ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲೆಗಳಲ್ಲಿ ಮಾತ್ರವಲ್ಲ, ಇನ್ಮುಂದೆ ಶಾಲಾ ವಾಹನದಲ್ಲೂ ಸಿಸಿಟಿವಿ ಕಡ್ಡಾಯ

|
Google Oneindia Kannada News

ಮೈಸೂರು, ಮೇ 12 : ಇನ್ನೇನು ಶಾಲಾ ಕಾಲೇಜುಗಳ ಆರಂಭವಾಗುವ ಹಿನ್ನೆಲೆಯಲ್ಲಿ, ಪೊಲೀಸ್ ಆಯುಕ್ತರ ವ್ಯಾಪ್ತಿ ನಿರ್ದೇಶನದ ಪ್ರೀನರ್ಸರಿ, ಮಾಧ್ಯಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಸಂಸ್ಥೆಗಳು ಶಾಲಾ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಪೊಲೀಸ್ ಇಲಾಖೆ ಹತ್ತು ಹಲವು ನೀತಿ ನಿಯಮಗಳನ್ನು ಜಾರಿಗೊಳಿಸಿದೆ.

ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯಸ್ಥರಿಗೆ ರಾಜ್ಯ ಪೊಲೀಸ್ ಕಾಯ್ದೆ ಅನ್ವಯ ಸುರಕ್ಷತಾ ನಿಯಮಗಳನ್ನು ಜೂನ್ 1ರೊಳಗೆ ಜಾರಿಗೊಳಿಸುವಂತೆಯೂ ಮೈಸೂರು ಪೊಲೀಸ್ ಆಯುಕ್ತ ಕೆ. ಟಿ ಬಾಲಕೃಷ್ಣ ಆದೇಶಿಸಿದ್ದಾರೆ.

ಶೀಘ್ರ ಶಾಲಾ ವಾಹನಗಳಿಗೆ ಮಹಿಳಾ ಚಾಲಕರ ನೇಮಕ ಶೀಘ್ರ ಶಾಲಾ ವಾಹನಗಳಿಗೆ ಮಹಿಳಾ ಚಾಲಕರ ನೇಮಕ

ಈ ಪ್ರಕಾರ ಶಾಲಾ ವಾಹನಗಳು ಖಾಸಗಿಯವರ ನಿರ್ವಹಣೆಯಲ್ಲಿದ್ದರೆ, ಪ್ರತಿ ವಾಹನದಲ್ಲಿ ಮತ್ತು ಪಿಕಪ್ ಮತ್ತು ಡ್ರಾಪ್ ಮಾಡುವವರಿಗೆ ಶಾಲಾ ವತಿಯಿಂದ ಒಬ್ಬ ಜವಾಬ್ದಾರಿಯುತ ಪುರುಷ ಮತ್ತು ಮಹಿಳಾ ಸಿಬ್ಬಂದಿ ನೇಮಕ ಮಾಡಬೇಕು.

This year CCTV is compulsory for School van at Mysuru

ಅಲ್ಲದೇ ಶಾಲಾ ವಾಹನಕ್ಕೆ ಕಡ್ಡಾಯವಾಗಿ ಜಿಪಿಎಸ್‌ ಉಪಕರಣ ಅಳವಡಿಸಬೇಕು. ಚಾಲಕ ಚಾಲನಾ ಪರವಾನಗಿ ಹೊಂದಿರುವುದನ್ನು ಮತ್ತು ಚಾಲಕನ ಪೂರ್ವಾಪರ ನಡತೆ ಬಗ್ಗೆ ಕಡ್ಡಾಯವಾಗಿ ಪೊಲೀಸ್‌ ಪರಿಶೀಲನಾ ವರದಿ ಪಡೆದುಕೊಳ್ಳಬೇಕು.

ಪ್ರತಿ ಶಾಲಾ ವಾಹನಗಳಲ್ಲೂ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಿರಬೇಕು. ಈ ವ್ಯವಸ್ಥೆ ಸದಾ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಶಾಲೆಗಳಿಗೆ ಖಾಕಿಪಡೆ ತಿಳಿಸಿದೆ.

ಶಾಲಾ ವಾಹನಗಳ ವಿರುದ್ಧ ಆರ್ ಟಿ ಓ ಕ್ರಮ: 212 ದೂರು ದಾಖಲು ಶಾಲಾ ವಾಹನಗಳ ವಿರುದ್ಧ ಆರ್ ಟಿ ಓ ಕ್ರಮ: 212 ದೂರು ದಾಖಲು

ಅಲ್ಲದೇ ಸಾರಿಗೆ ಇಲಾಖೆಯಿಂದ ನಿಗದಿ ಪಡಿಸಿರುವ ಸೀಟುಗಳಿಗಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬಾರದು. ವಾಹನ ಚಾಲಕರು ಅನಗತ್ಯವಾಗಿ ಶಾಲಾ ಆವರಣದಲ್ಲಿ ತಿರುಗಾಡದಂತೆ ಮತ್ತು ಶಾಲಾ ಮಕ್ಕಳೊಂದಿಗೆ ಮಾತನಾಡುವುದಾಗಲೀ, ಶಾಲಾ ಮಕ್ಕಳ ಗೌರವಕ್ಕೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ವರ್ತಿಸಿದರೆ ಶಾಲಾ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಶಾಲೆಯ ಆಟದ ಮೈದಾನ, ಈಜುಕೊಳ, ಪ್ರಯೋಗಶಾಲೆ, ಗ್ರಂಥಾಲಯ, ಡ್ಯಾನ್ಸಿಂಗ್‌ ಹಾಲ್‌, ವ್ಯಾಯಾಮ ಶಾಲೆ ಮುಂತಾದ ಸ್ಥಳಗಳಲ್ಲಿ ಸಂಬಂಧಪಟ್ಟ ಶಿಕ್ಷ ಕರು ಹಾಗೂ ಮೇಲ್ವಿಚಾರಕರು ಮಾತ್ರ ಹಾಜರಿರಬೇಕು. ಅನಗತ್ಯ ವ್ಯಕ್ತಿಗಳು ಪ್ರವೇಶಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಶಾಲಾ ಪ್ರವಾಸ ವಾಹನಕ್ಕೆ ಬೆಂಕಿ: ಸಮಯಪ್ರಜ್ಞೆ ಮೆರೆದ ಪೊಲೀಸರು ಶಾಲಾ ಪ್ರವಾಸ ವಾಹನಕ್ಕೆ ಬೆಂಕಿ: ಸಮಯಪ್ರಜ್ಞೆ ಮೆರೆದ ಪೊಲೀಸರು

ಶಾಲಾ ಆವರಣದಲ್ಲಿ ಸಿಸಿಟಿವಿ ಅಳವಡಿಸಿ, ಅವುಗಳು ಸದಾ ಚಾಲ್ತಿಯಲ್ಲಿರುವಂತೆ ಹಾಗೂ ಸಿಸಿಟಿವಿ ನಿರ್ವಹಣೆಗೆ ಸೂಕ್ತ ಸಿಬ್ಬಂದಿ ನೇಮಿಸಬೇಕು. ಸಿಸಿಟಿವಿ ಫೂಟೇಜ್‌ಗಳನ್ನು ಕನಿಷ್ಠ 60 ದಿನಗಳ ಅವಧಿಗೆ ಸಂರಕ್ಷಿಸಿಟ್ಟು ಅಗತ್ಯಬಿದ್ದಾಗ ವಿಚಾರಣೆಯ ಸಲುವಾಗಿ ಪೊಲೀಸರಿಗೆ ಒದಗಿಸುವಂತೆಯೂ ಕೂಡ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಶಾಲಾ ಭದ್ರತಾ ಉಸ್ತುವಾರಿಗಾಗಿ 3 ಸೆಕ್ಯೂರಿಟಿ ಸೂಪರ್‌ವೈಸರ್‌ ಹಾಗೂ 1 ಮುಖ್ಯ ಸೂಪರ್‌ವೈಸರ್‌ ನೇಮಿಸಬೇಕೆಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

English summary
Not only schools, know CCTV connection is compulsory for school van and buses. Mysuru city police made new rules in district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X