ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿರಿಯಾಪಟ್ಟಣ: ಸಿಡಿಲು ಬಡಿದು ಮೂವರಿಗೆ ಗಾಯ

|
Google Oneindia Kannada News

ಮೈಸೂರು, ಮೇ 24 : ಸಿಡಿಲು ಬಡಿದು ಓರ್ವ ಮಹಿಳೆ ಸೇರಿದಂತೆ ಮೂವರು ಗಾಯಗೊಂಡು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ ಘಟನೆ ನಡೆದಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಮಿಕ್ಕೆರೆ ಗ್ರಾಮದ ನಿವಾಸಿಗಳಾದ ನವೀನ್, ರಂಜಿತ್, ಪ್ರೇಮಮ್ಮ ಗಾಯಗೊಂಡವರು. ಭಾರಿ ಮಳೆಯಿಂದಾಗಿ ಶೆಡ್ಗೆ ಸಿಡಿಲು ಬಡಿದಿದ್ದು, ಶೆಡ್ ನಲ್ಲಿ ಕುಳಿತಿದ್ದ ಹತ್ತು ಮಂದಿಯ ಪೈಕಿ ಮೂವರಿಗೆ ಗಾಯಗಳಾಗಿವೆ. ಗಾಯಗೊಂಡವರು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡೆಡ್ ಸ್ಟೋರೇಜ್ ತಲುಪಿದ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟಡೆಡ್ ಸ್ಟೋರೇಜ್ ತಲುಪಿದ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ

ತಾಲ್ಲೂಕು ಅಧಿಕಾರಿಗಳು ಗಾಯಾಳುಗಳಿಗೆ ಪರಿಹಾರವನ್ನು ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಚಿಕಿತ್ಸೆ ನಂತರ ಮೂವರು ಚೇತರಿಸಿಕೊಳ್ಳುತ್ತಿದ್ದಾರೆ. ಉಳಿದಂತೆ, ಜಿಲ್ಲೆಯ ಎಚ್.ಡಿ.ಕೋಟೆ, ಹಂಪಾಪುರ, ನಂಜನಗೂಡು, ಪಿರಿಯಾಪಟ್ಟಣ ಭಾಗಗಳಲ್ಲಿ ಹೆಚ್ಚು ಮಳೆ ಸುರಿದಿದೆ.‌

Three people injured thunderstorm in periyapattana

ಮುಂಗಾರು ಮಳೆ ಆರಂಭ : ಕೊಡಗಿನಲ್ಲಿ 13 ಅಪಾಯಕಾರಿ ಸ್ಥಳ ಗುರುತುಮುಂಗಾರು ಮಳೆ ಆರಂಭ : ಕೊಡಗಿನಲ್ಲಿ 13 ಅಪಾಯಕಾರಿ ಸ್ಥಳ ಗುರುತು

ಮೈಸೂರಿನಲ್ಲಿ ಸುರಿದ ಮಳೆಗೆ ಈ ವರ್ಷದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಳು ಧರೆಗುರುಳಿವೆ. ದೊಡ್ಡಕೆರೆ ಮೈದಾನ, ಶಾಂತಲಾ ಸಿನಿಮಾ ಮಂದಿರ ಸಮೀಪ, ಗಾಣಿಗರ ಬೀದಿ, ಅವಿಲಾ ಕಾನ್ವೆಂಟ್ ಹತ್ತಿರ, ನ್ಯೂ ಸಯ್ಯಾಜಿರಾವ್ ರಸ್ತೆಯ ಅನಘ ಆಸ್ಪತ್ರೆ ಬಳಿ, ಶಾರದಾದೇವಿನಗರ, ಅಪೊಲೊ ಆಸ್ಪತ್ರೆ ಬಳಿ, ರಾಮಕೃಷ್ಣನಗರ, ಕುವೆಂಪುನಗರ, ಸರಸ್ವತಿಪುರಂನ ಬೇಕ್ ಪಾಯಿಂಟ್, ಜೆ.ಪಿ.ನಗರದ 'ಇ' ಬ್ಲಾಕ್, ಚಾಮುಂಡಿಪುರಂನ ಗೀತಾ ರಸ್ತೆ, ಕೃಷ್ಣಮೂರ್ತಿಪುರಂನ 3ನೇ ಅಡ್ಡರಸ್ತೆ, ರಾಮಾನುಜರಸ್ತೆ, ಕುವೆಂಪುನಗರದ ಕಾರ್ಪೊರೇಷನ್ ಬ್ಯಾಂಕ್ ಎದುರು, ರಾಘವೇಂದ್ರ ಕಲ್ಯಾಣ ಮಂಟಪದ ಬಳಿ ಮರಗಳು ಹಾಗೂ ಮರಗಳ ಕೊಂಬೆಗಳು ಮುರಿದು ಬಿದ್ದಿವೆ.

English summary
Three people injuired because of Heavy rain thunderstorm in periyapattana talluk Mysuru yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X