ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೀವ ಬೆದರಿಕೆ ಆರೋಪ: ಪ್ರತಾಪ್ ಸಿಂಹ ಹೇಳಿದ್ದಿಷ್ಟು

|
Google Oneindia Kannada News

ಮೈಸೂರು, ಮೇ 11: ಮಂಗಳೂರು ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿರುವ ಪ್ರಕರಣ ಕುರಿತು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದು ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

'ನಾನು ಯಾವ ಪತ್ರಕರ್ತರಿಗೂ ಜೀವ ಬೆದರಿಕೆ ಹಾಕಿಲ್ಲ. ಇದು ಪ್ರಚಾರಕ್ಕಾಗಿ ಮಾಡಿರುವ ಆರೋಪ' ಎಂದು ಸಂಸದ ಪ್ರತಾಪ್ ಸಿಂಹ ಶನಿವಾರ ಮೈಸೂರಿನಲ್ಲಿ ತಿಳಿಸಿದ್ದಾರೆ.[ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲು]

pratap

ಇಲ್ಲ ಸಲ್ಲದ ವರದಿ ಬರೆದಿದ್ದಕ್ಕೆ ಮೂರ್ಖ ಎಂದು ಹೇಳಿದ್ದೇ. ಮೂರ್ಖ ಎಂದು ಹೇಳುವುದು ಜೀವ ಬೆದರಿಕೆ ಹಾಕಿದಂತೆ ಆಗುತ್ತದೆಯೇ ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.[ಸಲ್ಮಾನ್ ಖಾನ್ ಜೈಲು ತಪ್ಪಿಸಿಕೊಂಡಿದ್ದೇ ಒಂದು 'ಕಮಾಲ್']

ಮಂಗಳೂರಿನಲ್ಲಿ ಎಡಪಂಥೀಯ, ಬಲಪಂಥೀಯ ಪತ್ರಕರ್ತರಿದ್ದಾರೆ. ಕೆಲವರು ಪ್ರಚಾರಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಿರುತ್ತಾರೆ. ಸಾಮಾಜಿಕ ಕ್ಷೇತ್ರದಲ್ಲಿದ್ದು ಸಂಸದವಾಗಿರುವ ನನಗೆ ಮಾಡಲು ಸಾಕಷ್ಟು ಕೆಲಸವಿದೆ. ಇಂಥ ಕ್ಷುಲ್ಲಕ ವಿಚಾರಗಳಿಗೆ ಎಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಅಲ್ಲದೇ ನನ್ನ ಬಳಿ ಸಮಯವೂ ಇಲ್ಲ ಎಂದು ಸಿಂಹ ತಿಳಿಸಿದ್ದಾರೆ.[ಜಯಾ, ಸಲ್ಮಾನ್ ಖುಲಾಸೆ: ದಾವೂದ್ ಇಬ್ರಾಹಿಂ ಘರ್ ವಾಪ್ಸಿ!]

ಸಲ್ಮಾನ್ ಖಾನ್ ತೀರ್ಪಿನ ಬಗ್ಗೆ ಸಿಂಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದನ್ನು ಪ್ರಶ್ನಿಸಿ ಒಬ್ಬ ಜನಪ್ರತಿನಿಧಿ ಹೀಗೆ ಮಾಡಬಹುದೇ ಎಂದು ಪ್ರಶ್ನಿಸಿದ್ದ ನನಗೆ ಧಮಕಿ ಹಾಕಲಾಗಿತ್ತು, ಅಲ್ಲದೇ ಜೀವ ಬೆದರಿಕೆ ಒಡ್ಡಿದ್ದರು ಎಂದು ಮಂಗಳೂರಿನ ಪತ್ರಕರ್ತ ಶ್ರೇಯಸ್ ಅವರು ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲು ಮಾಡಿದ್ದರು.

English summary
Mysuru: BJP Mysuru-Kodagu MP Pratap Simha has denied all the allegations against him of threatening a Journalist from Mangaluru. He said, he is not bothered about such allegations and is focused on working for the welfare of the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X