ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಷ್ಕರ; ಮೈಸೂರಿನಿಂದ ಹೊರಡುವ ವಿಶೇಷ ರೈಲು ವೇಳಾಪಟ್ಟಿ

|
Google Oneindia Kannada News

ಮೈಸೂರು, ಏಪ್ರಿಲ್ 8; ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕದಲ್ಲಿ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

ನೈಋತ್ಯ ರೈಲ್ವೆಯ ಮೈಸೂರು ವಲಯ ವಿಶೇಷ ರೈಲುಗಳನ್ನು ಓಡಿಸಲಿದ್ದು, ರೈಲುಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೈಸೂರಿನಿಂದ ಬೆಂಗಳೂರು, ಶಿವಮೊಗ್ಗ, ಬೀದರ್ ಸೇರಿದಂತೆ ವಿವಿಧ ಕಡೆಗಳಿಗೆ ರೈಲು ಸಂಚಾರ ನಡೆಸಲಿದೆ.

ಮೈಸೂರು-ತಾಳಗುಪ್ಪ ಹೊಸ ರೈಲು; ವೇಳಾಪಟ್ಟಿ ಮೈಸೂರು-ತಾಳಗುಪ್ಪ ಹೊಸ ರೈಲು; ವೇಳಾಪಟ್ಟಿ

ರಸ್ತೆ ಸಾರಿಗೆ ನಿಗಮದ ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಈ ಕೆಳಗಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಲಿದ್ದು, ಎಲ್ಲಾ ರೈಲುಗಳು ಸಂಪೂರ್ಣ ಕಾಯ್ದಿರಿಸಿದ ರೈಲುಗಳಾಗಿದ್ದೂ, ಇವುಗಳಿಗೆ ವಿಶೇಷ ದರಗಳು ಅನ್ವಯಿಸುತ್ತವೆ.

ಅರಸೀಕರೆ-ಮೈಸೂರು ಎಕ್ಸ್‌ಪ್ರೆಸ್ ರೈಲು; ವೇಳಾಪಟ್ಟಿ ಅರಸೀಕರೆ-ಮೈಸೂರು ಎಕ್ಸ್‌ಪ್ರೆಸ್ ರೈಲು; ವೇಳಾಪಟ್ಟಿ

Transport Employees Strike List Of Special Trains From Mysuru

* ರೈಲು ಸಂಖ್ಯೆ 06553 (3 ದಿನಗಳು) ಮೈಸೂರಿನಿಂದ 14.30 ಗಂಟೆಗೆ ಹೊರಡಲಿದ್ದು, ಕೆ. ಎಸ್. ಆರ್. ಬೆಂಗಳೂರು ನಿಲ್ದಾಣಕ್ಕೆ 17.10 ಗಂಟೆಗೆ ಆಗಮಿಸಲಿದೆ. ಏಪ್ರಿಲ್ 9, 10 ಮತ್ತು 14ರಂದು ರೈಲು ಸಂಚಾರ ನಡೆಸಲಿದೆ. ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಮತ್ತು ಕೆಂಗೇರಿಯಲ್ಲಿ ನಿಲುಗಡೆ.

ಸಾರಿಗೆ ಮುಷ್ಕರ; ವಿಶೇಷ ರೈಲುಗಳ ವೇಳಾಪಟ್ಟಿ ಸಾರಿಗೆ ಮುಷ್ಕರ; ವಿಶೇಷ ರೈಲುಗಳ ವೇಳಾಪಟ್ಟಿ

* ರೈಲು ನಂಬರ್ 06554 (3 ದಿನಗಳು) ಕೆ. ಎಸ್. ಆರ್. ಬೆಂಗಳೂರು ನಿರ್ಗಮನ 10.30 ಗಂಟೆ, ಮೈಸೂರಿಗೆ ಆಗಮನ 13.30ಗಂಟೆಗೆ. ಏಪ್ರಿಲ್ 9, 10 ಮತ್ತು 14ರಂದು ರೈಲು ಸಂಚಾರ ನಡೆಸಲಿದೆ. ನಿಲ್ದಾಣಗಳು ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ.

* ರೈಲು ಸಂಖ್ಯೆ 06555 (3 ದಿನಗಳು) ಮೈಸೂರು ನಿರ್ಗಮನ 8.25ಗಂಟೆ, ಯಶವಂತಪುರಕ್ಕೆ ಆಗಮನ11.20ಗಂಟೆ. ಏಪ್ರಿಲ್ 9, 10 ಮತ್ತು 14ರಂದು ಸಂಚಾರ. ನಿಲ್ದಾಣಗಳು ಪಾಂಡವಪುರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ, ಕೆಂಗೇರಿ ಮತ್ತು ಕೆ. ಎಸ್. ಆರ್. ಬೆಂಗಳೂರು.

* ರೈಲು ಸಂಖ್ಯೆ 06556 (3 ದಿನಗಳು) ಯಶವಂತಪುರ ನಿರ್ಗಮನ 13.15ಗಂಟೆ, ಮೈಸೂರು ಆಗಮನ 16.00ಗಂಟೆ. ಏ. 9, 10 ಮತ್ತು 14ರಂದು ಸಂಚಾರ. ನಿಲ್ದಾಣಗಳು ಕೆ. ಎಸ್. ಆರ್. ಬೆಂಗಳೂರು, ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಪಾಂಡವಪುರ.

* ರೈಲು ಸಂಖ್ಯೆ 06215 ಮೈಸೂರು ನಿರ್ಗಮನ 20 ಗಂಟೆ, ಬೀದರ್ ಆಗಮನ 12.00 (ಮರು ದಿನ) ಏಪ್ರಿಲ್ 9ರಂದು ಸಂಚಾರ. ನಿಲ್ದಾಣಗಳು ಮೈಸೂರು, ಮಂಡ್ಯ, ಕೆಂಗೇರಿ, ಕೆ.ಎಸ್.ಆರ್. ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಯಲಹಂಕ, ಧರ್ಮಾವರಂ, ಗುಂತಕಲ್, ರಾಯಚೂರು, ಕೃಷ್ಣ, ಯಾದಗಿರ, ವಾಡಿ, ಕಲಬುರಗಿ ಮತ್ತು ಬೀದರ್

* ರೈಲು ಸಂಖ್ಯೆ 06216 ಬೀದರ್ ನಿರ್ಗಮನ 14.00ಗಂಟೆಗೆ. ಮೈಸೂರು ಆಗಮನ 08.00ಗಂಟೆಗೆ (ಮರು ದಿನ). ಏಪ್ರಿಲ್ 10ರಂದು ಸಂಚಾರ. ನಿಲ್ದಾಣಗಳು ಬೀದರ್, ಕಲಬುರಗಿ, ವಾಡಿ, ಯಾದಗಿರ, ಕೃಷ್ಣ, ರಾಯಚೂರು, ಗುಂತಕಲ್, ಧರ್ಮಾವರಂ, ಯಲಹಂಕ, ಬೆಂಗಳೂರು ಕಂಟೋನ್ಮೆಂಟ್, ಕೆ.ಎಸ್.ಆರ್. ಬೆಂಗಳೂರು, ಕೆಂಗೇರಿ ಮತ್ತು ಮಂಡ್ಯ

* ರೈಲು ನಂಬರ್ 06511 ಯಶವಂತಪುರ ನಿರ್ಗಮನ 23.15ಗಂಟೆ, ಶಿವಮೊಗ್ಗ ಟೌನ್ ಆಗಮನ 06.00ಗಂಟೆಗೆ (ಮರು ದಿನ) ಏಪ್ರಿಲ್ 9ರಂದು ಸಂಚಾರ. ನಿಲ್ದಾಣಗಳು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಮತ್ತು ಭದ್ರಾವತಿ

* ರೈಲು ನಂಬರ್ 06512 ಶಿವಮೊಗ್ಗ ಟೌನ್ ನಿರ್ಗಮನ 09.00ಗಂಟೆ, ಕೆ. ಎಸ್. ಆರ್. ಬೆಂಗಳೂರು ಆಗಮನ 16.15 ಗಂಟೆಗೆ. ಏಪ್ರಿಲ್ 10ರಂದು ಸಂಚಾರ. ನಿಲ್ದಾಣಗಳು ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತಿಪಟೂರು, ತುಮಕೂರು ಮತ್ತು ಯಶವಂತಪುರ.

English summary
South western railway will run special trains from Mysuru city due to transport employees strike in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X