ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಂಸ್ಕೃತಿಕ ನಗರಿಗೆ ಹೆಚ್ಚಾದ ಪ್ರವಾಸಿಗರು; ಪುಟಿದೆದ್ದ ಪ್ರವಾಸೋದ್ಯಮ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 10: ಕೊರೊನಾ ವೈರಸ್ ಹಾಗೂ ಲಾಕ್ ಡೌನ್ ಪರಿಣಾಮದಿಂದಾಗಿ ಮೈಸೂರಿನಲ್ಲಿ ಆತಂಕಕಾರಿಯಾಗಿ ಕ್ಷೀಣಿಸಿದ್ದ ಪ್ರವಾಸೋದ್ಯಮದಲ್ಲಿ ಈಗೀಗ ಚೇತರಿಕೆ ಕಾಣುತ್ತಿದೆ.

ವಿಶ್ವ ವಿಖ್ಯಾತ ಮೈಸೂರು ಅರಮನೆ ನೋಡಲು ಪ್ರವಾಸಿಗರು ಆಗಮಿಸುತ್ತಿದ್ದು, ಪ್ರವಾಸೋದ್ಯಮ ಚೇತರಿಸಿಕೊಳ್ಳುವ ಸೂಚನೆ ದೊರೆತಿದೆ. ಕೆಲ ತಿಂಗಳ ಹಿಂದೆ ಲಾಕ್ ಡೌನ್‌ ಹೇರಿದ್ದ ಪರಿಣಾಮ ಪ್ರವಾಸೋದ್ಯಮ ಸಂಪೂರ್ಣ ಕುಸಿದಿತ್ತು. ಲಾಕ್ ಡೌನ್ ತೆರವಿನ ನಂತರವೂ ಪ್ರವಾಸಿಗರ ಸಂಖ್ಯೆ ಎರಡಂಕಿಗೆ ಇಳಿದಿತ್ತು.

ಈ ಬಾರಿಯ ಸರಳ ದಸರಾ ಆಚರಣೆ ಅರಮನೆಗೆ ಮಾತ್ರ ಸೀಮಿತ: ಏನಿರುತ್ತೆ? ಏನಿರಲ್ಲ?ಈ ಬಾರಿಯ ಸರಳ ದಸರಾ ಆಚರಣೆ ಅರಮನೆಗೆ ಮಾತ್ರ ಸೀಮಿತ: ಏನಿರುತ್ತೆ? ಏನಿರಲ್ಲ?

ಆದರೆ ಕಳೆದ ವಾರದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 10-15ರಷ್ಟು ಸುಧಾರಣೆ ಕಂಡಿದೆ. ಕೊರೊನಾ ಆತಂಕವಿದ್ದರೂ ಮೈಸೂರಿನ ಕಡೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜೊತೆಗೆ ಈ ಬಾರಿ ನಾಡಹಬ್ಬ ದಸರಾ ಹಬ್ಬವನ್ನು ಸರಳವಾಗಿ, ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ಹೀಗಿದ್ದರೂ ಪ್ರವಾಸಿಗರಿಗೆ ಅಡ್ಡಿ ಇಲ್ಲ ಎನ್ನಲಾಗಿದೆ.

Mysuru: Tourists Number Increasing Since Last Week And Tourism Recovering

Recommended Video

ನಮ್ ಹಣೆಬರಹ ಯಾವಾಗ್ಲೂ ಇಷ್ಟೇ ಬಿಡಿ.? | Oneindia Kannada

ಹೀಗಾಗಿ ಸಾಂಸ್ಕೃತಿಕ ನಗರಿಯ ಪ್ರವಾಸೋದ್ಯಮ ಚೇತರಿಕೆ ಕಾಣುವ ವಿಶ್ವಾಸ ವ್ಯಕ್ತಗೊಂಡಿದ್ದು, ಮುಂದಿನ‌ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ವೃದ್ಧಿಯಾಗುವ ಸಾಧ್ಯತೆ ಇರುವುದಾಗಿ ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಭರವಸೆ ವ್ಯಕ್ತಪಡಿಸಿದ್ದಾರೆ.

English summary
Number of tourist visiting mysuru increased since last week. Tourism recovering 10-15%,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X