಯದ ಹೊರ ಆವರಣ ಮತ್ತು ಒಳ ಆವರಣಗಳನ್ನು ಶುಚಿಗೊಳಿಸಲಾಯಿತು ಇನ್ನು ಮುಂದೆ ಯಾವುದೇ ವೈರಸ್ ಸೋಂಕು ಕಾಣಿಸಿಕೊಳ್ಳದೇ ಇರಲಿ ಎನ್ನುತ್ತಾರೆ ಮೃಗಾಲಯದ ಸಿಬ್ಬಂದಿ ಹೇಮಾ.

Travelers freed from the mysuru zoo's entrance, over the flocks of tourists

ಇನ್ನು ಪ್ರವಾಸಿಗರಿಂದ ಗಿಜುಗುಡುತ್ತಿದ್ದ ಮೃಗಾಲಯದ ಸುತ್ತಮುತ್ತಲ ಹೋಟೆಲ್, ರೆಸ್ಟೋರೆಂಟ್ ಒಂದು ತಿಂಗಳಿಂದ ವ್ಯಾಪಾರವೇ ಇಲ್ಲದಂತಾಗಿತ್ತು. ಈಗ ಮತ್ತೆ ಮೃಗಾಲಯಕ್ಕೆ ಪ್ರವೇಶಾವಕಾಶ ಕಲ್ಪಿಸಿರುವ ಕಾರಣ ಪ್ರವಾಸಿಗರು ದಂಡೇ ಹರಿದು ಬರುತ್ತಿದೆ ಎನ್ನುತ್ತಾರೆ ಹೋಟೆಲ್ ಮಾಲೀಕರು.

English summary
Travelers freed from the zoo's entrance, over the flocks of tourists. A month after the start of the re- entrance of the Zoo in Mysuru. Because of the infected birds were forbidden entry to the zoo for a month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X