ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಕೊರೊನಾ ಸೋಂಕು ದೃಢಪಟ್ಟ ಮೂವರು ನಾಪತ್ತೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 24: ಕೊರೊನಾ ಸೋಂಕು ದೃಢಪಟ್ಟ ಮೂರು ವ್ಯಕ್ತಿಗಳು ನಾಪತ್ತೆಯಾಗಿರುವ ಸಂಗತಿ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

Recommended Video

China launches Mars probe during Pandemic | Oneindia Kannada

ಈ ಮೂವರು ಸೋಂಕಿತರು ನಾಪತ್ತೆಯಾಗಿರುವುದರಿಂದ ಆತಂಕ ಸೃಷ್ಟಿಯಾಗಿದೆ. ಕಳೆದ ನಾಲ್ಕೈದು ದಿನಗಳಿಂದಲೂ ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ನಾಪತ್ತೆಯಾಗಿರುವ ಈ ವ್ಯಕ್ತಿಗಳು ಮೈಸೂರಿನ ಅಗ್ರಹಾರದ ರಾಮಾನುಜಾ ರಸ್ತೆ ವಿಳಾಸ ಕೊಟ್ಟಿದ್ದಾರೆ. ಆದರೆ ಅದು ಸುಳ್ಳು ವಿಳಾಸವಾಗಿದೆ. ಈ ಕುರಿತು ಸ್ಥಳೀಯ ಕಾರ್ಪೊರೇಟರ್ ಬಿ.ವಿ. ಮಂಜುನಾಥ್ ಅವರು ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಕೊವಿಡ್-19 ಭಯದಲ್ಲಿ ಸೋಂಕಿತ ಆತ್ಮಹತ್ಯೆಮೈಸೂರಿನಲ್ಲಿ ಕೊವಿಡ್-19 ಭಯದಲ್ಲಿ ಸೋಂಕಿತ ಆತ್ಮಹತ್ಯೆ

ಈ ಸೋಂಕಿತರು ಕೊಟ್ಟಿರುವ ನಂಬರ್ ಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇತ್ತ ಮನೆ ವಿಳಾಸ ಕೂಡ ತಪ್ಪಾಗಿ ನೀಡಿರುವುದರಿಂದ ಇವರನ್ನು ಪತ್ತೆ ಹಚ್ಚುವುದೇ ದೊಡ್ಡ ತಲೆನೋವಾಗಿದೆ. ಈ ಮೂವರು ಇನ್ನೆಷ್ಟು ಜನರಿಗೆ ಸೋಂಕು ಹರಡಿಸುತ್ತಾರೆ ಎಂಬ ಆತಂಕ ಎದುರಾಗಿದೆ.

Three Coronavirus Infected Persons Missing In Mysuru

ಈ ನಡುವೆ ಮೈಸೂರಿನಲ್ಲಿ ಮತ್ತೊಂದು ಪೊಲೀಸ್ ಠಾಣೆ ಸೀಲ್ ‌ಡೌನ್ ಮಾಡಲಾಗಿದೆ. ಮೈಸೂರಿನ ಮಂಡಿ ಪೊಲೀಸ್ ಠಾಣೆಯ ಐವರು ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಸಿಬ್ಬಂದಿ ಸಂಪರ್ಕದಲ್ಲಿದ್ದ ನೂರಾರು ಮಂದಿಗೆ ಆತಂಕ ಶುರುವಾಗಿದೆ. ಇತರೆ ಸಿಬ್ಬಂದಿಗಳಿಗೆ ಹೋಂ ಕ್ವಾರಂಟೈನ್ ವಿಧಿಸಲಾಗಿದೆ.

English summary
Three coronavirus infected persons missing since four days in mysuru. It has created Anxiety
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X