ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೋಲಿನೊಳಗೆ ಏನಿತ್ತು ಅಂತಾ ಕೇಳಿದರೆ ಅಚ್ಚರಿ ಪಡ್ತೀರಾ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 12: ಸಂಗೀತ ವಾದ್ಯವಾದ ಡೋಲುಗಳ ಒಳಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪದಡಿ ಇಬ್ಬರನ್ನು ಅರಣ್ಯ ಇಲಾಖೆ ಜಾಗೃತ ದಳ ಬಂಧಿಸಿ ಅಬಕಾರಿ ಇಲಾಖೆಗೆ ಒಪ್ಪಿಸಿದೆ.

ಕೊರನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್‌ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಮದ್ಯ ಮಾರಾಟಗಾರರು ಮದ್ಯ ಸಾಗಿಸಲು ಹತ್ತಾರು ದಾರಿ ಹುಡುಕುತ್ತಿದ್ದಾರೆ.

Transporting Liquor Inside A Musical Instrument At HD Kote

ಇಂದು ಎಚ್.ಡಿ ಕೋಟೆ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಉದ್ಬೂರು ಅರಣ್ಯ ಇಲಾಖೆಯ ಚೆಕ್ ಪೋಸ್ಟ್​ ಬಳಿ ಡೋಲಿನೊಂದಿಗೆ ತೆರಳುತ್ತಿದ್ದ ಇಬ್ಬರ ಮೇಲೆ ಶಂಕೆ ಉಂಟಾದ ಹಿನ್ನೆಲೆ ಅವರು ಬಳಿಯಿದ್ದ ಡೋಲನ್ನು ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿದ್ದಾರೆ.

Transporting Liquor Inside A Musical Instrument At HD Kote

ಆಗ ಖದೀಮರು ಡೋಲಿನೊಳಗೆ ಮದ್ಯ ತುಂಬಿಸಿಕೊಂಡು ವಿವಿಧ ಮಾರಾಟಗಾರರಿಗೆ ಕಳೆದ ೧೫ ದಿನಗಳಿಂದ ಸರಬರಾಜು ಮಾಡುತ್ತಿದ್ದುದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಅಬಕಾರಿ ಅಧಿಕಾರಿಗಳು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

English summary
The Forest Department has arrested two persons accused of illegally transporting liquor inside a musical instrument.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X