ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲು ಸಂಚಾರ; ಟಿಕೆಟ್‌ ಬುಕ್ ಮಾಡಲು ಕೌಂಟರ್ ಆರಂಭ

|
Google Oneindia Kannada News

ಮೈಸೂರು, ಮೇ 22 : ಭಾರತೀಯ ರೈಲ್ವೆ ಜೂನ್ 1ರಿಂದ ದೇಶದಲ್ಲಿ ಕೆಲವು ಮಾರ್ಗದಲ್ಲಿ ರೈಲು ಸೇವೆ ಆರಂಭಿಸುವುದಾಗಿ ಹೇಳಿದೆ. ಈ ರೈಲುಗಳಿಗೆ ಟಿಕೆಟ್ ಬುಕ್ ಮಾಡಲು ಹಂತ-ಹಂತವಾಗಿ ಕೌಂಟರ್‌ಗಳನ್ನು ತೆರೆಯಲಾಗುತ್ತದೆ.

Recommended Video

ರಂಜಾನ್,ಹೊಸ ಬಟ್ಟೆ ಯಾವ್ದೂ ಬೇಡ,ದೇಶಕ್ಕಾಗಿ ತ್ಯಾಗ ಮಾಡಿ ಎಂದ ಮುಸ್ಲಿಂ ಮುಖಂಡ | Oneindia Kannada

ನೈಋತ್ಯ ರೈಲ್ವೆ ಈ ಕುರಿತು ಪ್ರಕಟಣೆ ಹೊರಡಿಸಿದೆ. ಮೊದಲ ಹಂತದಲ್ಲಿ ಪ್ರಮುಖ ನಿಲ್ದಾಣಗಳಲ್ಲಿ ಕೌಂಟರ್‌ಗಳನ್ನು ಶುಕ್ರವಾರದಿಂದ ತೆರೆಯಲಾಗಿದೆ. ಜನರು ಈ ಕೌಂಟರ್ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಬಹುದಾಗಿದೆ.

ಶಿವಮೊಗ್ಗದಲ್ಲಿ ಜೂ.1 ರಿಂದ ರೈಲು ಆರಂಭ: ಮಾಹಿತಿ ಇಲ್ಲಿದೆಶಿವಮೊಗ್ಗದಲ್ಲಿ ಜೂ.1 ರಿಂದ ರೈಲು ಆರಂಭ: ಮಾಹಿತಿ ಇಲ್ಲಿದೆ

ಜೂನ್ 1ರಿಂದ ಆರಂಭವಾಗುವ 100 ಜೋಡಿ ರೈಲು ಸೇವೆಗಳಿಗೆ ಮುಂಗಡ ಟಿಕೆಟ್ ಬುಕ್ ಮಾಡಲು ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿನ ಮೈಸೂರು, ದಾವಣಗೆರೆ, ಶಿವಮೊಗ್ಗ ಟೌನ್, ಹಾಸನ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಕೌಂಟರ್ ತೆರೆಯಲಾಗಿದೆ.

ಮೊದಲ ದಿನ ಬೆಂ-ಬೆಳಗಾವಿ, ಬೆಂ-ಮೈಸೂರು ರೈಲಿಗೆ ಪ್ರಯಾಣಿಕರ ಕೊರತೆ ಮೊದಲ ದಿನ ಬೆಂ-ಬೆಳಗಾವಿ, ಬೆಂ-ಮೈಸೂರು ರೈಲಿಗೆ ಪ್ರಯಾಣಿಕರ ಕೊರತೆ

Rail Service From June 1 Four Ticket Counter Opened

ಲಾಕ್ ಡೌನ್ ಸಂದರ್ಭದಲ್ಲಿ ರೈಲು ಸೇವೆ ರದ್ದಾದ ಕಾರಣ ಪ್ರಯಾಣಿಕರ ಮುಂಗಡ ಟಿಕೆಟ್ ಸಹ ರದ್ದು ಮಾಡಲಾಗಿದೆ. ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಹಣ ಮರುಪಾವತಿಯ ಸೌಲಭ್ಯವನ್ನು ಸಹ ಈ ಕೌಂಟರ್ ಗಳಲ್ಲಿ ಮೇ 25ರಿಂದ ಪಡೆಯಬಹುದು.

ಕರ್ನಾಟಕ; ಶುಕ್ರವಾರದಿಂದ ಅಂತರ ಜಿಲ್ಲಾ ರೈಲು, ವೇಳಾಪಟ್ಟಿ ಕರ್ನಾಟಕ; ಶುಕ್ರವಾರದಿಂದ ಅಂತರ ಜಿಲ್ಲಾ ರೈಲು, ವೇಳಾಪಟ್ಟಿ

ಮುಂಗಡ ಟಿಕೆಟ್ ಬುಕ್ ಮಾಡಲು ಬರುವ ಪ್ರಯಾಣಿಕರು ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬುಕ್ಕಿಂಗ್ ಕೌಂಟರ್ ಸೇರಿದಂತೆ ರೈಲ್ವೆ ನಿಲ್ದಾಣದ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಇಲಾಖೆ ಜೊತೆ ಸಹಕಾರ ನೀಡಬೇಕು ಎಂದು ರೈಲ್ವೆ ಮನವಿ ಮಾಡಿದೆ.

English summary
South Western Railways (SWR) opened 4 counter to book ticket for the train service which will run from June 1, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X