ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತ್ರಿವೇಣಿ ಸಂಗಮದಲ್ಲಿ ಕುಂಭಮೇಳಕ್ಕೆ ಚಾಲನೆ, ಕಣ್ಮನ ಸೆಳೆದ ಗಂಗಾರತಿ

|
Google Oneindia Kannada News

ಮೈಸೂರು, ಫೆಬ್ರವರಿ 18: ತ್ರಿವೇಣಿ ಸಂಗಮದಲ್ಲಿ ಕುಂಭಮೇಳಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಸಿಎಂ ಕುಮಾರಸ್ವಾಮಿ ಹಾಗೂ ಮತ್ತಿತರ ಗಣ್ಯರು ಮೂರು ದಿನಗಳ ಕುಂಭಮೇಳಕ್ಕೆ ಚಾಲನೆ ನೀಡಿದ್ದಾರೆ.

ಕಾವೇರಿ-ಕಪಿಲ-ಸ್ಪಟಿಕ ನದಿಗಳು ಒಟ್ಟಾಗುವ ಟಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಸೇರಿ ಹಲವು ಧಾರ್ಮಿಕ ಕಾರ್ಯಗಳು ನಡೆಯಲಾರಂಭಿಸಿವೆ.

ತಿ.ನರಸೀಪುರ ಕುಂಭ ಮೇಳ: ಜನಮನ ಸೆಳೆದ ದೀಪಾಲಂಕಾರತಿ.ನರಸೀಪುರ ಕುಂಭ ಮೇಳ: ಜನಮನ ಸೆಳೆದ ದೀಪಾಲಂಕಾರ

ಮೊದಲ ದಿನವಾದ ಇಂದು ಗಂಗಾರತಿ ಸಂಪನ್ನಗೊಂಡಿದೆ. ವಾರಣಾಸಿಯಲ್ಲಿ ಮಾಡಲಾಗುವ ಗಂಗಾರತಿ ಮಾದರಿಯಲ್ಲಿಯೇ ಇಲ್ಲೂ ಸಹ ಗಂಗಾರತಿ ಮಾಡಲಾಗಿದ್ದು, ನೋಡುಗರ ಕಣ್ಮನ ಸೆಳೆಯಿತು.

ಕುಂಭಮೇಳ 2019: ವೈಭವದ ಗಂಗಾರತಿಯ, ಆಕರ್ಷಕ ಚಿತ್ರಗಳು

Three days Kumbamela started in Mysurus T Narasipura

ಗಂಗಾರತಿ ಬಳಿಕ ನಡೆದ ಬಾಣಬಿರುಸು ಪ್ರದರ್ಶನ ಚೇತೋಹಾರಿಯಾಗಿತ್ತು. ಬಣ್ಣದ ಬೆಳಕು ಆಕಾಶ ತುಂಬಿ ನೋಡುಗರಲ್ಲಿ ಅಬ್ಬಾ.. ಉದ್ಘೋಷ ಹೊರಡಿಸಿತು.

ತಿ ನರಸೀಪುರದ ಕುಂಭಮೇಳಕ್ಕೆ ಹರಿದು ಬಂದ ಜನಸಾಗರ ತಿ ನರಸೀಪುರದ ಕುಂಭಮೇಳಕ್ಕೆ ಹರಿದು ಬಂದ ಜನಸಾಗರ

ಗಂಗಾರತಿ ಕಣ್ತುಂಬಿಕೊಂಡ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಕುಮಾರಸ್ವಾಮಿ, ಉತ್ತರದಲ್ಲಿ ನಡೆಯುವ ಧಾರ್ಮಿಕ ಉತ್ಸವವನ್ನು. ದಕ್ಷಿಣ ಭಾರತದಲ್ಲು ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಬೇಕೆಂಬುದು ನನ್ನ ಅಭಿಲಾಷೆ. ಇಡೀ ದಕ್ಷಿಣ ಭಾರತದ ಜನರು ಇಲ್ಲಿನ ಕುಂಭಮೇಳವನ್ನು ನೋಡುವಂತಾಗಬೇಕು ಎಂದರು.

ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ವೈಭವೋಪೇತ 11ನೇ ಕುಂಭಮೇಳಕ್ಕೆ ಚಾಲನೆತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ವೈಭವೋಪೇತ 11ನೇ ಕುಂಭಮೇಳಕ್ಕೆ ಚಾಲನೆ

ಪ್ರಕೃತಿ ಮಾತೆ ನಮ್ಮ ರಾಜ್ಯಕ್ಕೆ ಎಲ್ಲ ರೀತಿಯ ಒಳಿತು ಮಾಡಲಿ. ತಾಯಿ‌ ಕಾವೇರಿ ಸಮೃದ್ಧವಾಗಿ ಹರಿಯುವಂತಾಗಲಿ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ನದಿ ನೀರು ಹಂಚಿಕೆ ವಿವಾದ ಇಲ್ಲದಂತಾಗಬೇಕು ಎಂದರು.

Three days Kumbamela started in Mysurus T Narasipura

ಕಳೆದ ಬಾರಿ ಉತ್ತಮ ಮಳೆಯಾಗಿತ್ತು. ಪರಿಣಾಮ ಒಂದು ಬೆಳೆ ಬೆಳೆಯುತ್ತಿದ್ದ ಜಾಗದಲ್ಲಿ ಎರೆಡರಡು ಬೆಳೆ ಸಿಕ್ಕಿದೆ. ಮುಂದೆಯು ನಾಡಿನಲ್ಲಿ ಉತ್ತಮ ಮಳೆಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದೇ‌ನೆ ಎಂದು ಸಿಎಂ ಹೇಳಿದರು.

English summary
CM Kumaraswamy inaugurated Kumbamela in Mysuru's T Narasipura. He said it was great experience watching Gangarathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X