ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡೇಶ್ವರಿ ಜಾತ್ರೆಗೆ ಸಾಕ್ಷಿಯಾದ ಲಕ್ಷಾಂತರ ಭಕ್ತರು

|
Google Oneindia Kannada News

ಮೈಸೂರು, ಅಕ್ಟೋಬರ್ 26 : ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾಗೆ ತೆರೆ ಬೀಳುತ್ತಿದ್ದಂತೆ ನಾಡ ದೇವತೆ ಚಾಮುಂಡೇಶ್ವರಿ ದೇವಿಯ ಜಾತ್ರೆಯ ಸಂಭ್ರಮ ಆರಂಭವಾಗುತ್ತದೆ. ಅಕ್ಟೋಬರ್ 25ರ ಭಾನುವಾರ ನಡೆದ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.

ಚಾಮುಂಡಿ ಬೆಟ್ಟದಲ್ಲಿ ರಥೋತ್ಸವಕ್ಕೆ ಮಹರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಣಿ ಪ್ರಮೋದಾ ದೇವಿ ಅವರು ಚಾಲನೆ ನೀಡಿದರು. ಪ್ರತಿವರ್ಷ ವಿಜಯದಶಮಿ ಮುಗಿದ ಬಳಿಕ ಚಾಮುಂಡಿ ಬೆಟ್ಟದಲ್ಲಿ ರಥೋತ್ಸವ ನಡೆಯುತ್ತದೆ. [ಸುಂದರ ಜಂಬೂ ಸವಾರಿಯೊಂದಿಗೆ ಸರಳ ದಸರಾಗೆ ತೆರೆ]

chamundi hills

ರಥೋತ್ಸವದ ಅಂಗವಾಗಿ ಮುಂಜಾನೆ 3 ಗಂಟೆಯಿಂದಲೇ ಚಾಮುಂಡಿ ಬೆಟ್ಟದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಚಾಮುಂಡೇಶ್ವರಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ನಡೆಯಿತು. [ಜಯಘೋಷದೊಂದಿಗೆ ಬನ್ನಿ ಮಂಟಪ ತಲುಪಿದ ಜಂಬೂ ಸವಾರಿ]

ತುಲಾ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ರಥಾರೋಹಣ ಮಾಡಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮುಂಜಾನೆ 5 ಗಂಟೆಯಿಂದಲೇ ಬೆಟ್ಟಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.

ಗಜಪಡೆಗಳು ಕಾಡಿನತ್ತ : ಅರಮನೆ ಆವರಣದಲ್ಲಿ ಎರಡೂ ತಿಂಗಳಿನಿಂದ ಬೀಡು ಬಿಟ್ಟಿದ್ದ ದಸರಾ ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ದಸರಾ ಮುಗಿದ ಬಳಿಕ ಆನೆಗಳು ಪುನಃ ತಮ್ಮ-ತಮ್ಮ ಶಿಬಿರಕ್ಕೆ ತೆರಳಲಿವೆ. ಒಟ್ಟು 12 ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

English summary
Thousands of devotees participated in the annual Chamundeshwari rathotsava on Chamundi Hills in Mysuru on Sunday, October 25, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X