ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೊಂದು ವಿವಾದದ ಹೇಳಿಕೆ ನೀಡಿದ ಪ್ರೊ.ಕೆ.ಎಸ್. ಭಗವಾನ್

|
Google Oneindia Kannada News

ಮೈಸೂರು, ಜನವರಿ 27 : ಕಳೆದ ಕೆಲವು ದಿನಗಳಿಂದೀಚೆಗೆ ರಾಮನ ವಿಚಾರವಾಗಿ ಪುಂಖಾನುಪುಂಖವಾಗಿ ಮಾತನಾಡಿದ ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ಸದ್ಯ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೈಸೂರಿನ ಅಂಬೇಡ್ಕರ್ ಪಾರ್ಕ್ನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಾಚಾಮಗೋಚರವಾಗಿ ಮಾತನಾಡಿದ ಅವರು ಭಾರತ ಇನ್ನೂ ಹಿಂದೂ ಧರ್ಮದ ಗುಲಾಮಗಿರಿಯಲ್ಲಿದೆ . ಬ್ರಾಹ್ಮಣರನ್ನು ಹೊರತುಪಡಿಸಿ ಲಿಂಗಾಯತರು, ಒಕ್ಕಲಿಗರು ಸೇರಿದಂತೆ ಎಲ್ಲರೂ ಶೂದ್ರರು. ಮನುಸ್ಮೃತಿಯಲ್ಲಿ ಶೂದ್ರರು ಅಂದ್ರೆ ದಾಸಿಯ ಮಕ್ಕಳು, ಸೂ..ಮಕ್ಕಳು ಅಂತ ಬರೆಯಲಾಗಿದೆ ಎಂದು ತಿಳಿಸಿದರು.

Thinker K S Bhagwan given controversial statement

ಸೀತೆ ಜಿಂಕೆ, ದನ, ಹಂದಿ ಮಾಂಸ ತಿಂದಿದ್ದಾಳೆ : ವಿವಾದಾತ್ಮಾಕ ಹೇಳಿಕೆಸೀತೆ ಜಿಂಕೆ, ದನ, ಹಂದಿ ಮಾಂಸ ತಿಂದಿದ್ದಾಳೆ : ವಿವಾದಾತ್ಮಾಕ ಹೇಳಿಕೆ

ನಮ್ಮ ಜನರಿಗೆ ಮುಖ್ಯವಾಗಿ ಗುಲಾಮಗಿರಿಯನ್ನು ವಿರೋಧ ಮಾಡುವ ತಾಖತ್ ಇಲ್ಲ. ನಾವು ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೆಲ ಗುಲಾಮರು ನನ್ನನ್ನು ವಿರೋಧಿಸುತ್ತಿದ್ದಾರೆ. ಒಂದು ವರ್ಗದ ಗುಲಾಮರು ಮತ್ತು ಅವರ ಗುಲಾಮರು ನನ್ನ ವಿರೋಧಿಸುತ್ತಾರೆ. ಇದೇ ಗುಲಾಮರು ಹೋಗಿ ಬಾಬ್ರಿ ಮಸೀದಿ ಒಡೆದು ಹಾಕಿದರು. ಕೆಲ ಗುಲಾಮರು ಹಣ ಕೊಟ್ಟು ಮನೆಯಲ್ಲಿರುತ್ತಾರೆ. ಈ ಗುಲಾಮರು ನಾವು ಶೂದ್ರರು, ಸೂ.. ಮಕ್ಕಳು ಅನ್ನೋ ಅರಿವಿಲ್ಲದೆ ಕೆಲಸ ಮಾಡುತ್ತಾರೆ ಎಂದು ಹೇಳುವ ಮೂಲಕ ಭಗವಾನ್ ಮತ್ತೊಂದು ವಿವಾದದ ಕಿಡಿಗೆ ನಾಂದಿ ಹಾಡಿದ್ದಾರೆ.

English summary
Thinker K S Bhagwan given controversial statement about caste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X