ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲು ಹಳಿ ಕಾಮಗಾರಿ:ಇಲ್ಲಿದೆ ಸಂಚಾರ ಮಾರ್ಗ ಬದಲಾದ ಮಾಹಿತಿ

|
Google Oneindia Kannada News

ಮೈಸೂರು, ಮೇ. 7:ಹಲವು ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ನೈರುತ್ಯದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಾಸವಾಗಲಿದೆ. ಕೆಲವು ಸಂಪೂರ್ಣವಾಗಿ ರದ್ದಾಗಿದ್ದರೆ, ಮತ್ತೆ ಕೆಲವು ರೈಲುಗಳು ಭಾಗಶಃ ಮತ್ತು ಕೆಲವು ಬದಲಿ ಮಾರ್ಗದಲ್ಲಿ ಸಂಚರಿಸುತ್ತಿವೆ.

ಆಂಧ್ರಪ್ರದೇಶ ಗುಳ್ಯ ಮತ್ತು ಗುಂತಕಲ್ ನಿಲ್ದಾಣದವರೆಗೆ ನಡೆಯುತ್ತಿರುವ ಜೋಡಿ ಹಳಿ ಕಾಮಗಾರಿ ಹಿನ್ನೆಲೆಯಲ್ಲಿ ಈ ಏರುಪೇರು ಉಂಟಾಗುತ್ತಿದೆ. ಇದರೊಟ್ಟಿಗೆ ಹಲವೆಡೆ ಇಂಟರ್ ಲಾಕಿಂಗ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ರೈಲು ಗಾಡಿಗಳ ಸಂಚಾರದಲ್ಲಿ ವ್ಯತ್ಯಾಸವಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ರೈಲ್ವೆ ಅಧಿಕಾರಿಗಳು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿ : ಹಳಿ ದುರಸ್ತಿ ಕಾರ್ಯ ಹಲವು ರೈಲುಗಳ ಸಂಚಾರ ರದ್ದುಹುಬ್ಬಳ್ಳಿ : ಹಳಿ ದುರಸ್ತಿ ಕಾರ್ಯ ಹಲವು ರೈಲುಗಳ ಸಂಚಾರ ರದ್ದು

ಬುಧವಾರದವರೆಗೂ (ಮೇ.8) ಸೋಲಾಪುರ - ಹಾಸನ ಎಕ್ಸ್ ಪ್ರೆಸ್ ರೈಲು, ಯಶವಂತಪುರ ಮತ್ತು ಹಾಸನ ನಡುವೆ ಭಾಗಶಃ ರದ್ದಾಗಿದೆ. ಇದರೊಟ್ಟಿಗೆ ಹಾಸನ -ಸೋಲಾಪುರ ಎಕ್ಸ್ ಪ್ರೆಸ್ ಸಂಚಾರ ಹಾಸನ ಮತ್ತು ಯಶವಂತಪುರ ಮಧ್ಯೆ ಸಂಚರಿಸುವ ರೈಲು ಮೇ.9ರವರೆಗೆ ರದ್ದಾಗಿದೆ.

Train track work is going on at Gulya to Guntakal

ಮೈಸೂರು-ಸಾಯಿನಗರ ಶಿರಡಿ ಎಕ್ಸ್ ಪ್ರೆಸ್ ರೈಲು ಮೇ 9ರವರೆಗೆ ಹಾಸನ, ಅರಸೀಕೆರೆ, ರಾಯದುರ್ಗ, ಬಳ್ಳಾರಿ, ಗದಗ ಮತ್ತು ಹೂಟಗೆ ಮಾರ್ಗವಾಗಿ ಶಿರಡಿ ತಲುಪಲಿದ್ದು, ನಿತ್ಯದಂತೆ ಮಂಡ್ಯ, ಕೆಂಗೇರಿ, ಬೆಂಗಳೂರು, ಯಲಹಂಕ, ಹಿಂದೂಪುರ, ಧರ್ಮವರಂ ಮತ್ತು ಗುಂತಕಲ್ ನಿಲ್ದಾಣದ ಮೂಲಕ ಸಂಚರಿಸುವುದಿಲ್ಲ.

ಇದೇ ರೀತಿ ಶಿರಡಿಯಿಂದ - ಮೈಸೂರಿಗೆ ಪ್ರಯಾಣಿಸಬೇಕಾಗಿದ್ದ ರೈಲು ಹಾಸನ, ಅರಸೀಕೆರೆ, ರಾಯದುರ್ಗ, ಬಳ್ಳಾರಿ ಮಾರ್ಗವಾಗಿಯೇ ಸಂಚರಿಸಿ ಮೈಸೂರು ತಲುಪಲಿದೆ. ಮೈಸೂರು - ವಾರಣಾಸಿ ಎಕ್ಸ್ ಪ್ರೆಸ್ ರೈಲು ಮೇ. 7 ಮತ್ತು ಮೇ 9ರಂದು ಗುಂತಕಲ್ ಜಂಕ್ಷನ್ ಬದಲು ವಾಡಿ, ಗುಂತಕಲ್ ಮತ್ತು ಬಳ್ಳಾರಿ ಮಾರ್ಗವಾಗಿ ಸುತ್ತಿ ಬರಲಿದೆ.

 ಹಲವು ರೈಲುಗಳ ಸಂಚಾರ ರದ್ದುಗೊಳಿಸಿದ ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರ ರದ್ದುಗೊಳಿಸಿದ ನೈಋತ್ಯ ರೈಲ್ವೆ

ಮೈಸೂರು - ಹುಬ್ಬಳ್ಳಿ ನಡುವಿನ ಹಂಪಿ ಎಕ್ಸ್ ಪ್ರೆಸ್ ರೈಲು ಮೇ 8ವರೆಗೂ ಯಶವಂತಪುರ, ಅರಸೀಕೆರೆ, ಯಶವಂತಪುರ, ಬಳ್ಳಾರಿ ಮಾರ್ಗವಾಗಿ ಸಂಚರಿಸಲಿದ್ದು, ಯಲಹಂಕ, ದೊಡ್ಡಬಳ್ಳಾಪುರ, ಗುಂತಕಲ್ ಮಾರ್ಗವಾಗಿ ಚಲಿಸುವುದಿಲ್ಲ. ಇದೇ ರೀತಿ ಹುಬ್ಬಳ್ಳಿಯಿಂದ ಬರುವ ರೈಲುಗಳು ಮೇ9ರವರೆಗೆ ಯಲಹಂಕದ ಬದಲು ಯಶವಂತಪುರದಿಂದ ಸುತ್ತಿಕೊಂಡು ಬರಲಿವೆ.

 ಬಳ್ಳಾರಿ ಮತದಾರರಿಗೆ ಆಮಿಷ ಒಡ್ಡಬೇಡಿ, ರೈಲ್ವೆ ಬೇಡಿಕೆ ಈಡೇರಿಸಿ ಬಳ್ಳಾರಿ ಮತದಾರರಿಗೆ ಆಮಿಷ ಒಡ್ಡಬೇಡಿ, ರೈಲ್ವೆ ಬೇಡಿಕೆ ಈಡೇರಿಸಿ

ಮೈಸೂರು - ಬಾಗಲಕೋಟೆ -ಮೈಸೂರು ಬಸವ ರೈಲು ಸಂಚಾರ ಮೇ 9ರವರೆಗೆ ಸ್ಥಗಿತಗೊಂಡಿದೆ. ಮೈಸೂರು - ನಿಜಾಮುದ್ದೀನ್ ಸ್ವರ್ಣ ಜಯಂತಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಮೇ 17 ಮತ್ತು 27ರಂದು ರದ್ದುಗೊಂಡಿದೆ. ಇದೇ ರೀತಿ ದೆಹಲಿಯಿಂದ ಮೈಸೂರಿಗೆ ಬರಬೇಕಿದ್ದ ಈ ರೈಲು ಮೇ 20 ಮತ್ತು 27ರಂದು ಸ್ಥಗಿತಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೈಸೂರು ಹಜರತ್ ನಿಜಾಮುದ್ದೀನ್ ಸ್ವರ್ಣ ಜಯಂತಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಮೇನಲ್ಲಿ ರದ್ದಾಗಿದೆ.ಇದೇ ರೀತಿ ಹೊಸ ದಿಲ್ಲಿಯಿಂದ ಮೈಸೂರಿಗೆ ಬರಬೇಕಾಗಿದ್ದ ರೈಲು ಮೇನಲ್ಲಿ ರದ್ದಾಗಿದೆ.

English summary
Train track work is going on at Gulya to Guntakal, Andhra pradesh.So the traffic route has changed.Here's information about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X