ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಎನ್.ಆರ್ ಕ್ಷೇತ್ರದಲ್ಲಿ ಮೂರು ಕೋವಿಡ್ ಕೇಂದ್ರ ಆರಂಭ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 23: ಮೈಸೂರಿನಲ್ಲಿ ಕೊರೊನಾ ವೈರಸ್ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಅದರಲ್ಲೂ ಎನ್.ಆರ್ ಕ್ಷೇತ್ರದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಮೂರು ಕೋವಿಡ್ ಕೇಂದ್ರಗಳನ್ನು ಆರಂಭ ಮಾಡಲಾಗಿದೆ.

Recommended Video

India vs China : ಪಾಕಿಸ್ತಾನವನ್ನು ಬಿಟ್ಟು ಚೀನಾವನ್ನು ಟಾರ್ಗೆಟ್ ಮಾಡಿದ ಭಾರತ | Oneindia Kannada

ಮಾಜಿ ಮೇಯರ್ ಆಯೂಬ್ ಖಾನ್ ನೇತೃತ್ವದಲ್ಲಿ 3 ಕೋವಿಡ್ ಆರೈಕೆ ಕೇಂದ್ರ ಆರಂಭ ಮಾಡಲಾಗಿದ್ದು, ಇವು 450 ಹಾಸಿಗೆಗಳುಳ್ಳ ಸೇವಾ ಕೇಂದ್ರಗಳಾಗಿವೆ. ಜಿಲ್ಲಾಡಳಿತದಿಂದ ಹಾಸಿಗೆ ಹಾಗೂ ಔಷಧಿ ನೆರವು ನೀಡಲಾಗುತ್ತದೆ. ಹಾಗೆಯೇ ಮಾಜಿ ಮೇಯರ್ ಆಯೂಬ್ ಖಾನ್ ವೈದ್ಯಕೀಯ ನೆರವು, ಊಟದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಮೈಸೂರಲ್ಲಿ ಡೆತ್‌ ರೇಟ್‌ ಜಾಸ್ತಿ ಇರುವೆಡೆ ಹೆಚ್ಚಿನ ನಿರ್ಬಂಧ: ಜಿಲ್ಲಾಧಿಕಾರಿಮೈಸೂರಲ್ಲಿ ಡೆತ್‌ ರೇಟ್‌ ಜಾಸ್ತಿ ಇರುವೆಡೆ ಹೆಚ್ಚಿನ ನಿರ್ಬಂಧ: ಜಿಲ್ಲಾಧಿಕಾರಿ

ಫಾರೂಕಿಯ ಮಹಿಳೆಯರ ಪಾಲಿಟೆಕ್ನಿಕ್ ಕಾಲೇಜಿನಲ್ಲೂ ಸುಮಾರು 135 ಬೆಡ್‌ಗಳ ಕೇಂದ್ರ ಆರಂಭ ಮಾಡಲಾಗಿದೆ. ಸ್ವಯಂ ಸೇವಕರು, ಎನ್‌ಜಿಒ ಹಾಗೂ ಮೌಲ್ವಿಗಳ ನೆರವಿನೊಂದಿಗೆ ಆಯೂಬ್ ಖಾನ್ ನೇತೃತ್ವದಲ್ಲಿ ಈ ಆರೈಕೆ ಕೇಂದ್ರ ಸ್ಥಾಪನೆ ಮಾಡಲಾಗಿದೆ.

Mysuru: Three Covid-19 Centers Starts In Narasimharaja Constituency

ಮಾಧ್ಯಮಗಳೊಂದಿಗೆ ಮಾತನಾಡಿದ ಆಯೂಬ್ ಖಾನ್, ""ಜಿಲ್ಲಾಡಳಿತ, ಮನಪಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಸ್ಥಳೀಯ ನಗರ ಪಾಲಿಕೆ ಸದಸ್ಯರು, ಧಾರ್ಮಿಕ ಮುಖಂಡರು, ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉದಯಗಿರಿಯ ಫಾರೂಕಿಯಾ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್, ರಾಜೀವ್ ನಗರದ ಆಂಡುಲೆನ್ಸ್ ಪಬ್ಲಿಕ್ ಶಾಲೆ, ಅಜೀಜ್ ಸೇಠ್ ನಗರದ ಬೀಡಿ ಕಾರ್ಮಿಕರ ಮಜ್ದೂರ್ ಆಸ್ಪತ್ರೆಗಳನ್ನು ಕೋವಿಡ್ ಕೇರ್ ಸೆಂಟರ್ ಗಳಾಗಿ ಸಜ್ಜುಗೊಳಿಸಲಾಗಿದೆ'' ಎಂದರು.

ಕೊರೊನಾ ವಾರಿಯರ್ಸ್ ಸೇವೆಗೆ ವಿಕ್ರಮ್‌ ಜೇಷ್ಟ ಆಸ್ಪತ್ರೆ ಮೀಸಲುಕೊರೊನಾ ವಾರಿಯರ್ಸ್ ಸೇವೆಗೆ ವಿಕ್ರಮ್‌ ಜೇಷ್ಟ ಆಸ್ಪತ್ರೆ ಮೀಸಲು

ಫಾರೂಕಿಯಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ತಾಜ್ ಮೊಹಮ್ಮದ್ ಖಾನ್ ಆಂಡುಲೆನ್ಸ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ನಜೀರ್ ಹಾಗೂ ಬೀಡಿ ಕಾರ್ಮಿಕರ ಆಸ್ಪತ್ರೆಯ ಮುಖ್ಯಸ್ಥರು ತಮ್ಮ ಸಂಸ್ಥೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಸಹಮತ ನೀಡಿದ್ದಾರೆಂದು ತಿಳಿಸಿದರು.

English summary
The rate of coronavirus infections in the NR Constituency is high. Against this backdrop, three Covid centers have been established.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X