ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾಕ್ಕೆ 3 ವಿಶೇಷ ರೈಲುಗಳ ಓಡಾಟ, ಸಮಯ ತಿಳಿಯಿರಿ!

|
Google Oneindia Kannada News

ಮೈಸೂರು, ಸೆಪ್ಟೆಂಬರ್‌ 21: ಮೈಸೂರಿನಲ್ಲಿ ದಸರಾ ಆಚರಣೆ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೇಯು ಪಾರಂಪರಿಕ ನಗರದಲ್ಲಿ ಅದ್ಧೂರಿ ಆಚರಣೆಗಳನ್ನು ವೀಕ್ಷಿಸಲು ಯೋಜಿಸುತ್ತಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ವಿಶೇಷ ರೈಲುಗಳನ್ನು ಘೋಷಿಸಿದೆ.

ಮೈಸೂರಿನ ಜಿಲ್ಲಾ ರೈಲ್ವೆ ವ್ಯವಸ್ಥಾಪಕರು (DRM) ಕರ್ನಾಟಕದ ವಿವಿಧ ಸಣ್ಣ ನಿಲ್ದಾಣಗಳಲ್ಲಿ ಮೈಸೂರು ರೈಲುಗಳ ತಾತ್ಕಾಲಿಕ ನಿಲುಗಡೆಯನ್ನೂ ಘೋಷಿಸಿದ್ದಾರೆ. - ರೈಲು ಸಂಖ್ಯೆ 06215 ಮೈಸೂರಿನಿಂದ ಬೆಂಗಳೂರಿಗೆ (KSR ನಿಲ್ದಾಣ) ಅಕ್ಟೋಬರ್ 5 ರಂದು ರಾತ್ರಿ 11.30 ಕ್ಕೆ ಪ್ರಾರಂಭವಾಗಲಿದ್ದು, 2.45ಕ್ಕೆ ಬೆಂಗಳೂರು ತಲುಪಲಿದೆ. 062126 ಸಂಖ್ಯೆಯ ಅದೇ ರೈಲು ಅಕ್ಟೋಬರ್ 6 ರಂದು ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿನಿಂದ (ಕೆಎಸ್‌ಆರ್ ನಿಲ್ದಾಣ) ಹೊರಡಲಿದ್ದು, ಅದೇ ದಿನ ಬೆಳಗ್ಗೆ 6.20ಕ್ಕೆ ಮೈಸೂರು ತಲುಪಲಿದೆ.

ಮೈಸೂರು ದಸಾರಾ 2022; ಮೈಸೂರು ಅರಮನೆಯಲ್ಲಿ ಸಿಂಹಾಸನದ ಜೋಡಣೆಮೈಸೂರು ದಸಾರಾ 2022; ಮೈಸೂರು ಅರಮನೆಯಲ್ಲಿ ಸಿಂಹಾಸನದ ಜೋಡಣೆ

ಸೆಪ್ಟೆಂಬರ್ 30 ರಿಂದ ಪ್ರಾರಂಭವಾಗುವ ಹೊಸ ರೈಲು ಸಂಖ್ಯೆ 07302 ಮೈಸೂರಿನಿಂದ ಬೆಳಿಗ್ಗೆ 8.20ಕ್ಕೆ ಹೊರಡಲಿದ್ದು, ಅದೇ ದಿನ ಬೆಳಗ್ಗೆ 10 ಗಂಟೆಗೆ ಚಾಮರಾಜನಗರ ತಲುಪಲಿದೆ. ರೈಲು ಸಂಖ್ಯೆ 07301 ಚಾಮರಾಜನಗರದಿಂದ ಬೆಳಗ್ಗೆ 10.55ಕ್ಕೆ ಹೊರಡಲಿದ್ದು, ಅದೇ ದಿನ ಮಧ್ಯಾಹ್ನ 12.25ಕ್ಕೆ ಮೈಸೂರು ತಲುಪಲಿದೆ. ಅಕ್ಟೋಬರ್ 6ರವರೆಗೆ ಈ ವಿಶೇಷ ಸೇವೆ ಲಭ್ಯವಿರುತ್ತದೆ.

Three special trains run for Mysore Dasara, know the timings!

ಇದೇ ಮಾರ್ಗದಲ್ಲಿ ಮತ್ತೊಂದು ರೈಲು ಅಕ್ಟೋಬರ್ 5 ಮತ್ತು 6 ರಂದು ಚಲಿಸಲಿದೆ. ರೈಲು ಸಂಖ್ಯೆ 06247 ಮೈಸೂರಿನಿಂದ ಅಕ್ಟೋಬರ್ 5 ರಂದು ರಾತ್ರಿ 11.30 ಕ್ಕೆ ಹೊರಡುತ್ತದೆ ಮತ್ತು 1.10 ಕ್ಕೆ ಚಾಮರಾಜನಗರ ತಲುಪಲಿದೆ. ರೈಲು ಸಂಖ್ಯೆ 06248 ಚಾಮರಾಜನಗರದಿಂದ ಅಕ್ಟೋಬರ್ 6 ರಂದು ಬೆಳಗ್ಗೆ 5 ಗಂಟೆಗೆ ಹೊರಡಲಿದ್ದು, ಅದೇ ದಿನ ಬೆಳಗ್ಗೆ 6.50ಕ್ಕೆ ಮೈಸೂರು ತಲುಪಲಿದೆ.

Three special trains run for Mysore Dasara, know the timings!

ಮೈಸೂರು ದಸರಾ ಆಚರಣೆಯ ವೈಭವವನ್ನು ವೀಕ್ಷಿಸಲು ಪ್ರಪಂಚದಾದ್ಯಂತದ ಪ್ರವಾಸಿಗರು ನಗರಕ್ಕೆ ಭೇಟಿ ನೀಡುತ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 26 ರಂದು ನಗರದಲ್ಲಿ ದಸರಾ ಹಬ್ಬವನ್ನು ಉದ್ಘಾಟಿಸಲಿದ್ದಾರೆ.

English summary
Ahead of Dasara celebrations in Mysore, South Western Railway has announced three special trains for the convenience of passengers planning to witness the grand celebrations in the heritage city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X