ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್ ಎಸ್ ತುಂಬಿಸಲು ಹೇಮಾವತಿ ಬರಿದಾಗಬೇಕೇ?

ಕೆಆರ್ಎಸ್ ಜಲಾಶಯದಲ್ಲಿ 74 ಅಡಿಯಷ್ಟು ನೀರಷ್ಟೇ ಇತ್ತು. ಆದರೆ ಹೇಮಾವತಿ ಜಲಾಶಯದಿಂದ ಸುಮಾರು ಆರು ದಿನಗಳ ಕಾಲ ನೀರು ಹರಿಸಿದ್ದರಿಂದ ಸುಮಾರು 81.50 ಅಡಿಗೆ ಏರಿಕೆ ಕಂಡಿದೆ. ಒಟ್ಟಾರೆ ಸುಮಾರು 1.661 ಟಿಎಂಸಿ ನೀರು ಹರಿದು ಬಂದಿದೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 6: ಕೊಡಗಿನಲ್ಲಿ ಮಳೆಯಾದರೆ ಮಾತ್ರವೇ ಕೆಆರ್ಎಸ್ ಗೆ ನೀರು. ಈ ಬಾರಿಯಂತೂ ತೀವ್ರ ಜಲಕ್ಷಾಮದಿಂದ ತಳಸೇರಿದ್ದ ಕೆಆರ್ ಎಸ್ ಗೆ ಹೇಮಾವತಿ ಜಲಾಶಯದಿಂದ ನೀರು ಹರಿಸಿದ ಪರಿಣಾಮ ಜಲಾಶಯ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ.

ಇದು ಸಮಾಧಾನ ಪಟ್ಟುಕೊಳ್ಳುವ ವಿಚಾರವಲ್ಲವೇ ಅಲ್ಲ. ಏಕೆಂದರೆ ಮೊದಲನೆಯದಾಗಿ ಇದು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ, ಅಲ್ಲದೆ ಹೇಮಾವತಿ ಜಲಾಶಯದಿಂದ ಹಾಸನ ವ್ಯಾಪ್ತಿಯ ಜನರ ನೀರನ್ನು ಕಸಿದು ಕೆಆರ್ ಎಸ್ ತುಂಬಿಸುವ ಕೆಲಸವಾಗಿದೆ. ಹೀಗಾಗಿ ಆ ವ್ಯಾಪ್ತಿಯ ಜನ ಆಕ್ರೋಶಗೊಂಡಿದ್ದಾರೆ.[ಬರದ ಸಮಸ್ಯೆಯನ್ನು ಎದುರಿಸುವಲ್ಲಿ ಸಿದ್ದು ಸೋತಿದ್ದಾರೆ: ದೇವೇಗೌಡ]

To meet water demands, water is flowing to KRS from Hemavati river

ಮತ್ತೊಂದೆಡೆ ಬರಿದಾದ ಹೇಮಾವತಿ ಜಲಾಶಯವನ್ನು ತುಂಬಿಸಲು ಬೇಲೂರು ಬಳಿಯಿರುವ ಯಗಚಿ ಜಲಾಶಯದಿಂದ ನೀರನ್ನು ಬಿಡಲಾಗಿದೆ. ಸದ್ಯ ಕುಡಿಯುವ ನೀರನ್ನು ಸಮರ್ಪಕವಾಗಿ ಜನತೆಗೆ ತಲುಪಿಸುವ ಸಲುವಾಗಿ ಸರ್ಕಾರ ಸರ್ಕಸ್ ಮಾಡುತ್ತಿದೆಯಾದರೂ ಒಬ್ಬರಿಗೆ ಒಳಿತಾದರೆ ಮತ್ತೊಬ್ಬರಿಗೆ ತೊಂದರೆ ತಪ್ಪಿದ್ದಲ್ಲ.[ಕೆಆರೆಸ್ ನಲ್ಲಿ ಕಾಣುತ್ತಿದೆ ನೆಲ, ಬೆಂಗಳೂರಿಗರ ಪಾಲಿಗೆ ಕೆಟ್ಟಕಾಲ]

ಕೆಆರ್ಎಸ್ ಜಲಾಶಯದಲ್ಲಿ 74 ಅಡಿಯಷ್ಟು ನೀರಷ್ಟೇ ಇತ್ತು. ಆದರೆ ಹೇಮಾವತಿ ಜಲಾಶಯದಿಂದ ಸುಮಾರು ಆರು ದಿನಗಳ ಕಾಲ ನೀರು ಹರಿಸಿದ್ದರಿಂದ ಸುಮಾರು 81.50 ಅಡಿಗೆ ಏರಿಕೆ ಕಂಡಿದೆ. ಒಟ್ಟಾರೆ ಸುಮಾರು 1.661 ಟಿಎಂಸಿ ನೀರು ಹರಿದು ಬಂದಿದೆ.

ಇದರಿಂದ ಸದ್ಯದ ಸ್ಥಿತಿಯಲ್ಲಿ 3.154 ಟಿಎಂಸಿ ನೀರು ಸಂಗ್ರಹವಾಯಿತ್ತಾದರೂ ಶನಿವಾರ ಬೆಳಗ್ಗೆ ಜಲಾಶಯದಿಂದ 1080 ಕ್ಯುಸೆಕ್ ನೀರನ್ನು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಮಂಡ್ಯ ನಗರಗಳಿಗೆ ಕುಡಿಯುವ ಉದ್ದೇಶದಿಂದ ಬಿಡಲಾಗಿದೆ. ಇದರಿಂದಾಗಿ ಈಗ ಒಟ್ಟಾರೆ ಬಳಕೆಗೆ ಯೋಗ್ಯವಾದ ನೀರಿನ ಸಂಗ್ರಹ 3.085 ಟಿಎಂಸಿಯಷ್ಟಿದೆ ಎಂದು ಹೇಳಲಾಗುತ್ತಿದೆ.[ಜಲಾಶಯಗಳು ಖಾಲಿ ಖಾಲಿ ಎದುರಾಗಲಿದೆ ನೀರಿನ ಸಮಸ್ಯೆ]

ಇಷ್ಟು ನೀರಿನಿಂದಲೇ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಬೇಕಾಗಿದೆ. ಇದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

English summary
Water crisis has already started at KRS region Mysuru. The irrigation department discharged Hemavati water from Gorur dam Hassan. The people of hassan oppose the act of irrigation department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X