ಕಾರು -ಬಸ್ ಅಪಘಾತ; ಗೃಹಪ್ರವೇಶಕ್ಕೆ ಬಂದಿದ್ದವರ ದುರಂತ ಅಂತ್ಯ
ಮೈಸೂರು, ನವೆಂಬರ್ 8: ಖಾಸಗಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ತುಮಕೂರಿನಲ್ಲಿ ಬಸ್ ಪಲ್ಟಿ: 6 ಮಂದಿ ಸ್ಥಳದಲ್ಲೇ ಸಾವು, 20 ಮಂದಿಗೆ ಗಾಯ
ಮೃತರನ್ನು ಬೆಂಗಳೂರು ನಿವಾಸಿಗಳಾದ ಮೋಹನ ಮತ್ತು ಉಮಾ ಎಂದು ಗುರುತಿಸಲಾಗಿದ್ದು, ಮತ್ತೊಬ್ಬರ ಹೆಸರು ತಿಳಿದುಬಂದಿಲ್ಲ. ಗೃಹಪ್ರವೇಶಕ್ಕೆಂದು ಬೆಂಗಳೂರಿನಿಂದ ದುದ್ದಗಹಳ್ಳಿ ಗ್ರಾಮಕ್ಕೆ ಇವರೆಲ್ಲರೂ ಬಂದಿದ್ದರು. ಅಲ್ಲಿಂದ ವಾಪಸ್ ತೆರಳುವಾಗ ಟಿ.ನರಸೀಪುರ ತಾಲೂಕಿನ ದುದ್ದಗಹಳ್ಳಿ ಪೇಪರ್ ಮಿಲ್ ಬಳಿ ಘಟನೆ ನಡೆದಿದೆ.
ಸದ್ಯ ಗಾಯಾಳುಗಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರ ಸ್ಥಿತಿಯೂ ಗಂಭೀರ ಎಂದು ತಿಳಿದುಬಂದಿದೆ. ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಬಸ್ ಗೆ ಡಿಕ್ಕಿಯಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.