ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಪೊಲೀಸರಿಗೆ ಥಳಿಸಿದ ಪುಂಡರು

|
Google Oneindia Kannada News

ಮೈಸೂರು, ಆಗಸ್ಟ್ 20: ಜನರಿಗೆ ಕಿರಿಕಿರಿ ಮಾಡುತ್ತಿದ್ದಾಗ ಬುದ್ಧಿವಾದ ಹೇಳಿದ ಪೊಲೀಸರಿಗೇ ಥಳಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಸೆಲ್ಫಿ ತೆಗೆಸಿಕೊಳ್ಳಲು ನಿರಾಕರಣೆ: ಕಿರುತೆರೆ ನಟನಿಗೆ ಥಳಿಸಿದ ಪುಂಡರುಸೆಲ್ಫಿ ತೆಗೆಸಿಕೊಳ್ಳಲು ನಿರಾಕರಣೆ: ಕಿರುತೆರೆ ನಟನಿಗೆ ಥಳಿಸಿದ ಪುಂಡರು

ನಗರದ ಹೊರವಲಯದ ಮೇಟಗಳ್ಳಿಯಲ್ಲಿ ಹೆಡ್‌ ಕಾನ್‌ಸ್ಟೆಬಲ್ ಸಲೀಂ ಪಾಷಾ ಹಾಗೂ ಕಾನ್‌ಸ್ಟೆಬಲ್ ಅಶೋಕಕುಮಾರ್ ಅವರು ಗಸ್ತಿನಲ್ಲಿದ್ದಾಗ ಹೆಬ್ಬಾಳು ಮುಖ್ಯರಸ್ತೆಯ ಕೇರಳಾಪುರದ ಮಿಲ್ಟ್ರಿ ಹೋಟೆಲ್ ಮುಂದೆ 4ರಿಂದ 5 ಮಂದಿ ಜೋರಾಗಿ ಮಾತನಾಡುತ್ತಾ ಗದ್ದಲ ಉಂಟು ಮಾಡುತ್ತಿದ್ದರು.

ಹೀಗೆ ಗಲಾಟೆ ಮಾಡಬೇಡಿ ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಇದರಿಂದ ಕೆರಳಿದ ವಿಕಾಸ್ ಅಲಿಯಾಸ್ ವಿಕ್ಕಿ ಎಂಬಾತ ಅವಾಚ್ಯ ಶಬ್ದಗಳಿಂದ ಪೊಲೀಸರನ್ನು ನಿಂದಿಸಿ ಕಾನ್‌ಸ್ಟೆಬಲ್ ಅಶೋಕಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ.

Thugs beat the police in Mysuru

ಹೀಗೆ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಯುವಕನನ್ನು ಮೇಟಗಳ್ಳಿ ಠಾಣಾ ಪೊಲೀಸರು ಬಂಧಿಸಿದ್ದರೆ, ಇತ್ತ ಗುಂಪು ಕಟ್ಟಿಕೊಂಡು ಗಲಾಟೆ ಮಾಡುತ್ತಿದ್ದವರನ್ನು ಹುಣಸೂರು ಪಟ್ಟಣ ಪೊಲೀಸರು ಬಂಧಿಸಿ, ಜೈಲಿಗಟ್ಟುವ ಮೂಲಕ ಪುಂಡರಿಗೆ ಎಚ್ಚರಿಕೆ ನೀಡಿದ್ದಾರೆ.

English summary
Thugs beat the police in Mysuru. Police arrested 5 members on this case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X