• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಸರಾ ಅಂದ್ರೆ ಕನ್ನಡಮ್ಮನ ಪೂಜೆ, ಆದ್ರೆ ವೆಬ್ ಸೈಟ್ ನಲ್ಲಿ ಕನ್ನಡ ಕೇಳಬೇಡಿ!

By Yashaswini
|

ಮೈಸೂರು, ಆಗಸ್ಟ್ 30 : ಎಲ್ಲಾ ಇಲಾಖೆಗಳ ವೆಬ್ ಸೈಟ್ ಗಳಲ್ಲಿ ಕನ್ನಡವು ಪ್ರಧಾನ ಭಾಷೆಯಾಗಬೇಕು. ಇತರ ಭಾಷೆಗಳು ಆಯ್ಕೆ ಭಾಷೆಯಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ಪಷ್ಟ ಸೂಚನೆ ನೀಡಿದೆ. ಹಾಗಿದ್ದರೂ ಕನ್ನಡದ ಕಂಪನ್ನು ಸೂಸುವ ಮೈಸೂರು ಅರಮನೆಯ ವೆಬ್ ಸೈಟ್ ನಲ್ಲಿ ಕನ್ನಡವೇ ನಾಪತ್ತೆಯಾಗಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

   Mysuru is all set to welcome Dasara | 4 more Elephants added for Jamboosavari

   ಹೌದು, ಇಡೀ ವಿಶ್ವದಲ್ಲಿ ಮೈಸೂರು ಅಂದರೆ ಸಾಕು, ದಸರೆ ಎಂದರೆ ಸಾಕು ಕನ್ನಡಮ್ಮನ ಪೂಜೆ, ಚಾಮುಂಡಿಯ ವೈಭವವನ್ನು ಸಾರುವ ಹಬ್ಬವೆಂದೇ ಪ್ರತೀತಿ ಆದರೆ, ಇಂತಹ ಅರಮನೆಯ ಬಗ್ಗೆ ಜ್ಞಾನವಿರಬೇಕಾದದ್ದು, ಮಾಹಿತಿ ದೊರಕಬೇಕಿದ್ದ ವೆಬ್ ಸೈಟ್ ನಲ್ಲಿ ಮಾತೃಭಾಷೆ ಕನ್ನಡವೇ ಇಲ್ಲದಂತಾಗಿದೆ.

   ಇದೊಂದು ನವೀಕೃತ ವೆಬ್ ಸೈಟ್ ಆಗಿದ್ದು, ಈ ಹಿಂದಿನ ವೆಬ್ಸೈಟ್ ನಲ್ಲಿ ಮಾಹಿತಿ ಕನ್ನಡದಲ್ಲಿತ್ತು. ಆದರೆ ಹೊಸ ತಂತ್ರಜ್ಞಾನದ ಅಳವಡಿಕೆ ಹಾಗೂ ಎಲ್ಲರಿಗೂ ಅರ್ಥವಾಗಬೇಕೆಂಬ ನಿಟ್ಟಿನಲ್ಲಿ ಬದಲಾವಣೆ ತರಲಾಗಿದೆ. ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಸದ್ಯದಲ್ಲೇ ಕನ್ನಡೀಕರಣಗೊಳಿಸತ್ತೇವೆಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ. ಆದರೆ, ಹಳೆಯ ವೆಬ್ ಸೈಟ್ ಹೇಗಾದರೂ ಇರಲಿ ಆದರೆ ನವೀಕೃತ ವೆಬ್ ಸೈಟ್ ಆದರೂ ಕನ್ನಡದಲ್ಲಿರಬೇಕು ಇಂಗ್ಲಿಷ್ ಅನ್ನು ಆಯ್ಕೆ ಭಾಷೆಯಾಗಿ ನೀಡಬೇಕಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

   ಈ ವೆಬ್ಸೈಟ್ ಮೂಲಕ ಕನ್ನಡಿಗರು ಈ - ಟಿಕೆಟ್ ಪಡೆಯುತ್ತಾರೆ. ಕೇವಲ ಹೊರರಾಜ್ಯದ ಹಾಗೂ ವಿದೇಶದ ಪ್ರವಾಸಿಗರು ಮಾತ್ರವೇ ವೆಬ್ ಸೈಟ್ ಮೂಲಕ ಈ - ಟಿಕೆಟ್ ಪಡೆಯುವುದಿಲ್ಲ. ಕನ್ನಡಿಗರೇ ಹೆಚ್ಚಾಗಿ ಈ ಜಾಲತಾಣವನ್ನು ಬಳಸಿ ಈ- ಟಿಕೆಟ್ ಪಡೆಯುತ್ತಿದ್ದು, . ಉದ್ದದ ಸಾಲಿನಲ್ಲಿ ನಿಲ್ಲುವ ಬದಲು ಇಲ್ಲಿ ಟಿಕೇಟ್ ಮೂಲಕ ಪ್ರವೇಶಿಸುತ್ತಾರೆ . ಆದರೆ ಇಲ್ಲಿ ಸಂಪೂರ್ಣ ಆಂಗ್ಲಮಯವಾದ್ದರಿಂದ ಕನ್ನಡಿಗರೇ ಇಂಗ್ಲಿಷ್ ಭಾಷೆಯ ಮೊರೆ ಹೋಗಬೇಕಾದ ಪರಿಸ್ಥಿತಿಗೆ ಹೊಸ ವೆಬ್ ಸೈಟ್ ದೂಡಿದೆ.

   ಅರಮನೆ ಮಂಡಳಿ ಖುದ್ದು ಆಸಕ್ತಿ ವಹಿಸಿ ಈ ವೆಬ್ಸೈಟ್ ರೂಪಿಸಿದೆ. ಎಂಎಸ್ ಸಾಫ್ಟ್ ವೇರ್ ಸಂಸ್ಥೆಯವರು ಇದನ್ನು ಅಭಿವೃದ್ಧಿ ಪಡಿಸಿದ್ದಾರೆ

   ಇದರ ವಿಶೇಷತೆಗಳೇನು?

   ಕನ್ನಡ ಇಲ್ಲ ಎನ್ನುವುದನ್ನು ಬಿಟ್ಟರೆ ವೆಬ್ ಸೈಟ್ ನಲ್ಲಿ ಸಕಾರಾತ್ಮಕ ಅಂಶಗಳಿವೆ. ವರ್ಚುಯಲ್ ಟೂರ್ ಎಂಬ ಹೊಸ ವಿಭಾಗವನ್ನು ಪರಿಚಯಿಸಲಾಗಿದೆ . ಇದರ ಮೂಲಕ ಸಂಪೂರ್ಣ ಅರಮನೆಯನ್ನು ಸುತ್ತಾಡಿ ಬಂದಂತಹ ಅನುಭವವನ್ನು ಪಡೆಯಬಹುದು . ಇನ್ನು ಮುಂದಕ್ಕೆ ಹೋದಂತೆಲ್ಲಾ ವಿವಿಧ ಬಗೆಗಳಲ್ಲಿ ಅರಮನೆಯ ದೃಶ್ಯಾವಳಿಗಳು ಸಿಗುತ್ತವೆ . ಜಿಲ್ಲೆಯ ವೆಬ್ ಸೈಟ್ ಗಳ ಮಟ್ಟಿಗೆ ಇದೊಂದು ನೂತನ ಅಂಶವಾಗಿದೆ

   ವರ್ಣ ಚಿತ್ರಗಳಿವೆ ವಿವರಣೆಯೇ ಇಲ್ಲ!

   ವೆಬ್ ಸೈಟ್ ನಲ್ಲಿ ಹದಿನಾರು ಅಪರೂಪದ ದಸರಾ ವರ್ಣಚಿತ್ರಗಳನ್ನು ಸೇರಿಸಲಾಗಿದೆ. ಉತ್ತಮ ಗುಣಮಟ್ಟದ ಈ ಚಿತ್ರಗಳು ಗತಕಾಲದ ದಸರಾ ವೈಭವವನ್ನು ನೆನಪಿಸುತ್ತವೆ. ಆದರೆ ಈ ಚಿತ್ರಗಳು ಇಲ್ಲಿವೆ ಇದನ್ನು ಬರೆದವರು ಯಾರು ಯಾವ ಕಾಲದ್ದು ಎಂಬ ಸಂಪೂರ್ಣ ಮಾಹಿತಿಯೇ ನಮಗೆ ಸಿಗುವುದಿಲ್ಲ . ಇನ್ನು ವೆಬ್ ಸೈಟ್ ನಲ್ಲಿ ಕೆಲವೊಂದು ವಿಭಾಗಗಳನ್ನು ಕ್ಲಿಕ್ ಮಾಡಿದರೆ ಸಾರಿ ವಿ ಆರ್ ಡೂಯಿಂಗ್ ಸಮ ವರ್ಕ್ ಮಂದಿ ಸೈಟ್ ಎಂಬ ಬರಹ ಕಾಣಿಸಿಕೊಳ್ಳುತ್ತದೆ . ಒಟ್ಟಾರೆ ಮಾಹಿತಿ ನೀಡಬೇಕಾದ ಈ ಅರಮನೆಯ ಜಾಲತಾಣ ಮಾಹಿತಿಯ ಕೊರತೆ ಹಾಗೂ ಕನ್ನಡೀಕರಣ ಗೊಳ್ಳದ ಹಿನ್ನೆಲೆ ಜನರನ್ನು ಗೊಂದಲಕ್ಕೀಡು ಮಾಡಿದಂತಿದೆ

   ದಸರಾ ಆಪ್ ಗೆ ಜನರ ಕೋರಿಕೆ

   ವೆಬ್ಸೈಟ್ ಗಿಂತ ಪ್ರಮುಖವಾಗಿ ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್ ಆಪ್ ಬೇಕು ಎಂಬುದು ಯುವಕರ ಬೇಡಿಕೆ. ಇದರ ಮೂಲಕವೇ ಹಲವು ಮಂದಿ ಮಾಹಿತಿ ಪಡೆಯುತ್ತಾರೆ . ಆದರೆ ದಸರೆ ಕುರಿತು ಯಾವುದೇ ಆಪ್ ಅನ್ನು ಸರಕಾರ ಬಿಡುಗಡೆ ಮಾಡಿಲ್ಲ . ಆಶ್ಚರ್ಯದ ಮೈಸೂರಿಗಿಂತ ಮುಂಚಿತವಾಗಿಯೇ ಮಡಿಕೇರಿಯ ದಸರೆ ಆಪ್ ಈಗಾಗಲೇ ಬಿಡುಗಡೆಯಾಗಿದೆ . ಮೈಸೂರು ಜಿಲ್ಲಾಡಳಿತ ಏಕೆ ಇದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಜನರಲ್ಲಿ ಸದ್ಯ ಮೂಡಿರುವ ಪ್ರಶ್ನೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Eventhough Kannada Development Authority(KDA) has instructed to use Kannada language in all government department website, Mysuru Palace website has not used kannada yet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more