ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

8 ದಿನಗಳ ಟೂರ್ ಆಫ್ ನೀಲಗಿರೀಸ್ 2018ಕ್ಕೆ ಮೈಸೂರಿನಲ್ಲಿ ಚಾಲನೆ

|
Google Oneindia Kannada News

ಮೈಸೂರು, ಡಿಸೆಂಬರ್ 09: ರೈಡ್ ಎ ಸೈಕಲ್ ಫೌಂಡೇಷನ್‍ನ ವಾರ್ಷಿಕ ಕಾರ್ಯಕ್ರಮ ಟೂರ್ ಆಫ್ ನೀಲಗಿರೀಸ್ 2018 (ಟಿಎಫ್‍ಎನ್ 2018) ಅನ್ನು ಇಂದು ಮೈಸೂರಿನ ಹೋಟಲ್ ರಿಯೋ ಮೆರಿಡಿಯನ್ ನಿಂದ ಡಾ. ಎ. ಸುಬ್ರಹ್ಮಣ್ಯೇಶ್ವರ ರಾವ್, ಐಪಿಎಸ್, ಪೊಲೀಸ್ ಆಯುಕ್ತರು, ಮೈಸೂರು ನಗರ ಚಾಲನೆ ನೀಡಿದರು.

ಮೈಸೂರಿನಲ್ಲಿ ಆರಂಭವಾಗಲಿರುವ ಸೈಕ್ಲಿಸ್ಟ್ ಗಳು ಹಾಸನ, ಕುಶಾಲನಗರ, ಸುಲ್ತಾನ್ ಬತೇರಿ, ಉದಕಮಂಡಲ (ಊಟಿ), ಕಲ್ಪೆಟ್ಟ ಮಾರ್ಗವಾಗಿ ಸಾಗಿ ಮೈಸೂರಿಗೆ ಮರಳುತ್ತಾರೆ.

11ನೇ ಆವೃತ್ತಿ ಟೂರ್ ಆಫ್ ನೀಲಗಿರೀಸ್ (ಟಿಎಫ್‍ಎನ್) ಜರ್ಸಿ11ನೇ ಆವೃತ್ತಿ ಟೂರ್ ಆಫ್ ನೀಲಗಿರೀಸ್ (ಟಿಎಫ್‍ಎನ್) ಜರ್ಸಿ

ಮೊದಲ ದಿನ ಸೈಕ್ಲಿಸ್ಟ್ ಗಳು ಕೆ ಆರ್ ನಗರ ಹಾಗೂ ಹೊಳೆನರಸಿಪುರ ಮೂಲಕ 125 ಕಿ.ಮೀ ಪೆಡಲ್ ಮಾಡಿ ಹಾಸನ ತಲುಪುತ್ತಾರೆ, ರಾತ್ರಿ ಹಾಸನದಲ್ಲಿ ತಂಗಿ 2ನೇ ದಿನ ಕುಶಾಲನಗರಕ್ಕೆ ಪೆಡಲ್ ಮಾಡುತ್ತಾರೆ. 8ನೇ ದಿನ ಸೈಕ್ಲಿಸ್ಟ್ ಗಳು ಕಲ್ಪೆಟ್ಟದಿಂದ ಮೈಸೂರಿಗೆ 133 ಕಿ.ಮೀ ಪೆಡಲ್ ಮಾಡುವ ಮೂಲಕ ಪ್ರವಾಸವನ್ನು ಪೂರ್ಣಗೊಳಿಸುತ್ತಾರೆ.

ಕರ್ನಾಟಕ, ಕೇರಳ ಹಾಗೂ ತಮಿಳುನಾಡುಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದ, ನೀಲಗಿರೀಸ್ ಬಯೋಸ್ಪೇರ್ ರಿಸರ್ವ್‍ನಲ್ಲಿ ಈ ಪ್ರಯಾಣ ಸಾಗಲಿದೆ. 13 ದೇಶಗಳಿಂದ 29 ಅಂತಾರಾಷ್ಟ್ರೀಯ ರೈಡರ್ ಗಳು ಹಾಗೂ 18 ಮಹಿಳಾ ರೈಡರ್ ಗಳು ಸೇರಿದಂತೆ ಈ ಭವ್ಯ ಪ್ರಯಾಣದಲ್ಲಿ 110 ಸೈಕ್ಲಿಸ್ಟ್ ಗಳು ಇರಲಿದ್ದಾರೆ.

8 ದಿನಗಳ ಬೃಹತ್ ಪ್ರವಾಸ

8 ದಿನಗಳ ಬೃಹತ್ ಪ್ರವಾಸ

ರೈಡ್ ಎ ಸೈಕಲ್ ಫೌಂಡೇಷನ್‍ನ ವಾರ್ಷಿಕ ಕಾರ್ಯಕ್ರಮ ಟೂರ್ ಆಫ್ ನೀಲಗಿರೀಸ್ 2018 (ಟಿಎಫ್‍ಎನ್ 2018) ಅನ್ನು ಇಂದು ಮೈಸೂರಿನ ಹೋಟಲ್ ರಿಯೋ ಮೆರಿಡಿಯನ್ ನಿಂದ ಡಾ. ಎ. ಸುಬ್ರಹ್ಮಣ್ಯೇಶ್ವರ ರಾವ್, ಐಪಿಎಸ್, ಪೊಲೀಸ್ ಆಯುಕ್ತರು, ಮೈಸೂರು ನಗರ ಚಾಲನೆ ನೀಡಿದರು.

8 ದಿನಗಳ ಬೃಹತ್ ಪ್ರವಾಸದಲ್ಲಿ 110 ಸೈಕ್ಲಿಸ್ಟ್‍ಗಳು 950+ ಕಿಲೋಮೀಟರ್ ಪೆಡಲ್ ಮಾಡಲಿದ್ದಾರೆ

ವಿಶ್ವಮಟ್ಟದ ಸೈಕ್ಲಿಸ್ಟ್ ಗಳು ಭಾಗಿ

ವಿಶ್ವಮಟ್ಟದ ಸೈಕ್ಲಿಸ್ಟ್ ಗಳು ಭಾಗಿ

ಇಂಡಿಯಾ ಎಂಟಿಬಿ ಹಾಲಿ ಚಾಂಪಿಯನ್ ಕಿರಣ್ ಕುಮಾರ್ ರಾಜು ಮತ್ತು ಇಂಡಿಯಾ ರೋಡ್ ಮಾಜಿ ಚಾಂಪಿಯನ್ ನವೀನ್ ಜಾನ್ ಟೂರ್ ಆಫ್ ನೀಲಗಿರೀಸ್ 2018ರಲ್ಲಿ ಪೆಡಲ್ ಮಾಡಲಿದ್ದಾರೆ. 1984ರ ಒಲಿಂಪಿಕ್‍ನ ರೋಡ್ ಸೈಕ್ಲಿಂಗ್ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ಭಾರತ ಸಂಜಾತ ಅಮೆರಿಕದ ಅಲೆಕ್ಸಿ ಗ್ರೆವಾಲ್, 2017ರ ಟಿಎಫ್‍ಎನ್ ಟೂರ್ ನಲ್ಲಿ ಪಾಲ್ಗೊಂಡಿದ್ದರು. ಇದೀಗ ಈ ಆವೃತ್ತಿಯಲ್ಲಿ ಸ್ವಯಂ ಸೇವಕರಾಗಿ ಪಾಲ್ಗೊಳ್ಳುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಹಾತೊರೆಯುತ್ತಿರುವ ಯುವ ಪ್ರತಿಭಾನ್ವಿತ ರೈಡರ್ ಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಹಲವಾರು ಚಾರಿಟಿಗೆ ಕೊಡುಗೆ

ಹಲವಾರು ಚಾರಿಟಿಗೆ ಕೊಡುಗೆ

ಸಮಾಜಕ್ಕೆ ತಮ್ಮ ಕೊಡುಗೆ ನೀಡಲು ಹಲವು ಸೈಕ್ಲಿಸ್ಟ್ ಗಳು ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ವಿಶೇಷ ಅಂದರೆ ಚಾರಿಟಿಗಾಗಿ ಪ್ರತಿವರ್ಷ ನೋಂದಣಿ ಮಾಡುಕೊಳ್ಳುತ್ತಿರುವ ರೈಡರ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಬೆಂಗಳೂರಿನ ಸೀತಾ ಭತೆಜಾ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರಿನ ಇಕ್ಷಾ ಫೌಂಡೇಷನ್, ಉತ್ತರಾಖಂಡ್‍ನ ಟೋನ್ಸ್ ವಾಲಿ ಕಮುನಿಟಿ ಹೆಲ್ತ್ ಸೆಂಟರ್ ಆಫ್ ಕಲಪ ಟ್ರಸ್ಟ್, ಗುಂಡಲೂರಿನ ವಿದ್ಯೋದಯ ಸ್ಕೂಲ್, ತಮಿಳುನಾಡು ಹೊಸೂರಿನ ಕೆನ್ನೆಥ್ ಆ್ಯಂಡರ್ಸನ್ ನೇಚರ್ ಸೋಸೈಟಿ ಮತ್ತು ಹೈದರಾಬಾದ್‍ನ ಆದಿತ್ಯ ಮೆಹ್ತಾ ಫೌಂಡೇಷನ್ ಸಂಸ್ಥೆಗಳು 2018ರ ಟಿಎಫ್‍ಎನ್‍ನಲ್ಲಿ ಕೆಲವು ರೈಡರ್ ಗಳಿಂದ ಚಾರಿಟಿ ಪಡೆಯಲಿದ್ದಾರೆ.

ಆರ್ ಎಸಿ ಎಫ್ ಲಾಭರಹಿತ ಸಂಸ್ಥೆ

ಆರ್ ಎಸಿ ಎಫ್ ಲಾಭರಹಿತ ಸಂಸ್ಥೆ

ಆರ್‍ಎಸಿ-ಎಫ್ ಲಾಭಗಳಿಸುವ ಉದ್ದೇಶ ಹೊಂದಿರುವ ಸಂಸ್ಥೆಯಲ್ಲ. ಸೈಕ್ಲಿಂಗ್ ಜನಪ್ರಿಯಗೊಳಿಸುವ ಆರಾಮವಾಗಿ ಸಾಮಾಜಿಕ ಬದಲಾವಣೆ, ಬಯಸುತ್ತಿರುವ ಸಂಸ್ಥೆ ರಾಷ್ಟ್ರದಲ್ಲಿ ಸೈಕಲ್ ಕ್ರಾಂತಿ ಪರಿಚಯಿಸುವ ಮೂಲಕ ದೈನಂದಿನ ಸಾಗಣೆ, ಸವಾರಿಗೆ, ಅದನ್ನು ಜನಪ್ರಿಯ ಮಾಡುವುದಾಗಿದೆ. ಆರ್‍ಎಸಿ-ಎಫ್ ಸೈಕಲ್ ಪ್ರೇಮಿಗಳು, ಸೈಕಲ್ ತಯಾರಕರು, ಸೈಕ್ಲಿಂಗ್ ಸಮುದಾಯ ಹಾಗೂ ಸರ್ಕಾರದ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದೆ. ಅನೇಕ ವರ್ಷಗಳಿಂದ ಪ್ರತಿಷ್ಠಾನ ಟೂರ್ ಆಫ್ ನೀಲಗಿರೀಸ್, ನಮ್ಮ ಸೈಕಲ್, ಸೈಕಲ್ ರೀಸೈಕಲ್, ಸಹಾಯಕ ಚಟುವಟಿಕೆಗಳಲ್ಲಿ ತೊಡಗಿದೆ.

17 ಮಹಿಳಾ ಸೈಕ್ಲಿಸ್ಟ್ ಗಳು ಭಾಗಿ

17 ಮಹಿಳಾ ಸೈಕ್ಲಿಸ್ಟ್ ಗಳು ಭಾಗಿ

ಡೆನ್ಮಾರ್ಕ್ ನಿಂದ 7 ಸೈಕ್ಲಿಸ್ಟ್ ‍ಗಳು, ಅಮೆರಿಕದಿಂದ 4, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಇಂಗ್ಲೆಂಡ್‍ನಿಂದ ತಲಾ ಮೂರು, ಬೆಲ್ಜಿಯಂ ಮತ್ತು ಕೆನಡಾದಿಂದ ತಲಾ 2, ಆಸ್ಟ್ರಿಯಾ, ಗ್ರೀಸ್, ಮಲೇಷ್ಯಾ, ಫಿಲಿಫೈನ್ಸ್ ಮತ್ತು ಪೊಲೇಂಡ್ ನಿಂದ ತಲಾ ಒಬ್ಬ ಸೈಕ್ಲಿಸ್ಟ್‍ಗಳು ಈ ಬಾರಿ ಕಣದಲ್ಲಿದ್ದಾರೆ. ಹಾಲಿ ವರ್ಷ ದಾಖಲೆಯ ಅಂತಾರಾಷ್ಟ್ರೀಯ ರೈಡರ್ ‍ಗಳನ್ನು ಟಿಎಫ್ ‍ಎನ್ ಆಕರ್ಷಿಸುವುದರೊಂದಿಗೆ, ದೇಶ ಹಾಗೂ ವಿದೇಶದಿಂದ 17 ಮಹಿಳಾ ಸೈಕ್ಲಿಸ್ಟ್ ‍ಗಳು ಸ್ಪರ್ಧೆ ಮಾಡುತ್ತಿದ್ದಾರೆ

English summary
The annual flagship event of RideACycle Foundation (RAC-F) - Tour of Nilgiris 2018 (TfN 2018) – was flagged-off today from Hotel Rio Meridian, Mysuru by Dr. A. Subrahmanyeswara Rao, IPS, Commissioner of Police, Mysuru City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X