ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಷ್ಠಿತ ಕ್ಷೇತ್ರ : ಹಳೆ ಹುಲಿ, ಹೊಸಮುಖಗಳ ಮೈಸೂರು

|
Google Oneindia Kannada News

ಮೈಸೂರು, ಏ.3 : ರಾಜ್ಯದ ಜನರ ಕುತೂಹಲ ಕೆರಳಿಸಿರುವ ಕ್ಷೇತ್ರದಲ್ಲಿ ಮೈಸೂರು ಲೋಕಸಭಾ ಕ್ಷೇತ್ರವೂ ಒಂದು. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದ್ದರೆ, ಹೊಸ ಮುಖವನ್ನು ಕಣಕ್ಕಿಳಿಸಿರುವ ಜೆಡಿಎಸ್ ಸಹ ಇಬ್ಬರಿಗೂ ಪೈಪೋಟಿ ನೀಡಲು ಕಾರ್ಯತಂತ್ರ ರೂಪಿಸಿದೆ.

ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಸಂಸದ ವಿಶ್ವನಾಥ್, ಬಿಜೆಪಿಯಿಂದ ಪತ್ರಕರ್ತ ಪ್ರತಾಪ್ ಸಿಂಹ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಜೆಡಿಎಸ್ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಘೋಷಿಸಿತ್ತು ಅದರಂತೆ ನಿವೃತ್ತ ಉಪ ಲೋಕಾಯುಕ್ತ ನ್ಯಾ.ಚಂದ್ರಶೇಖರಯ್ಯ ಅವರು ಸ್ಪರ್ಧಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಪದ್ಮಮ್ಮ ಕಣಕ್ಕೆ ಇಳಿದ್ದಾರೆ.

mysore

ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲಿ ಎರಡನೇ ಬಾರಿ ಜಯಗಳಿಸಲು ಎಚ್.ವಿಶ್ವನಾಥ್ ಭರ್ಜರಿ ಪ್ರಚಾರ ನಡೆಸಿದ್ದಾರೆ. ಹಲವಾರು ಗೊಂದಲಗಳ ನಂತರ ಬಿಜೆಪಿ ಪ್ರತಾಪ್ ಸಿಂಹ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿ ಸ್ಥಳೀಯ ನಾಯಕರಲ್ಲಿ ಅಚ್ಚರಿ ಮತ್ತು ಅಸಮಾಧಾನ ಮೂಡಿಸಿತ್ತು. ಆದರೆ, ಅದು ಈಗ ಬಗೆಹರಿದಿದ್ದು, ಎಲ್ಲರೂ ಒಗ್ಗಟ್ಟಾಗಿ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್ ಅವರನ್ನು ಮೈಸೂರಿನಿಂದ ಅಭ್ಯರ್ಥಿಯಾಗಿಸಲು ಜೆಡಿಎಸ್ ನಡೆಸಿದ ಯತ್ನ ಫಲ ನೀಡಿಲ್ಲ. ಆದ್ದರಿಂದ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಹೇಳಿದ ನಾಯಕರು ಕೊನೆ ಕ್ಷಣದಲ್ಲಿ ನಿವೃತ್ತ ಉಪ ಲೋಕಾಯುಕ್ತ ನ್ಯಾ.ಚಂದ್ರಶೇಖರಯ್ಯ ಅವರನ್ನು ಕಣಕ್ಕಿಳಿಸಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ನಡೆಯಲಿದೆ ಎಂದು ಕ್ಷೇತ್ರದ ಜನರು ವಿಶ್ಲೇಷಿಸುತ್ತಿದ್ದಾರೆ. [ಮೈಸೂರು ಕ್ಷೇತ್ರದ ಸಂಕ್ಷಿಪ್ತ ಪರಿಚಯ]

ಪ್ರತಾಪ್ ಸಿಂಹ
ಪತ್ರಿಕೋದ್ಯಮದಿಂದ ನೇರವಾಗಿ ಚುನಾವಣೆ ಕಣಕ್ಕೆ ಇಳಿದಿದ್ದಾರೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ. ಪತ್ರಿಕೋದ್ಯಮದಲ್ಲಿ ಗಳಿಸಿರುವ ಜನಪ್ರಿಯತೆ ಮತ್ತು 'ಅಬ್ ಕಿ ಬಾರ್ ಮೋದಿ ಸರ್ಕಾರ್' ಎಂಬ ಮಂತ್ರವು ಪ್ರತಾಪ್ ಸಿಂಹ ಅವರ ಬೆಂಬಲಕ್ಕಿದೆ. ಮೊದಲ ಚುನಾವಣೆಯಲ್ಲಿಯೇ ಎಚ್.ವಿಶ್ವನಾಥ್ ರಂತಹ ನಾಯಕರಿಗೆ ಪೈಪೋಟಿ ನೀಡುತ್ತಿದ್ದಾರೆ. ಪ್ರತಾಪ್ ಸಿಂಹ ಅಭ್ಯರ್ಥಿಯಾಗಿ ಘೋಷಣೆಯಾದಾಗ ಸ್ಥಳೀಯ ಕಾರ್ಯಕರ್ತರಲ್ಲಿ ಉಂಟಾಗಿದ್ದ ಗೊಂದಲ ಈಗ ಬಗೆಹರಿದಿದ್ದು, ಎಲ್ಲರೂ ಒಗ್ಗಟ್ಟಾಗಿ ಪ್ರಚಾರ ಕಣಕ್ಕೆ ಧುಮುಕಿದ್ದಾರೆ.

ಎಚ್.ವಿಶ್ವನಾಥ್
2009ರ ಚುನಾವಣೆಯಲ್ಲಿ ಜಯಗಳಿಸಿದ್ದ ಅಡಗೂರು ಎಚ್.ವಿಶ್ವನಾಥ್ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಪುನಃ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿರುವ ವಿಶ್ವನಾಥ್ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ಪುಸ್ತಕಗಳನ್ನು ಬರೆಯುವ ಮೂಲಕ ಅಕ್ಷರ ಕೃಷಿ ಮಾಡುತ್ತಿರುವ ವಿಶ್ವನಾಥ್ ಪ್ರತಾಪ್ ಸಿಂಹ ಅವರಂತೆ ಬರಹಗಾರರು ಹೌದು. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಈ ಬಾರಿ ಗೆಲುವು ಸಾಧಿಸಿ ಕ್ಷೇತ್ರವನ್ನುಕೈವಶ ಮಾಡಿಕೊಳ್ಳುತ್ತೇನೆ ಎಂಬ ವಿಶ್ವಾಸದಿಂದಲೇ ಸ್ಪರ್ಧೆಗೆ ಇಳಿದಿದ್ದಾರೆ.

ನ್ಯಾ.ಚಂದ್ರಶೇಖರಯ್ಯ
ಮಾಜಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದಂತೆ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್‌ನ ಅಚ್ಚರಿಯ ಅಭ್ಯರ್ಥಿ ಹೆಸರು ಘೋಷಣೆ ಮಾಡಿದೆ. ನಾಮಪತ್ರ ಸಲ್ಲಿಕೆಯ ಕೊನೆ ದಿನ ನಿವೃತ್ತ ಉಪ ಲೋಕಾಯುಕ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಉಮೇದುವಾರಿಕೆ ಸಲ್ಲಿಸಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಜಾಫರ್ ಷರೀಫ್ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸುವ ಪಕ್ಷದ ಲೆಕ್ಕಾಚಾರ ಉಲ್ಟಾ ಆಗಿದೆ. ಪ್ರತಾಪ್ ಸಿಂಹ, ವಿಶ್ವನಾಥ್ ನಡುವೆ ಪೈಪೋಟಿ ನೀಡಲು ಚಂದ್ರಶೇಖರಯ್ಯ ಸಿದ್ಧವಾಗಿದ್ದಾರೆ.

ಎಂ.ವಿ.ಪದ್ಮಮ್ಮ
ಕ್ಷೇತ್ರದಲ್ಲಿ ಆಮ್ ಅದ್ಮಿ ಪಕ್ಷದ ಅಭ್ಯರ್ಥಿಯಾಗಿ ಎಂ.ವಿ.ಪದ್ಮಮ್ಮ ಕಣಕ್ಕಿಳಿದಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಪ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿರುವ 59 ವರ್ಷದ ಪದ್ಮಮ್ಮ ಅವರು ಚುನಾವಣಾ ರಾಜಕೀಯಕ್ಕೆ ತೀರಾ ಹೊಸಬರು. 2006ರಲ್ಲಿ ನಿವೃತ್ತಿ ಪಡೆದ ಬಳಿಕ ರಕ್ತದಾನ ಶಿಬಿರಗಳ ಆಯೋಜನೆ, ಸಸಿ ನೆಡುವುದು ಸೇರಿದಂತೆ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪದ್ಮಮ್ಮ ಅವರು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

English summary
Elections 2014 : Mysore Lok Sabha constituency to witness for big fight between BJP and Congress candidate. Journalist Pratap Simha is BJP candidate in constituency. H Vishwanath is Congress candidate and Justice Chandrashekaraiah is JDS candidate, AAP has fielded a retired Bank bank employe Padmamma for the seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X