ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ವೇಳೆ ಭಾರೀ ಸದ್ದು ಮಾಡಿದ ಅಪರೂಪದ ಚಿತ್ರವಿದು...

|
Google Oneindia Kannada News

Recommended Video

Mysore Dasara 2018 : ಮೈಸೂರು ದಸರಾ ವೇಳೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಈ ಫೋಟೋ | Oneindia kannada

ಮೈಸೂರು, ಅಕ್ಟೋಬರ್.22: ಈ ವರ್ಷದ ಐತಿಹಾಸಿಕ ಮೈಸೂರು ದಸರಾಕ್ಕೆ ಜಂಬೂ ಸವಾರಿಯೊಂದಿಗೆ ವಿದಾಯ ಹೇಳಲಾಗುತ್ತಿದೆ. ಹತ್ತು ದಿನಗಳ ಕಾಲ ಇಡೀ ನಗರ ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೆದ್ದಿದೆ.

ಇದರ ನಡುವೆ ಅರಮನೆಯ ಕಣ್ಣು ಕೊರೈಸುವ ಬೆಳಕು ಅದರಾಚೆಗೆ ಅದನ್ನೇ ತದೇಕ ಚಿತ್ತದಿಂದ ನೋಡುತ್ತಿರುವ ತಾಯಿಮಗನ ಅಪರೂಪದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಾಗೆ ನೋಡಿದರೆ ರಾತ್ರಿಯಾಗುತ್ತಿದ್ದಂತೆಯೇ ಇಡೀ ಪಟ್ಟಣ ವಿವಿಧ ನಮೂನೆಯ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದರೆ ಇಂದ್ರನ ಅಮರಾವತಿಯೇ ಧರೆಗಿಳಿಯಿತೇ ಎಂಬ ಭಾವ ಪ್ರತಿಯೊಬ್ಬರನ್ನು ಆವರಿಸಿದ್ದಂತು ಸತ್ಯ.

ಇಡೀ ನಗರ ಸುಂದರಮಯವಾಗಿ ಕಂಗೊಳಿಸುತ್ತಿದ್ದರೆ ಅದನ್ನು ನೋಡಿ ಕಣ್ತುಂಬಿಕೊಂಡವರೆಷ್ಟೋ? ಬಡವರು, ಶ್ರೀಮಂತರು ಎಂಬ ಬೇಧಭಾವವಿಲ್ಲದೆ ಎಲ್ಲರೂ ದಸರಾವನ್ನು ಅವರವರ ಅನುಕೂಲಕ್ಕೆ ತಕ್ಕಂತೆ ಎಂಜಾಯ್ ಮಾಡಿದ್ದಾರೆ.

ಒಗ್ಗಟ್ಟು ಪ್ರದರ್ಶಿಸುವಲ್ಲಿ ಮಹತ್ವ ಪಡೆದಿದ್ದ ಮಂಗಳೂರು ಸಾರ್ವಜನಿಕ ಶಾರದಾ ಮಹೋತ್ಸವಒಗ್ಗಟ್ಟು ಪ್ರದರ್ಶಿಸುವಲ್ಲಿ ಮಹತ್ವ ಪಡೆದಿದ್ದ ಮಂಗಳೂರು ಸಾರ್ವಜನಿಕ ಶಾರದಾ ಮಹೋತ್ಸವ

ದಸರಾ ಸಂದರ್ಭ ವಿದ್ಯುದ್ದೀಪದಿಂದ ಕಂಗೊಳಿಸುವ ಮೈಸೂರು ಅರಮನೆಯನ್ನೊಮ್ಮೆ ನೋಡಬೇಕೆಂಬ ಕುತೂಹಲ ಕಾತರ ಎಲ್ಲರಲ್ಲೂ ಮನೆ ಮಾಡಿರುತ್ತದೆ. ಹೀಗಾಗಿ ಹೆಚ್ಚಿನವರು ಅರಮನೆಯತ್ತ ಹೆಜ್ಜೆಹಾಕುತ್ತಾರೆ. ಸುಂದರ ಬೆಳಕಲ್ಲಿ ಬೆಳಗುವ ಅರಮನೆಯನ್ನೊಮ್ಮೆ ನೋಡಿ ಧನ್ಯರಾಗುತ್ತಾರೆ. ಮುಂದೆ ಓದಿ...

 ಎರಡು ಕಣ್ಣುಗಳು ಸಾಲದು

ಎರಡು ಕಣ್ಣುಗಳು ಸಾಲದು

ದಸರಾ ಸಂದರ್ಭದಲ್ಲಂತೂ ಅರಮನೆಯನ್ನು ನೋಡಲು ಎರಡು ಕಣ್ಣುಗಳೇ ಸಾಲದಾಗುತ್ತದೆ. ಆದರೆ ಅರಮನೆಯನ್ನು ನೋಡುವ ಕಣ್ಣುಗಳು ಎರಡೇ ಆದರೂ ಅದರಾಚೆಗಿನ ನೋಟ ನೂರಾರು ಆಗಿರುತ್ತದೆ. ಅದರಲ್ಲೂ ದಸರಾ ಸಂದರ್ಭ ಅರಮನೆಯ ಸುಂದರ ಚಿತ್ರವನ್ನು ಸೆರೆಹಿಡಿಯುವ ತವಕ ಎಲ್ಲ ಛಾಯಾಗ್ರಾಹಕರಲ್ಲಿ ಇದ್ದೇ ಇರುತ್ತದೆ.

 ಜನರ ಜೀವ ಉಳಿಸಲು ಹೋಗಿ ತಾನೇ ಬಲಿಯಾದ 'ರಾವಣ' ಜನರ ಜೀವ ಉಳಿಸಲು ಹೋಗಿ ತಾನೇ ಬಲಿಯಾದ 'ರಾವಣ'

 ಅರ್ಥಪೂರ್ಣ ಚಿತ್ರ

ಅರ್ಥಪೂರ್ಣ ಚಿತ್ರ

ಛಾಯಾಗ್ರಾಹಕರ ನೋಟಗಳು ಮತ್ತು ಅವರು ಸೆರೆ ಹಿಡಿಯುವ ಚಿತ್ರಗಳು ಕೆಲವೊಮ್ಮೆ ಎಷ್ಟೊಂದು ಅರ್ಥಪೂರ್ಣವಾಗಿರುತ್ತದೆ, ಮಾತ್ರವಲ್ಲ ಒಂದೇ ಒಂದು ಚಿತ್ರ ನೂರಾರು ಅರ್ಥಗಳನ್ನು ನಮ್ಮ ಮನಃಪಟಲದಲ್ಲಿ ಹರಡಿ ಹೋಗುತ್ತದೆ ಎಂಬುದಕ್ಕೆ ಈ ಬಾರಿಯ ದಸರಾದಲ್ಲಿ ಆದಿವಾಸಿ ಮಹಿಳೆ ತನ್ನ ಎಳೆಕಂದನೊಂದಿಗೆ ಜಗಮಗಿಸುವ ಅರಮನೆಯನ್ನು ನೋಡುತ್ತಿರುವ ನೋಟದ ಚಿತ್ರ ಸಾಕ್ಷಿಯಾಗಿದೆ.

ಮೈಸೂರು ದಸರಾ: ಅದ್ಧೂರಿ ಜಂಬೂಸವಾರಿ ಕಣ್‌ ತುಂಬಿಕೊಂಡ ಜನ ಸಾಗರ

 ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು

ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು

ಆದಿವಾಸಿ ಮಹಿಳೆ ತನ್ನ ಎಳೆಕಂದನೊಂದಿಗೆ ಜಗಮಗಿಸುವ ಅರಮನೆಯನ್ನು ನೋಡುತ್ತಿರುವ ನೋಟದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ. ಒಬ್ಬರಿಂದ ಮತ್ತೊಬ್ಬರಿಗೆ ಶೇರ್ ಆಗುತ್ತಲೇ ಇದೆ. ಅದಕ್ಕೆ ಸಾವಿರಾರು ಕಾಮೆಂಟ್ ಗಳು ಬರತೊಡಗಿದೆ. ಈ ಅಪರೂಪದ ಚಿತ್ರಕ್ಕೆ ಜನ ಅವರದ್ದೇ ಆದ ವ್ಯಾಖ್ಯಾನಗಳನ್ನು ನೀಡುತ್ತಲೇ ತಮ್ಮ ಗೋಡೆಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ.

 ಹಿರಿಯ ಛಾಯಾಗ್ರಾಹಕ ನೇತ್ರರಾಜು

ಹಿರಿಯ ಛಾಯಾಗ್ರಾಹಕ ನೇತ್ರರಾಜು

ಇಷ್ಟಕ್ಕೂ ಇಂತಹದೊಂದು ಚಿತ್ರವನ್ನು ಸೆರೆಹಿಡಿದವರು ಮೈಸೂರಿನ ಹಿರಿಯ ಛಾಯಾಗ್ರಾಹಕ ನೇತ್ರರಾಜುರವರು. ಅವರು ದೃಶ್ಯಗಳನ್ನು ಕೇವಲ ಕಣ್ಣಿಂದ ಮಾತ್ರ ನೋಡುವುದಿಲ್ಲ. ಹೃದಯದಿಂದ ನೋಡುತ್ತಾರೆ. ಹೀಗಾಗಿಯೇ ಅವರಿಗೆ ಇಂತಹದೊಂದು ಅಪರೂಪದ ಚಿತ್ರ ತೆಗೆಯಲು ಸಾಧ್ಯವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

English summary
This picture was a great hit by the people of the social networking site in Mysore Dasara time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X