ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ಟೌನ್ ಹಾಲ್ ಪಾರ್ಕಿಂಗ್ ಕಾಮಗಾರಿ ಮತ್ತೆ ಆರಂಭ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 09; ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮೈಸೂರು ನಗರದ ಪುರಭವನದ ಬೇಸ್ಮೆಂಟ್ ಪಾರ್ಕಿಂಗ್ ಕಟ್ಟಡ ಮತ್ತು ಹೊರಾಂಗಣ ಅಭಿವೃದ್ಧಿ ಅಪೂರ್ಣ ಕಾಮಗಾರಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ವೀಕ್ಷಣೆ ಮಾಡಿದ್ದಾರೆ.

ಸಚಿವ ಸೋಮಶೇಖರ್ ಸೋಮವಾರ ಅಪೂರ್ಣ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. "ಇಂಥ ದೊಡ್ಡ ಮಟ್ಟದ ಕಾಮಗಾರಿಯ ನಿರ್ಲಕ್ಷ್ಯ ಸರಿಯಲ್ಲ. ಕೂಡಲೇ ಉಳಿದ ಕಾಮಗಾರಿಗೆ ಟೆಂಡರ್ ಕರೆದು ಪೂರ್ಣಗೊಳಿಸಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿದರು.

 ಮೈಸೂರು ಮಹಾನಗರ ಪಾಲಿಕೆ ಬಜೆಟ್; ಉಚಿತ ವೈಫೈ, ಮಲ್ಟಿಲೆವೆಲ್ ಪಾರ್ಕಿಂಗ್ ಗೆ ಒತ್ತು ಮೈಸೂರು ಮಹಾನಗರ ಪಾಲಿಕೆ ಬಜೆಟ್; ಉಚಿತ ವೈಫೈ, ಮಲ್ಟಿಲೆವೆಲ್ ಪಾರ್ಕಿಂಗ್ ಗೆ ಒತ್ತು

ಅರಸು ರಸ್ತೆ, ಅಶೋಕ ರಸ್ತೆ ಹಾಗೂ ಸಯ್ಯಾಜಿ ರಾವ್ ರಸ್ತೆಗಳಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಪಾರ್ಕಿಂಗ್ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ 2011-12ರಲ್ಲಿ 18.28 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗಿತ್ತು. ಆದರೆ, ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಂಡಿಲ್ಲ.

ಬೆಂಗಳೂರಲ್ಲಿ ಸ್ಮಾರ್ಟ್‌ ಪಾರ್ಕಿಂಗ್ ವ್ಯವಸ್ಥೆ ಜಾರಿ; 10 ರಸ್ತೆಗಳು ಬೆಂಗಳೂರಲ್ಲಿ ಸ್ಮಾರ್ಟ್‌ ಪಾರ್ಕಿಂಗ್ ವ್ಯವಸ್ಥೆ ಜಾರಿ; 10 ರಸ್ತೆಗಳು

 Mysuru Town Hall Parking Facility Minister Directed To Complete Work

ಇದರ ಜೊತೆಗೆ ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂದು ಪಾಲಿಕೆ ಇಂಜಿನಿಯರ್‌ಗಳು ಉಸ್ತುವಾರಿ ಸಚಿವರಿಗೆ ಮಾಹಿತಿಯನ್ನು ನೀಡಿದರು. ಪುರಭವನದ ನೆಲಮಹಡಿಯ ವಿಶಾಲ ಪ್ರದೇಶದಲ್ಲಿ 600 ವಾಹನಗಳ ನಿಲುಗಡೆ ಹಾಗೂ ಒಂದು ಆ್ಯಂಪಿ ಥಿಯೇಟರ್ ನಿರ್ಮಾಣದ ಯೋಜನೆ ಉತ್ತಮವಾಗಿದೆ ಎಂದು ಸಚಿವರು ಹೇಳಿದರು.

ಮೈಸೂರಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ; ಸಾ. ರಾ. ಮಹೇಶ್, ಸೋಮಶೇಖರ್ ಭೇಟಿ! ಮೈಸೂರಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ; ಸಾ. ರಾ. ಮಹೇಶ್, ಸೋಮಶೇಖರ್ ಭೇಟಿ!

ಸಚಿವರು ಕಟ್ಟಡದ ಸದೃಢತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಇದಕ್ಕೆ ಕೆಆರ್‌ಎಸ್‌ನ ಕರ್ನಾಟಕ ತಾಂತ್ರಿಕ ಸಂಶೋಧನಾ ಕೇಂದ್ರದಿಂದ ಸದೃಢತೆ ವರದಿಯನ್ನೂ ಪಡೆದಿದ್ದಾಗಿ ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಕಾಮಗಾರಿ ತ್ವರಿತವಾಗಿ ಆಗುವುದರಿಂದ ಮೈಸೂರಿಗೆ ಆಗುವ ಅನುಕೂಲಗಳ ಬಗ್ಗೆ ಸಚಿವರು ಮಾಹಿತಿ ಪಡೆದರು.

ಕಾಮಗಾರಿ ಟೆಂಡರ್ ಮಾಡಿ, ಅದಕ್ಕೆ ತಮ್ಮಿಂದ ಆಗಬೇಕಾದ ಅನುಕೂಲವನ್ನು ಮಾಡಿಕೊಡುವುದಾಗಿ ಸಚಿವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು. ಪಾರ್ಕಿಂಗ್ ವ್ಯವಸ್ಥೆ ಒಂದೇ ಕಡೆ ಸ್ಥಳಾಂತರವಾದರೆ ರಸ್ತೆಗಳು ಸಹ ವಿಶಾಲವಾಗಿ ಕಾಣುವುದರ ಜೊತೆಗೆ ನಗರವೂ ಸುಂದರವಾಗಿ ರೂಪುಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷರಾದ ಎಚ್. ವಿ. ರಾಜೀವ್, ಪಾಲಿಕೆ ಆಯುಕ್ತರಾದ ಗುರುದತ್ತ ಹೆಗಡೆ, ಪಾಲಿಕೆಯ ಕಾರ್ಯಪಾಲಕ ಇಂಜಿನಿಯರ್ ಬಿ. ನಾಗರಾಜು ಜೊತೆಗಿದ್ದರು.

English summary
Mysuru district in-charge minister S. T. Somashekar directed officials to call tender fro complete tie Town Hall parking facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X