ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದನ್ನು ತಿಳಿಯಿರಿ; ಯಾರು ವಾಹನ ತಪಾಸಣೆ ಮಾಡಬಹುದು?

|
Google Oneindia Kannada News

ಮೈಸೂರು, ಜನವರಿ 18; ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುವ ಕುರಿತು ಜನರು ಯಾವಾಗಲೂ ಆರೋಪ ಮಾಡುತ್ತಾರೆ. ದಂಡ ಕಟ್ಟುವ ವಿಚಾರದಲ್ಲಿ ಮಾತಿನ ಚಕಮಕಿ ಮಾಮೂಲು. ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತ ನಡೆದು ಮೃತಪಟ್ಟಿರುವ ಘಟನೆಗಳು ನಡೆದಿವೆ.

ಯಾರು ವಾಹನಗಳ ತಪಾಸಣೆ ಮಾಡಬಹುದು ಎಂಬುದು ಹಲವರ ಪ್ರಶ್ನೆ. ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಾತನಾಡಿರುವ ವಿಡಿಯೋ ತುಣುಕು ಈಗ ವೈರಲ್ ಆಗಿದೆ.

'ಪೊಲೀಸ್ ಪುಷ್ಪ': ಅಲ್ಲು ಅರ್ಜುನ್ ಪುಷ್ಪ ಮೀರಿಸುವ ಪೊಲೀಸರ ರಕ್ತ ಚಂದನ ಸ್ಮಗ್ಲಿಂಗ್! 'ಪೊಲೀಸ್ ಪುಷ್ಪ': ಅಲ್ಲು ಅರ್ಜುನ್ ಪುಷ್ಪ ಮೀರಿಸುವ ಪೊಲೀಸರ ರಕ್ತ ಚಂದನ ಸ್ಮಗ್ಲಿಂಗ್!

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ. ಚಂದ್ರಗುಪ್ತ ಯಾರು ವಾಹನ ತಪಾಸಣೆ ಮಾಡಬಹುದುದ ಎಂದು ಮಾತನಾಡಿದ್ದಾರೆ.

 ಚಾಮರಾಜನಗರ: ರಸ್ತೆಯಲ್ಲಿ ರೈತರ ಒಕ್ಕಣೆ, ಕೇಳೋರಿಲ್ಲ ವಾಹನ ಸವಾರರ ಬವಣೆ! ಚಾಮರಾಜನಗರ: ರಸ್ತೆಯಲ್ಲಿ ರೈತರ ಒಕ್ಕಣೆ, ಕೇಳೋರಿಲ್ಲ ವಾಹನ ಸವಾರರ ಬವಣೆ!

Traffic Police Constable Cant Impose Fine For Traffic Rules Violation

"ಕಾನ್ಸ್‌ಟೇಬಲ್ (ಪೇದೆ)ಗಳಿಗೆ ವಾಹನ ತಪಾಸಣೆ ಮಾಡುವ ಅಧಿಕಾರ ಇಲ್ಲ. ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಮತ್ತು ಇತರ ಮೇಲಿನ ದರ್ಜೆ ಅಧಿಕಾರಿಗಳಿಗೆ ಮಾತ್ರ ವಾಹನ ತಪಾಸಣೆ ಮಾಡಿ, ದಂಡ ಹಾಕುವ, ದಂಡವನ್ನು ಸ್ವೀಕಾರ ಮಾಡುವ ಅಧಿಕಾರವಿದೆ" ಎಂದು ಡಾ. ಚಂದ್ರಗುಪ್ತ ಹೇಳಿದ್ದಾರೆ.

ನೈಟ್ ಕರ್ಫ್ಯೂ ಉಲ್ಲಂಘನೆ: ಬೆಂಗಳೂರಿನಲ್ಲಿ 318 ವಾಹನ ಜಪ್ತಿ ನೈಟ್ ಕರ್ಫ್ಯೂ ಉಲ್ಲಂಘನೆ: ಬೆಂಗಳೂರಿನಲ್ಲಿ 318 ವಾಹನ ಜಪ್ತಿ

"ಅಲ್ಲಿ ಕಾನ್ಸ್‌ಟೇಬಲ್ ನಿಂತಿದ್ದಾರೆ. ಯೂನಿಫಾರ್ಮ್ ಸಹ ಇರುವುದಿಲ್ಲ. ವಾಹನ ತಡೆದು ದಂಡ ಹಾಕುತ್ತಾರೆ ಎಂದು ನಮಗೆ ಸಹ ಕರೆಗಳು ಬರುತ್ತವೆ. ಕಾನ್ಸ್‌ಟೇಬಲ್‌ಗಳಿಗೆ ದಂಡ ಹಾಕುವ ಅಧಿಕಾರವಿಲ್ಲ. ಹಾಗೆ ಮಾಡಿದರೆ ದೂರು ಕೊಡಿ ನಾವು ಅವರನ್ನು ಅಮಾನತಿನಲ್ಲಿಡುತ್ತೇವೆ" ಎಂದರು.

"ಕಾನ್ಸ್‌ಟೇಬಲ್‌ಗಳು ದಂಡ ಹಾಕಿದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಅಧಿಕಾರ ದುರುಪಯೋಗ ಆಗುತ್ತದೆ ಎಂಬ ಕಾರಣಕ್ಕೆ ಎಲ್ಲರಿಗೂ ಈ ಅಧಿಕಾರ ನೀಡಿಲ್ಲ. ಇಂತಹ ಘಟನೆಗಳು ನಡೆದಾಗ ಜನರು ನಮ್ಮ ಗಮನಕ್ಕೆ ತಂದರೆ ನಾವು ಕ್ರಮ ಕೈಗೊಳ್ಳುತ್ತೇವೆ" ಎಂದು ಡಾ. ಚಂದ್ರಗುಪ್ತ ಭರವಸೆ ನೀಡಿದ್ದಾರೆ.

ಯಾವಾಗ ವಾಹನ ತಪಾಸಣೆ ಮಾಡಬೇಕು?; ಡಾ. ಚಂದ್ರಗುಪ್ತ ಯಾವಾಗ ವಾಹನ ತಪಾಸಣೆ ಮಾಡಬೇಕು ಎಂದು ಸಹ ಹೇಳಿದ್ದಾರೆ. ಪೀಕ್ ಅವರ್ ಹೊರತುಪಡಿಸಿ ಬೇರೆ ಸಮಯದಲ್ಲಿ ವಾಹನ ತಪಾಸಣೆ ಮಾಡಬೇಕು. ಬೆಳಗ್ಗೆ 10.30 ರಿಂದ 11.30 ಹಾಗೂ ಮಧ್ಯಾಹ್ನ 3 ರಿಂದ 5ರ ತನಕ ತಪಾಸಣೆ ಮಾಡಬೇಕು.

Recommended Video

IPLನಲ್ಲಿ ಈ ನೂತನ ತಂಡದ captain Hardik Pandya | Oneindia Kannada

ಅಪಘಾತ ವಲಯಗಳಿದ್ದರೆ ಮಾತ್ರ ಪೂರ್ಣ ಪ್ರಮಾಣ ತನಿಖೆ ಮಾಡಬೇಕು. ರಿಂಗ್ ರಸ್ತೆಯಲ್ಲಿ ವಾಹನಗಳ ವೇಗದ, ಡ್ರಿಂಕ್‌ & ಡ್ರೈವ್ ತಪಾಸಣೆಗಳನ್ನು ಮಾತ್ರ ನಡೆಸಬೇಕು. ಹೆಲ್ಮೆಟ್ ಇಲ್ಲ, ವಿಮೆ, ಆರ್‌ಸಿ ಬುಕ್‌ ತಪಾಸಣೆಗಳನ್ನು ಅಲ್ಲಿ ಮಾಡುವಂತಿಲ್ಲ.

English summary
Traffic police constable can't impose fine for traffic rules violation. Assistant sub-inspector and other rand officer have impose and collect fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X