ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಗರಹೊಳೆ ಅಭಯಾರಣ್ಯದಲ್ಲಿ ಹುಲಿ ಗಣತಿ ಆರಂಭ

|
Google Oneindia Kannada News

ಮೈಸೂರು, ಜೂನ್ 19: ನಾಗರಹೊಳೆ ಅರಣ್ಯದಲ್ಲಿ ಹುಲಿ ಗಣತಿ ಆರಂಭವಾಗಿದೆ. ಆದರೆ, ಕೊರೊನಾ ಕಾರಣದಿಂದ ಸ್ವಯಂ ಸೇವಕರಿಗೆ ಅವಕಾಶ ಇಲ್ಲವಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯದಲ್ಲಿ ಎರಡನೇ ಹಂತದ ಹುಲಿ ಗಣತಿ ಆರಂಭಗೊಂಡಿದ್ದು, ಕೊರೊನಾ ಆರ್ಭಟದಿಂದ ಸ್ವಯಂ ಸೇವಕರನ್ನು ಗಣತಿ ಕಾರ್ಯದಿಂದ ದೂರ ಇಡಲಾಗಿದೆ. 840 ಚದರ ಕಿ.ಮೀ ವ್ಯಾಪ್ತಿಯ ನಾಗರಹೊಳೆ ಅರಣ್ಯದಲ್ಲಿ ಎರಡು ಹಂತದಲ್ಲಿ ಹುಲಿಗಣತಿ ನಡೆದಿದ್ದು, ಪ್ರಥಮ ಹಂತದ ಗಣತಿ ಮೇ ತಿಂಗಳಿನಲ್ಲಿ ಆರಂಭವಾಗಿ ಮುಕ್ತಾಯಗೊಂಡಿದೆ. ಎರಡನೇ ಹಂತದ ಗಣತಿ ಜೂನ್ ಮೊದಲ ವಾರದಲ್ಲಿ ಮಾಡಲಾಗಿದೆ.

ಮೈಸೂರು; ಕೊರೊನಾಗೆ ತತ್ತರಿಸಿದ ರೈತರ ನಿದ್ದೆಗೆಡಿಸಿದ ಹುಲಿ ಮೈಸೂರು; ಕೊರೊನಾಗೆ ತತ್ತರಿಸಿದ ರೈತರ ನಿದ್ದೆಗೆಡಿಸಿದ ಹುಲಿ

 450 ಸ್ವಯಂ ಚಾಲಿತ ಕ್ಯಾಮೆರಾ ಬಳಕೆ

450 ಸ್ವಯಂ ಚಾಲಿತ ಕ್ಯಾಮೆರಾ ಬಳಕೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನದ 8 ವಲಯವನ್ನು ಎರಡು ಬ್ಲಾಕ್‌ಗಳಾಗಿ ವಿಂಗಡಿಸಿ, ಬ್ಲಾಕ್ ಒಂದರಲ್ಲಿ ಹುಣಸೂರು, ಆನೆಚೌಕೂರು, ವೀರನಹೊಸಹಳ್ಳಿ, ಮೇಟಿಕುಪ್ಪೆ ವಲಯಗಳಿದ್ದು, ಬ್ಲಾಕ್ ಎರಡರಲ್ಲಿ ನಾಗರಹೊಳೆ, ಕಲ್ಲಹಳ್ಳ, ಡಿ.ಬಿ ಕುಪ್ಪೆ, ಅಂತರಸಂತೆ ವಲಯವಿದೆ.

ಹುಲಿ ಗಣತಿ ಕಾರ್ಯದಲ್ಲಿ 450 ಸ್ವಯಂ ಚಾಲಿತ ಕ್ಯಾಮೆರಾ ಬಳಸಿ ಒಂದು ತಿಂಗಳ ಗಣತಿ ನಡೆಯಲಿದ್ದು, ಕ್ಯಾಮೆರಾ ಡೇಟಾ ಆಧರಿಸಿ ಗಣತಿ ತಜ್ಞರು ಸ್ಟಾಟಿಸ್ಟಿಕಲ್ ನಿಯಮಾನುಸಾರ ಹುಲಿ ವಯಸ್ಸು, ಲಿಂಗ ಪತ್ತೆ ಮಾಡಲಿದ್ದಾರೆ.
 ರಾಷ್ಟ್ರೀಯ ಹುಲಿ ಸಮೀಕ್ಷೆ

ರಾಷ್ಟ್ರೀಯ ಹುಲಿ ಸಮೀಕ್ಷೆ

ನಾಲ್ಕು ವರ್ಷಕ್ಕೆ ರಾಷ್ಟ್ರೀಯ ಯೋಜನಾ ನಿಯಮಾನುಸಾರ ನಡೆಯಲಿರುವ ಗಣತಿ ಕಾರ್ಯಕ್ಕೆ ವಾರ್ಷಿಕ ಗಣತಿ ಸಮೀಕ್ಷೆ ವರದಿ ಪೂರಕವಾಗಲಿದೆ. 2021ರಲ್ಲಿ ನಡೆಯುತ್ತಿರುವ ಗಣತಿ ರಾಷ್ಟ್ರೀಯ ಮಟ್ಟದಲ್ಲಿ, 2022ರಲ್ಲಿ ನಡೆಯಲಿರುವ 5ನೇ ರಾಷ್ಟ್ರೀಯ ಹುಲಿ ಗಣತಿ ಯೋಜನೆಗೆ ಪೂರಕವಾಗಲಿದೆ.

ಹುಲಿ ಗಣತಿ ಕಾರ್ಯಕ್ಕೆ ಸ್ವಯಂ ಸೇವಕರ ನೆರವು ಪಡೆದು ಅರಣ್ಯದಲ್ಲಿ ಗಣತಿ ನಡೆಸುವ ವಾಡಿಕೆ ಇತ್ತು. ಕೊರೊನಾದಿಂದಾಗಿ ಸ್ವಯಂ ಸೇವಾ ಸಂಘದ ಸಹಾಯವಿಲ್ಲದೆ ಅರಣ್ಯ ಇಲಾಖೆಗೆ ಸೇರಿದ 130 ಸಿಬ್ಬಂದಿ ಹುಲಿ ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ.
 ಪ್ರತಿ 100 ಚದರ ಕಿ.ಮೀಗೆ 12 ಹುಲಿಗಳು

ಪ್ರತಿ 100 ಚದರ ಕಿ.ಮೀಗೆ 12 ಹುಲಿಗಳು

ಹುಲಿ- ಬಲಿ ಪ್ರಾಣಿಗಳ ಲೆಕ್ಕಾಚಾರ 2020ರಲ್ಲಿ ನಡೆದ ಗಣತಿ ಅನ್ವಯ ನಾಗರಹೊಳೆ ಅರಣ್ಯದಲ್ಲಿ ಪ್ರತಿ 100 ಚದರ ಕಿ.ಮೀಗೆ 12 ಹುಲಿಗಳು ವಾಸಿಸುತ್ತಿದೆ. ನಾಗರಹೊಳೆ ಅರಣ್ಯದಲ್ಲಿ 125 ಹುಲಿ ವಾಸವಿದ್ದು, ಹುಲಿ ಅಭಿವೃದ್ಧಿಗೆ ಪೂರಕವಾದ ಅರಣ್ಯ ಮತ್ತು ಆಹಾರ ಸರಪಳಿ ಉತ್ತಮವಾಗಿದ್ದು, ಪ್ರತಿ ಚದರ ಕಿ.ಮೀಗೆ ಚುಕ್ಕಿ ಜಿಂಕೆ 24, ಸಾಂಬಾರ 5, ಕಾಡುಕುರಿ 2, ಕಡವೆ 5, ಕಾಡುಹಂದಿ 4 ವಾಸವಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಹೇಶ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, "840 ಚದರ ಕಿ.ಮೀ ವ್ಯಾಪ್ತಿಯ ನಾಗರ ಹೊಳೆ ಅರಣ್ಯದಲ್ಲಿ ಎರಡು ಹಂತದಲ್ಲಿ ಹುಲಿಗಣತಿ ನಡೆದಿದ್ದು, ಪ್ರಥಮ ಹಂತದ ಗಣತಿ ಮೇ ಆರಂಭವಾಗಿ ಮುಕ್ತಾಯಗೊಂಡಿದೆ.''
 ಹುಲಿಗಳ ಬೆಳವಣಿಗೆ ಶೇ.50 ರಷ್ಟು ಹೆಚ್ಚಾಗಿದೆ

ಹುಲಿಗಳ ಬೆಳವಣಿಗೆ ಶೇ.50 ರಷ್ಟು ಹೆಚ್ಚಾಗಿದೆ

"ಎರಡನೇ ಹಂತದ ಗಣತಿ ಜೂನ್ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಿದೆ. ಕೋವಿಡ್ ಸಂದರ್ಭದಲ್ಲಿ ಹುಲಿ ಗಣತಿ ಕಾರ್ಯಕ್ಕೆ ಸ್ವಯಂ ಸೇವಕರ ನೆರವು ಪಡೆದು ಅರಣ್ಯದಲ್ಲಿ ಗಣತಿ ನಡೆಸುವ ವಾಡಿಕೆ ಇತ್ತು. ಕೋವಿಡ್‌ನಿಂದಾಗಿ ಸ್ವಯಂ ಸೇವಾ ಸಂಘದ ಸಹಾಯವಿಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಗಣತಿ ಕಾರ್ಯದಲ್ಲಿ ತೊಡಗಿಸಲಾಗಿದೆ,'' ಎಂದರು.

"2018ರ ಅಲ್ ಇಂಡಿಯಾ ಟೈಗರ್ ಸಮೀಕ್ಷೆ ಪ್ರಕಾರ ನಾಗರಹೊಳೆ ಅರಣ್ಯದಲ್ಲಿ 125 ಹುಲಿ ವಾಸವಿದ್ದು, ನಾಗರಹೊಳೆ ಅರಣ್ಯದಲ್ಲಿ ಪ್ರತಿ 100 ಚದರ ಕಿ.ಮೀ.ಗೆ 12 ಹುಲಿಗಳು ವಾಸಿಸುತ್ತಿದ್ದು, ದೇಶದಲ್ಲೇ 3ನೇ ಸ್ಥಾನ ಪಡೆದುಕೊಂಡಿದೆ. ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದೇವೆ. ಹತ್ತು ವರ್ಷಗಳ ಸಮೀಕ್ಷೆ ಪ್ರಕಾರ ಹುಲಿಗಳ ಬೆಳವಣಿಗೆ ಶೇ.50 ರಷ್ಟು ಹೆಚ್ಚಾಗಿದೆ. ಸಸ್ಯಾಹಾರಿ ಪ್ರಾಣಿಗಳು ಹೆಚ್ಚು ಇದ್ದಷ್ಟು ಹುಲಿಗಳ ಸಂಖ್ಯೆ ಹೆಚ್ಚಾಗುತ್ತದೆ,'' ಎಂದರು.

English summary
The tiger census has started in the Nagarahole forest. However, due to Coronavirus, volunteering is not allowed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X