ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದಗಂಗಾ ಶ್ರೀ ಶಿವೈಕ್ಯ ಹಿನ್ನೆಲೆ:ಇಂದು ಮೈಸೂರು ಅರಮನೆಗೆ ಪ್ರವೇಶವಿಲ್ಲ

|
Google Oneindia Kannada News

ಮೈಸೂರು, ಜನವರಿ 22: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಗೌರವಾರ್ಥ ಜ. 22ರಂದು ಸರ್ಕಾರಿ ರಜೆ ಘೋಷಿಸಿರುವುದರಿಂದ ಮೈಸೂರು ಅರಮನೆ ಪ್ರವೇಶವನ್ನು ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ. ಜ. 23ರಂದು ಎಂದಿನಂತೆ ಪ್ರವೇಶ ಇರಲಿದೆ.

ಮೈಸೂರಿನ ಸಂತರು ಸಿದ್ದಗಂಗಾ ಶ್ರೀಗಳನ್ನು ನೆನೆದದ್ದು ಹೀಗೆ...ಮೈಸೂರಿನ ಸಂತರು ಸಿದ್ದಗಂಗಾ ಶ್ರೀಗಳನ್ನು ನೆನೆದದ್ದು ಹೀಗೆ...

ಮೂರು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಇರುವುದರಿಂದ ಮೈಸೂರು ಅರಮನೆ ಆವರಣದಲ್ಲಿ ಸಂಜೆ 7ರಿಂದ 8ರ ವರೆಗೆ ನಡೆಯುವ 'ಧ್ವನಿ ಮತ್ತು ಬೆಳಕು' ಕಾರ್ಯಕ್ರಮವನ್ನು ಜ. 23ರ ವರೆಗೆ ಸ್ಥಗಿತಗೊಳಿಸಲಾಗಿದೆ. 24ರಿಂದ ಎಂದಿನಂತೆ ಮುಂದುವರಿಯಲಿದೆ.

Today Mysuru Palace entry is restricted to the public

ನಿಸ್ವಾರ್ಥ ಸೇವೆಯ ಹರಿಕಾರ
ಸಿದ್ಧಗಂಗಾ ಶ್ರೀಗಳು ವಿಶೇಷ ವ್ಯಕ್ತಿತ್ವದ ನಿಸ್ವಾರ್ಥ ಸೇವೆಯ ಹರಿಕಾರ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತಿದವರು. ಎಲ್ಲಾ ಧರ್ಮದ ಸುಮಾರು ಎಂಟೂವರೆ ಸಾವಿರ ಮಕ್ಕಳಿಗೆ ಮಠದ ವತಿಯಿಂದ ಆಹಾರ, ವಸತಿ, ವಿದ್ಯೆ ನೀಡಲಾಗುತ್ತಿದ್ದು, ಇದೊಂದು ಮಾದರಿ ಸೇವೆ. ದುರ್ಬಲರನ್ನು ಒಗ್ಗೂಡಿಸಿ ಮಾಡಿರುವ ಅವರ ಸೇವೆ ಅಸಾಮಾನ್ಯವಾದದ್ದು. ಮಠದ ಶಿಷ್ಯರಿಗೂ, ತುಮಕೂರಿನ ಜನರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಕಿರಿಯ ಶ್ರೀಗಳಿಗೆ ದುಃಖವನ್ನು ತಡೆದು ಹಿರಿಯರ ಮಾರ್ಗದರ್ಶನದಂತೆ ಮುನ್ನಡೆಯುವ ಕಾಯಕದತ್ತ ಹೆಜ್ಜೆ ಇಡಲಿ ಎಂದು ಪ್ರಮೋದಾ ದೇವಿ ಒಡೆಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Siddaganga shree death:Today Mysuru Palace entry is restricted to the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X