ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಮೈಸೂರು, 3 ಮರಿಗೆ ಜನ್ಮ ನೀಡಿದ ಬಿಳಿ ಹುಲಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 10; ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಕುಟುಂಬಕ್ಕೆ ಹೊಸ ಅತಿಥಿಗಳು ಸೇರ್ಪಡೆಯಾಗಿವೆ.

8 ವರ್ಷದ 'ತಾರಾ' ಹೆಸರಿನ ಬಿಳಿ ಹುಲಿ ಹಾಗೂ 4 ವರ್ಷದ 'ರಾಕಿ' ಹೆಸರಿನ ಗಂಡು ಹುಲಿ ಮೂರು ಮರಿಗಳಿಗೆ ಜನ್ಮ ನೀಡಿವೆ. ಸದ್ಯ ಮೃಗಾಲಯದಲ್ಲಿ 9 ಗಂಡು, 8 ಹೆಣ್ಣು ಹಾಗೂ ಮೂರು ಮರಿಗಳು ಇವೆ.

ಸತ್ಯಮಂಗಲ ಹುಲಿ ರಕ್ಷಿತಾರಣ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ HC ಮಾರ್ಗಸೂಚಿಸತ್ಯಮಂಗಲ ಹುಲಿ ರಕ್ಷಿತಾರಣ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ HC ಮಾರ್ಗಸೂಚಿ

ತಾಯಿ ತಾರಾ ಹಾಗೂ ಮರಿಗಳು ಆರೋಗ್ಯವಾಗಿದ್ದು, ಪಶುಪಾಲಕರು ಹಾಗೂ ವೈದ್ಯರು ನಿಗಾ ವಹಿಸಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಪುಟ ಒಪ್ಪಿಗೆ ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಪುಟ ಒಪ್ಪಿಗೆ

Three White Tiger Cubs Born In Mysuru Zoo

ಮಂಗಳೂರಿಗೆ ಬಿಳಿಹುಲಿಗಳ ಆಗಮನ; ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಯಮ ಯೋಜನೆಯಡಿ ಚೆನ್ನೈನ ಅರಿಗ್ಣರ್‌ ಅಣ್ಣ ಮೃಗಾಲಯದಿಂದ ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಒಂದು ಬಿಳಿ ಹೆಣ್ಣು ಹುಲಿ ಕಾವೇರಿ ಮತ್ತು ಹೆಣ್ಣು ಉಷ್ಟ್ರಪಕ್ಷಿಯನ್ನು ತರಿಸಿಕೊಳ್ಳಲಾಗಿದೆ.

ಪಿಲಿಕುಳದಲ್ಲಿ ಈಗಾಗಲೇ 11 ಹುಲಿಗಳಿವೆ (7 ಗಂಡು, 4 ಹೆಣ್ಣು). ಹೊಸದಾಗಿ ಆಗಮಿಸಿರುವ ಕಾವೇರಿ ಹುಲಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಸ್ಥಳೀಯ ಪರಿಸರಕ್ಕೆ ಒಗ್ಗಿದ ಬಳಿಕ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

English summary
Tigress Tara gave birth to Three white cubs at the Sri Chamarajendra Zoological Gardens, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X