ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಿಕ್ಷೆ ಬೇಡಿ ಮೊಮ್ಮಗಳನ್ನು ಕಿಕ್ ಬಾಕ್ಸರ್ ಮಾಡಿದ ಮಂಗಳಮುಖಿ!

By C. Dinesh
|
Google Oneindia Kannada News

ಮೈಸೂರು, ಜನವರಿ 09; ಜೀವನದಲ್ಲಿ ಆತ್ಮವಿಶ್ವಾಸ, ಸಾಧಿಸುವ ಛಲವಿದ್ದರೆ ಏನ್ನನ್ನುಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮೈಸೂರಿನ ಮಂಗಳಮುಖಿಯೊಬ್ಬರು ಸಾಕ್ಷಿಯಾಗಿದ್ದಾರೆ. ತಾವು ಭಿಕ್ಷೆ ಬೇಡಿ ಬಂದ‌ ಹಣದಲ್ಲಿ ಮೊಮ್ಮಗಳನ್ನು ಸಾಕಿ, ಬೆಳೆಸುವ ಜೊತೆಗೆ ಆಕೆಯನ್ನು ಕಿಕ್ ಬಾಕ್ಸರ್‌ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಇನ್ನೂ ಅಜ್ಜಿಯ ಕನಸಿನಂತೆ ಕಿಕ್ ಬಾಕ್ಸಿಂಗ್‌ನಲ್ಲಿ ಮಹತ್ತರ ಸಾಧನೆ ಮಾಡಿರುವ ಬಾಲಕಿ ವಾಕೋ ಇಂಡಿಯಾ ನ್ಯಾಷನಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾಳೆ.

ಮೈಸೂರಿನ ಅಕ್ರಂ ಪಾಷ ಅಲಿಯಾಸ್ ಶಬನಾ ಎಂಬುವರೇ ಮಂಗಳಮುಖಿಯಾಗಿದ್ದು, ಭಿಕ್ಷೆ ಬೇಡಿ ಬದುಕು ಸಾಗಿಸುವ ಇವರು ಅದೇ ಹಣದಲ್ಲಿ ತಮ್ಮ ಮೊಮ್ಮಗಳು ಬೀಬಿ ಫಾತಿಮಾ ಎಂಬಾಕೆಗೆ ಕಿಕ್ ಬಾಕ್ಸಿಂಗ್ ತರಬೇತಿ ನೀಡಿದ್ದಾರೆ.

ಸಾಲಿಗ್ರಾಮ ಗ್ರಾ.ಪಂ ಅಧ್ಯಕ್ಷರಾಗಿ ಮಂಗಳಮುಖಿ ಆಯ್ಕೆಸಾಲಿಗ್ರಾಮ ಗ್ರಾ.ಪಂ ಅಧ್ಯಕ್ಷರಾಗಿ ಮಂಗಳಮುಖಿ ಆಯ್ಕೆ

Transgender Made Her Granddaughter As Kick Boxer

ಅಜ್ಜಿಯ ಕನಸಿನಂತೆ ಕಿಕ್ ಬಾಕ್ಸಿಂಗ್‌ನಲ್ಲಿ ಮೊದಲ ಹೆಜ್ಜೆಯಲ್ಲಿ ಯಶಸ್ಸು‌ ಸಾಧಿಸಿರುವ 15 ವರ್ಷದ ಫಾತಿಮಾ, ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ 'ವಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ 2021 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಅಜ್ಜಿಯ ಆಸೆಯನ್ನು ಇಮ್ಮಡಿಗೊಳಿಸಿದ್ದಾರೆ.

ಮಂಗಳಮುಖಿ ಘಟಕ ಉದ್ಘಾಟಿಸಿದ ಕೇರಳ ಕಾಂಗ್ರೆಸ್ಮಂಗಳಮುಖಿ ಘಟಕ ಉದ್ಘಾಟಿಸಿದ ಕೇರಳ ಕಾಂಗ್ರೆಸ್

ಮೈಸೂರಿನ‌ ಸಂತ ಅಂಥೋಣಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಬೀಬಿ ಫಾತಿಮಾ, ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾಳೆ. ಕಠಿಣ ಪರಿಶ್ರಮ, ಸಾಧಿಸುವ ಛಲದೊಂದಿಗೆ ಕಿಕ್ ಬಾಕ್ಸಿಂಗ್‌ನಲ್ಲಿ ಮಹತ್ತರ‌ ಸಾಧನೆ ಮಾಡುವ ಹಂಬಲ ಹೊಂದಿರುವ ಫಾತಿಮಾ, ಇದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಾ ಬಂದಿದ್ದಾಳೆ. ಮೊದಲ ಪ್ರಯತ್ನದಲ್ಲಿ ಚಿನ್ನದ ಪದಕ ಗೆದ್ದು ಕರ್ನಾಟಕದ‌ ಕೀರ್ತಿ ಹೆಚ್ಚಿಸಿರುವ ಈಕೆ ಭವಿಷ್ಯದಲ್ಲಿ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆಲ್ಲಬೇಕೆಂಬ ಆಶಯ ಹೊಂದಿದ್ದಾರೆ.

ಮಂಗಳೂರು : ರೇಡಿಯೊ ಜಾಕಿ ಆದ ಮಂಗಳಮುಖಿಮಂಗಳೂರು : ರೇಡಿಯೊ ಜಾಕಿ ಆದ ಮಂಗಳಮುಖಿ

ಆದರೆ ಎಲ್ಲ ಸಾಧಕರಿಗೆ ಎದುರಾದಂತೆ ಈಕೆಯಯ ಸಾಧನೆಗೂ ಸಾಕಷ್ಟು ಅಡೆತಡೆಗಳು ಎದುರಾಗಿವೆ.‌ ಇದರಲ್ಲಿ ಬಹುಮುಖ್ಯವಾಗಿ ಈಕೆಯ ಸಾಧನೆಗೆ ಸದ್ಯ ಆರ್ಥಿಕ ಸಂಕಷ್ಟ ಎದುರಾಗಿದೆ. ಭಿಕ್ಷೆ ಬೇಡಿದ ಹಣದಲ್ಲಿ ಫಾತಿಮಾಳಿಗೆ ವಿದ್ಯಾಭ್ಯಾಸ, ಕಿಕ್ ಬಾಕ್ಸಿಂಗ್ ತರಬೇತಿ ಕೊಡಿಸುತ್ತಿರುವ ಈಕೆಯ‌ ಅಜ್ಜಿಗೆ,‌ ಮೊಮ್ಮಗಳನ್ನು ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲು, ಕರೆದುಕೊಂಡು ಹೋಗುವ ಹಣಕಾಸಿನ‌ ಸಮಸ್ಯೆಗ ಎದುರಾಗಿದೆ. ಹೀಗಾಗಿ ಸರ್ಕಾರ ಅಥವಾ ದಾನಿಗಳು ಫಾತಿಮಾಳಿಗೆ ಆರ್ಥಿಕ ನೆರವು ನೀಡಿದರೆ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಪಟುವಾಗಿ ಬೆಳೆಯಲು ಸಹಾಯವಾಗಲಿ ಎಂದು ಫಾತಿಮಾ ಮನವಿ ಮಾಡಿಕೊಂಡಿದ್ದಾಳೆ.

ಇನ್ನೂ ತಮ್ಮ ಸಾಧನೆಗೆ ನೆರವಾದವರಿಗೂ ಕೃತಜ್ಞತೆ ತಿಳಿಸಿರುವ ಬೇಬಿ ಫಾತಿಮಾ, ತಮ್ಮ ಸಾಧನೆಗೆ ಸಹಾಯ ಮಾಡಿದ ಡಾ.ರಾಘವೇಂದ್ರ ಪ್ರಸಾದ್, ಸಪ್ತಪದಿ ಫೌಂಡೇಷನ್ ಡಾ. ಕೆ. ಶ್ರೀನಿವಾಸ್, ವೈ. ಶ್ರೀನಿವಾಸ್, ಮಧು ಹಾಗೂ ಎಲ್ಲಾ ಮೈಸೂರು ಜನತೆಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ. ತಮ್ಮ ಸಹಾಯ ಮತ್ತು ಹಾರೈಕೆ ಇದೇ ರೀತಿ ಇರಲಿ ಎಂದು ಮೈಸೂರಿಗರನ್ನ ಕೋರಿದ್ದು, ತಾನು ಗೆದ್ದಿರುವ ಚಿನ್ನದ ಪದಕವನ್ನು ಮೈಸೂರಿನ ಜನತೆಗೆ ಅರ್ಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

English summary
Mysuru transgender made her granddaughter as kick boxer. Bay Fhatima won gold medal in wako India national kickboxing championship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X