• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಸರೆ ರಂಗೇರಿಸಲು ಸಜ್ಜು: ಈ ಬಾರಿ 'ಮನೆ ಮನೆಗೆ ಯೋಗ'

|

ಮೈಸೂರು, ಸೆಪ್ಟೆಂಬರ್. 28: ಪ್ರತಿ ವರುಷದಂತೆ ಈ ವರ್ಷವೂ ದಸರೆಯನ್ನು ರಂಗುಗೊಳಿಸಲು ಹೊಸತನ ರೂಪಿಸಲಾಗುತ್ತಿದೆ. ಈ ಬಾರಿ ಯೋಗ ದಸರಾ ಕಾರ್ಯಕ್ರಮದಲ್ಲಿ ಕೆಲವೊಂದು ಹೊಸತನ್ನು ತರಲು ಸಂಘಟಕರು ನಿರ್ಧರಿಸಿದ್ದು, ಈ ಬಾರಿ 'ಮನೆ ಮನೆಗೆ ಯೋಗ' ಕಾರ್ಯಕ್ರಮ ಆಯೋಜಿಸುವ ಚಿಂತನೆ ನಡೆಸಿದ್ದಾರೆ.

ನಗರದ ಪ್ರಮುಖ 10 ಉದ್ಯಾನಗಳನ್ನು ಗುರುತಿಸಿ ಅಲ್ಲಿ ಯೋಗ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಜನರನ್ನು ಯೋಗದ ಕಡೆಗೆ ಆಕರ್ಷಿಸಲು ಮತ್ತು ಅವರಿಗೆ ಯೋಗ ಕಲಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮತ್ತೊಂದು ದಾಖಲೆ ನಿರ್ಮಿಸಲು ಅಣಿಯಾಗುತ್ತಿದೆ ಸಾಂಸ್ಕೃತಿಕ ನಗರಿ

ಜಿಲ್ಲಾಡಳಿತವು ದಸರಾ ಅವಧಿಯಲ್ಲಿ ನಗರದ ವಿವಿಧ ಯೋಗ ಕೇಂದ್ರಗಳು ಮತ್ತು ಯೋಗ ಸಂಸ್ಥೆಗಳ ನೆರವಿನಿಂದ ಐದು ದಿನ ಈ ಕಾರ್ಯಕ್ರಮ ನಡೆಸಲಿದೆ. ಕುವೆಂಪುನಗರ, ಜೆ.ಪಿ.ನಗರ ಒಳಗೊಂಡಂತೆ ವಿವಿಧ ಭಾಗಗಳಲ್ಲಿರುವ ದೊಡ್ಡ ಪಾರ್ಕ್‌ಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ.

ಅಕ್ಟೋಬರ್.14ರಂದು ಓಪನ್ ಸ್ಟ್ರೀಟ್ ಫೆಸ್ಟಿವಲ್: ವಿಶೇಷತೆಗಳು ಏನು?

ಉತ್ಸವ ನಡೆಯಲಿರುವ ಆ 10 ಪಾರ್ಕ್‌ಗಳು ಯಾವುವು ಎಂಬುದು ಇನ್ನೂ ಅಂತಿಮವಾಗಿಲ್ಲ. ದಸರಾ ಯೋಗ ಸಮಿತಿ ಇನ್ನೆರಡು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಈ ಕುರಿತು ಸಂಕ್ಷಿಪ್ತ ಲೇಖನ ಇಲ್ಲಿದೆ.

 ಬೆಳಗಿನ ಅವಧಿಯಲ್ಲಿ ಕಾರ್ಯಕ್ರಮ

ಬೆಳಗಿನ ಅವಧಿಯಲ್ಲಿ ಕಾರ್ಯಕ್ರಮ

ಕಳೆದ ಬಾರಿ ಅರಮನೆ ಆವರಣದಲ್ಲಿ ಮಾತ್ರ ಯೋಗ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ವಿವಿಧ ಭಾಗಗಳ ಸಾವಿರಾರು ಯೋಗಾಸಕ್ತರು ಅರಮನೆ ಆವರಣದಲ್ಲಿ ಸೇರಿ ಯೋಗ ಪ್ರದರ್ಶನ ನೀಡಿದ್ದರು.

ಈ ಬಾರಿ ನಗರದ ವಿವಿಧ ಕಡೆಗಳಲ್ಲಿ ಯೋಗ ಉತ್ಸವ ನಡೆಯಲಿರುವುದರಿಂದ ಹೆಚ್ಚಿನ ಮಂದಿಗೆ ಪಾಲ್ಗೊಳ್ಳಲು ಅವಕಾಶ ಲಭಿಸುತ್ತದೆ. ಯೋಗ ಉತ್ಸವ ನಡೆಯುವ ಪಾರ್ಕ್‌ಗಳಲ್ಲಿ ಯೋಗ ಮಾರ್ಗದರ್ಶಕರು, ಯೋಗ ತರಬೇತುದಾರರು ನೆರವು ನೀಡಲಿದ್ದಾರೆ. ಐದು ದಿನವೂ ಬೆಳಗ್ಗಿನ ಅವಧಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

 ಹೆಚ್ಚುತ್ತಿದೆ ಯೋಗಾಸಕ್ತರ ಸಂಖ್ಯೆ

ಹೆಚ್ಚುತ್ತಿದೆ ಯೋಗಾಸಕ್ತರ ಸಂಖ್ಯೆ

ಈ ಬಾರಿ ಯೋಗ ದಸರಾ ಅಕ್ಟೋಬರ್‌ 13 ಮತ್ತು 14ರಂದು ನಡೆಯುವ ಸಾಧ್ಯತೆಯಿದೆ. ಕಳೆದ ಬಾರಿಯಂತೆ ಈ ಸಲವೂ ರಾಜ್ಯಮಟ್ಟದ ಯೋಗ ಸ್ಪರ್ಧೆ ಇರಲಿದೆ. ಅರಮನೆ ಆವರಣದಲ್ಲೂ ಯೋಗ ಉತ್ಸವ ಇರಲಿದ್ದು, ಸಾಮೂಹಿಕ ಸೂರ್ಯ ನಮಸ್ಕಾರ, ಯೋಗ ಪ್ರದರ್ಶನ ನಡೆಯಲಿದೆ.

ಕಳೆದ 2-3 ವರ್ಷಗಳಿಂದ ಮೈಸೂರಿನಲ್ಲಿ ಯೋಗಾಸಕ್ತರ ಸಂಖ್ಯೆ ಹೆಚ್ಚುತ್ತಿದೆ. ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಮೈಸೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ‘ಯೋಗ ದಸರಾ' ಮೂಲಕ ಯೋಗವನ್ನು ಇನ್ನಷ್ಟು ಜನಪ್ರಿಯಗೊಳಿಸುವುದು ಜಿಲ್ಲಾಡಳಿತದ ಉದ್ದೇಶ.

ಕಳೆದ ಬಾರಿ ಹಮ್ಮಿಕೊಂಡಿದ್ದ ಯೋಗ ನಡಿಗೆ ಕಾರ್ಯಕ್ರಮವನ್ನು ಈ ಬಾರಿ ಕೈಬಿಡುವ ಸಾಧ್ಯತೆಗಳಿವೆ. ಯೋಗ ನಡಿಗೆಯಲ್ಲಿ ನಗರದ ನಾಲ್ಕು ಭಾಗಗಳಿಂದ ಯೋಗಪಟುಗಳು ಬಂದು ಓವೆಲ್ ಮೈದಾನದಲ್ಲಿ ಸೇರಿದ್ದರು.

ದಸರಾಕ್ಕೆ ಭರದ ಸಿದ್ಧತೆ: ಬರಲಿವೆ 10 ರಾಜ್ಯಗಳ ಸಾಂಸ್ಕೃತಿಕ ತಂಡ

 ವಿಶೇಷ ಮಕ್ಕಳಿಗೆ ಅವಕಾಶ

ವಿಶೇಷ ಮಕ್ಕಳಿಗೆ ಅವಕಾಶ

ಈ ಬಾರಿ ಯೋಗ ಸ್ಪರ್ಧೆಯಲ್ಲಿ ಅಂಗವಿಕಲ ಮಕ್ಕಳಿಗೆ ಅವಕಾಶ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆದಿದೆ. ವಿಶೇಷ ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡುವ ಬಗ್ಗೆ ಚರ್ಚೆ ನಡೆದಿದೆ.

ವಸ್ತುಪ್ರದರ್ಶನ ಮೈದಾನದಲ್ಲಿರುವ ಸಭಾಂಗಣದಲ್ಲಿ ವಿಶೇಷ ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡುವ ಬಗ್ಗೆ ಚರ್ಚೆ ನಡೆದಿದೆ. ಯೋಗಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನೀಡಲು ತೀರ್ಮಾನಿಸಲಾಗಿದೆ.

 ಯೋಗ ಚಾರಣ

ಯೋಗ ಚಾರಣ

ಈ ಬಾರಿ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ ಕಾರ್ಯಕ್ರಮಗಳು ಇರಲಿವೆ. ಕಳೆದ ಬಾರಿ ಯೋಗಪಟುಗಳು ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತುವುದು ಮತ್ತು ಬೆಟ್ಟದ ಮೇಲಿನ ವೇದಿಕೆಯಲ್ಲಿ ದುರ್ಗಾ ನಮಸ್ಕಾರ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯೋಗ ಚಾರಣದೊಂದಿಗೆ ‘ಯೋಗ ದಸರಾ' ಕಾರ್ಯಕ್ರಮಕ್ಕೆ ತೆರೆಬಿದ್ದಿತ್ತು.

ಯೋಗ ಚಾರಣಕ್ಕೆ ಕಳೆದ ಬಾರಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ದರಿಂದ ಈ ಬಾರಿಯೂ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This time organizer decided to bring some new programme on yoga dasara programme. Idea is to organize 'Mane Manege Yoga'program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more