ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಪ್ರತಿಭಟನೆಗೆ ಸೀಮಿತವಾದ ಇಂದಿನ ಭಾರತ್ ಬಂದ್

|
Google Oneindia Kannada News

ಮೈಸೂರು, ಜನವರಿ 9 : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ರಾಜ್ಯದಲ್ಲಿ ನೀರಸ ಪತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಮುಷ್ಕರ ಬರೀ ಪ್ರತಿಭಟನೆಗೆ ಸೀಮಿತವಾಗಿರಲಿದೆ ಎನ್ನಲಾಗಿದೆ.

ಭಾರತ್ ಬಂದ್ LIVE: ಬಿಎಂಟಿಸಿ ಬಸ್ ಸಂಪೂರ್ಣ ಸ್ಥಗಿತಭಾರತ್ ಬಂದ್ LIVE: ಬಿಎಂಟಿಸಿ ಬಸ್ ಸಂಪೂರ್ಣ ಸ್ಥಗಿತ

ಬಹುತೇಕ ಎಲ್ಲಾ ಸೇವೆಗಳೂ ಲಭ್ಯವಿದ್ದು, ಮೈಸೂರಿನಲ್ಲಿ ಶಾಲಾಕಾಲೇಜುಗಳು ಇಂದು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.

Todays Bharat Bandh is limited to protest in Mysuru

ಟ್ಯಾಕ್ಸಿ, ಓಲಾ, ಉಬರ್ ಸೇವೆ ಲಭ್ಯವಿರಲಿದೆ ಎಂದು ಚಾಲಕರು, ಮಾಲೀಕರ ಸಂಸ್ಥೆ ಮಾಹಿತಿ ನೀಡಿದ್ದು, ಪೆಟ್ರೋಲ್ ಬಂಕ್, ಮಾಲ್ ಗಳು ತೆರೆದಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಈ ನಡುವೆ ಕೆಲವು ಕಾರ್ಮಿಕ ಸಂಘಟನೆಗಳು ಈಗಾಗಲೇ ಪ್ರಕಟಣೆ ನೀಡಿದ್ದು, ಮೈಸೂರಿನ ಕೆಲವೊಂದು ಪ್ರಮುಖ ಪ್ರದೇಶಗಳಲ್ಲಿ ಪ್ರತಿಭಟನೆಗಳನ್ನು ಮಾತ್ರ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಜನವರಿ 9ರಂದು ಯಾವ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆಜನವರಿ 9ರಂದು ಯಾವ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

Todays Bharat Bandh is limited to protest in Mysuru

ಅಂಗಡಿ ಮುಂಗಟ್ಟುಗಳು ಎಂದಿನಂತೆ ಇರಲಿವೆ. ಆದರೆ, ಬ್ಯಾಂಕ್, ಅಂಚೆ ಹಾಗೂ ವಿಮಾ ಕಚೇರಿಗಳಲ್ಲಿ ವಹಿವಾಟು ಅನುಮಾನ ಮೂಡಿಸಿದೆ. ಎಂದಿನಂತೆ ಹೋಟೆಲ್, ಸಿನಿಮಾ ಮಂದಿರ, ಸಾರಿಗೆ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿವೆ. ಇದರ ಮಧ್ಯೆ ಕೆಲವೊಂದು ವಿಶ್ವವಿದ್ಯಾಲಯಗಳಲ್ಲಿ ನಡೆಯಬೇಕಾಗಿದ್ದ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಲಾಗಿದೆ.

English summary
Today Bharat Bandh is only limited to protest in Mysuru district. All buses, cabs, auto are available for transport. No holiday for schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X