ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಟೂರಿಸಂ ಸರ್ಕೀಟ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

|
Google Oneindia Kannada News

ಮೈಸೂರು, ಅಕ್ಟೋಬರ್ 05: ಪ್ರವಾಸೋದ್ಯಮಕ್ಕೆ ಸರ್ಕಾರ ಉತ್ತೇಜನ ನೀಡಿದ್ದು, ಮೈಸೂರು ಪ್ರವಾಸೋದ್ಯಮ ಸರ್ಕಿಟ್ ಶೀಘ್ರವೇ ಕಾರ್ಯರಂಭ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಅರಮನೆ ಆವರಣದ ಬಲರಾಮ ದ್ವಾರದ ಬಳಿ ನಂದಿಧ್ವಜ ಪೂಜೆಯನ್ನು ನೆರವೇರಿಸಿದರು. ನಂತರ ಪ್ರತಿಕ್ರಿಯೆ ನೀಡಿದ ಅವರು, ಮೈಸೂರು, ಹಳೇಬೀಡು, ಬೇಲೂರು ಸೋಮನಾಥಪುರ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಒಳಗೊಂಡಿದೆ. ವೆಬ್ ಸೈಟ್‌ನಲ್ಲಿ ಬುಕ್ ಮಾಡುವ ಸೌಲಭ್ಯ ಇರಲಿದೆ. ಉತ್ತರದಲ್ಲಿ ಹಂಪಿ, ದಕ್ಷಿಣದಲ್ಲಿ ಮೈಸೂರು ದಸರಾ ಟೂರಿಸ್ಟ್‌ ಸರ್ಕಿಟ್ ಅನ್ನು ಅರ್ಥಪೂರ್ಣವಾಗಿ ಮಾಡಲಾಗುತ್ತಿದೆ. ಇದರ ಅನುಭವದ ಆಧಾರದ ಮೇಲೆ ಸೂಕ್ತ ರೂಪುರೇಷೆಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮೈಸೂರು ದಸರಾ: ರೋಮಾಂಚನಕಾರಿ ಜಟ್ಟಿ ಕಾಳಗದಲ್ಲಿ ಗೆಲುವು ಯಾರಿಗೆ?ಮೈಸೂರು ದಸರಾ: ರೋಮಾಂಚನಕಾರಿ ಜಟ್ಟಿ ಕಾಳಗದಲ್ಲಿ ಗೆಲುವು ಯಾರಿಗೆ?

ಈ ಬಾರಿ ದಸರಾದಲ್ಲಿ ಎಲ್ಲಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿವೆ. ನಂದಿ ಪೂಜೆ, ಜಂಬೂ ಸವಾರಿ, ದೇವಿಯನ್ನು ಅರಮನೆಗೆ ತೆಗೆದುಕೊಂಡು ಹೋಗಿರುವುದು ಎಲ್ಲವೂ ಅರ್ಥಪೂರ್ಣವಾಗಿ, ಉತ್ಸಾಹದಿಂದ ನಡೆದಿದೆ. ಎಲ್ಲಾ ಕಾರ್ಯಕ್ರಮಗಳು ಯಶಸ್ವಿ ಆಗಿದೆ. ರಾಜ್ಯ, ದೇಶ, ವಿದೇಶದಿಂದ ಲಕ್ಷಾಂತರ ಜನರು ಬಂದು ದಸರಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಮಹಾಜನತೆ ಶಾಂತಿಯಿಂದ ನಡೆಸಿಕೊಟ್ಟಿದ್ದಕ್ಕಾಗಿ ಅಭಿನಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಮೊದಲಿನ ದಸರಾ ಸಂಭ್ರಮದ ಕಳೆ ಮೂಡಿದೆ. ಮತ್ತೊಮ್ಮೆ ಪಾರಂಪರಿಕವಾದ ವೈಭವ ನೋಡಲು ಸಾಧ್ಯವಾಗಿದೆ ಎಂದರು.

ವಿಜಯ ದಶಮಿ ಯಶಸ್ವಿ ಬಗ್ಗೆ ಸಿಎಂ ಹೇಳಿದ್ದೇನು

ವಿಜಯ ದಶಮಿ ಯಶಸ್ವಿ ಬಗ್ಗೆ ಸಿಎಂ ಹೇಳಿದ್ದೇನು

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಸಕರು, ಸಂಸದರು, ಆಡಳಿತ ವರ್ಗದವರು ಸಹಕರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಮೈಸೂರಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿತ್ತು. ನಾಡಹಬ್ಬ, ದೇವಿ ಆರಾಧನೆ ಈ ಪರಂಪರೆಯ ಮುಂದಿನ ದಿನಗಳಲ್ಲಿಯೂ ವಿಜೃಂಭಣೆಯಿಂದ ನಡೆಯಲಿ. ಬಹುಜನರ ಬೇಡಿಕೆಯ ಮೇರೆಗೆ ದಸರಾ ದೀಪಾಲಂಕಾರವನ್ನು ಹತ್ತು ದಿನಗಳ ಕಾಲ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿತ್ತು ಎಂದರು.

ಪರೋಪಕಾರಿ ಗುಣಗಳನ್ನು ರೂಡಿಸಿಕೊಳ್ಳಬೇಕು

ಪರೋಪಕಾರಿ ಗುಣಗಳನ್ನು ರೂಡಿಸಿಕೊಳ್ಳಬೇಕು

ಈ ದಿನ ತಾಯಿ ಚಾಮುಂಡೇಶ್ವರಿ ಮಹಿಷಾಸುರನ ಮೇಲೆ ಸುದೀರ್ಘ ಯುದ್ಧ ಮಾಡಿ ವಿಜಯ ಸಾಧಿಸಿದ ದಿನವಾಗಿದೆ. ಇದರ ಅರ್ಥ ದುಷ್ಟ ಶಕ್ತಿಗಳ ಮೇಲೆ ಶಿಷ್ಟರ ವಿಜಯ ಎಂದಿದೆ. ಇದನ್ನು ಅರ್ಥ ಮಾಡಿಕೊಂಡು ನಮ್ಮ ಬದುಕಿನಲ್ಲಿ ಇವುಗಳನ್ನು ಅಳವಡಿಸಿಕೊಳ್ಳಬೇಕಿದೆ. ನಮ್ಮಲ್ಲಿರುವ ತಾಮಸ ಗುಣಗಳನ್ನು ಸಂಪೂರ್ಣವಾಗಿ ವಧೆ ಮಾಡಿ ಶ್ರೇಷ್ಠ ವಾದ, ಪರೋಪಕಾರಿ ಗುಣಗಳನ್ನು ರೂಢಿಸಿಕೊಂಡಾಗ ಮಾತ್ರ ಮನುಕುಲ ಉದ್ದಾರ ಆಗುತ್ತದೆ. ಇಂತಹ ಶಕ್ತಿಯನ್ನು ದೇವಿ ನೀಡಲಿ. ಉತ್ತಮ ಮಳೆ ಆಗಿ ರೈತರ ಬೆಳೆಗಳು ಸಮೃದ್ಧಿ ಆಗಲಿ. ಸಕಲ ಕನ್ನಡ ನಾಡಿಗೆ, ಜನತೆಗೆ ಮಂಗಳವಾಗಲಿ, ಸುಭಿಕ್ಷವಾಗಲಿ. ಎಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಬಾಳಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ವಿಜಯದಶಮಿ ಸಂಭ್ರಮ ಮುಕ್ತಾಯ

ವಿಜಯದಶಮಿ ಸಂಭ್ರಮ ಮುಕ್ತಾಯ

ಇನ್ನು ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿಗೆ ವರ್ಣರಂಜಿತ ತೆರೆಬಿದ್ದಿದೆ. ಮೈಸೂರಲ್ಲಿ ವಿಜಯದಶಮಿ ಸಂಭ್ರಮ ಸಮಾಪ್ತಿ ಆಗಿದ್ದು, ಎರಡು ವರ್ಷ ನಂತರ ಚಿನ್ನದ ಅಂಬಾರಿ ಹಾಗೂ ಜಂಬೂ ಸವಾರಿ ನೋಡಿ ಅಪಾರ ಭಕ್ತರು ಪುನೀತರಾಗಿದ್ದಾರೆ. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಆಗಿದ್ದ ಜಂಬೂ ಸವಾರಿ ಕಾರ್ಯಕ್ರಮ ಅರಮನೆ ಆವರಣದಲ್ಲಿ ಸಾಂಪ್ರದಾಯಕವಾಗಿ ಜರುಗಿತ್ತು.

ದಸರಾದ ಕೇಂದ್ರ ಬಿಂದು ಆಗಿದ್ದ ಜಂಬೂ ಸವಾರಿ

ದಸರಾದ ಕೇಂದ್ರ ಬಿಂದು ಆಗಿದ್ದ ಜಂಬೂ ಸವಾರಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರಮನೆಯ ಬಲರಾಮ ದ್ವಾರದ ಬಳಿ ಮಧ್ಯಾಹ್ನ 2:36ರಿಂದ 2:50 ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ದಸರಾ ಮಹೋತ್ಸವದ ಕೇಂದ್ರ ಬಿಂದು ಜಂಬೂ ಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿಯ ವಿಗ್ರಹವನ್ನು ಅಭಿಮನ್ಯು ಹೊತ್ತಿತ್ತು. ಅಭಿಮನ್ಯು ತನ್ನ ಸಂಗಾತಿಗಳಾದ ಕಾವೇರಿ ಹಾಗೂ ಚೈತ್ರ ಜೊತೆಗೆ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತ ಸಂಜೆ 5:37ಕ್ಕೆ ವಿಶೇಷ ವೇದಿಕೆಗೆ ಆಗಮಿಸಿತ್ತು.

English summary
Chief Minister Basavaraja Bommai said, government given encouragement to tourism, Mysuru tourism circuit will be start soon. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X