• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ, ಡಿಕೆಶಿ ಬಣ ಅಷ್ಟೇ ಅಲ್ಲ ಇನ್ನೂ ಎರಡು ಬಣಗಳಿವೆ..!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 14: ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣದ ಸಮಸ್ಯೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಕೇವಲ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಬಣ ಅಷ್ಟೇ ಇಲ್ಲ. ಕಾಂಗ್ರೆಸ್ ನಲ್ಲಿ ನಾಲ್ಕು ಬಣಗಳಿವೆ ಆ ನಾಲ್ಕು ಗುಂಪುಗಳು ಸಹ ಪ್ರಬಲರಾಗುತ್ತಿದ್ದಾರೆ. ಕಾಟಾಚಾರಕ್ಕೆ ಆ ನಾಲ್ಕು ಗುಂಪುಗಳು ಎದುರು ಸಿಕ್ಕಾಗ ನಗುವುದು, ಮಾತನಾಡುವುದು ಮಾಡ್ತಾರೆ. ಅದಕ್ಕೆ ರಮ್ಯಾ ಟ್ವೀಟ್ ಗೆ ಇಷ್ಟು ದೊಡ್ಡ ವಿಷಯ ಮಾಡಿಕೊಂಡು ಕಿತ್ತಾಡಿಕೊಳ್ಳುವುದು ನೋಡಿದ್ರೆ ತಿಳಿಯುತ್ತದೆ ಅವರ ಪಕ್ಷದ ಒಡಕು ಎಂದು ಹೇಳಿದರು.

ಮೈಸೂರು ಭಾಗದ ಘಟನಾಘಟಿ ನಾಯಕರು ಬಿಜೆಪಿಗೆ

ಮೈಸೂರು ಭಾಗದಲ್ಲಿ ಬೇರೆ ಬೇರೆ ಪಕ್ಷದವರು ಬಿಜೆಪಿ ಸೇರ್ಪಡೆಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅದರ ಬಗ್ಗೆ ಇನ್ನೂ ಫೈನಲ್ ಆಗಿಲ್ಲ. ಇಂದಷ್ಟು ಜನ ಮಾಹಿತಿ ಕೊಟ್ಟಿದ್ದಾರೆ ಅದನ್ನ ಪಕ್ಷದ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಕಳೆದ ವಾರ ಒಂದು ಬ್ಯಾಚ್ ನಲ್ಲಿ 5 ರಿಂದ 6 ಜನ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಎರಡನೇ ಬ್ಯಾಚ್ ವಿವಿಧ ಹಂತಗಳಲ್ಲಿ ಚರ್ಚೆ ಆಗುತ್ತೆ. ಎಲ್ಲಾ ಚರ್ಚೆ ನಡೆಸಿ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಅವರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳಲಿದ್ದೇವೆ. ಯಾವ ಹಂತದ ನಾಯಕರು ಅಂತ ಹೇಳೋಕೆ ಆಗಲ್ಲ. ಘಟಾನುಘಟಿ ನಾಯಕರೇ ಬಿಜೆಪಿ ಸೇರುತ್ತಾರೆ ಅದನ್ನ ಬಹಿರಂಗ ಪಡಿಸುವಂತಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷದಿಂದ ಬಿಜೆಪಿ ಸೇರಲಿದ್ದಾರೆ.

ವಿರೋಧ ಪಕ್ಷದ ನಾಯಕರ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿಲ್ಲ

ರಾಜ್ಯದಲ್ಲಿ ಈಗ ಇರುವ ಮುಖ್ಯಮಂತ್ರಿಗಳು ದುರ್ಬಲ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಸಿದ ಸಚಿವ ಸೋಮಶೇಖರ್, ಯಾವುದೇ ಕಾರಣಕ್ಕೂ ಸಿಎಂ ಬಸವರಾಜ ಬೊಮ್ಮಾಯಿಯವರು ದುರ್ಬಲಾಗಿಲ್ಲ. ಸಾರ್ವಜನಿಕರಿಗೆ ಅನುಕೂಲ ಆಗುವಂತಹ ನಿರ್ಧಾರಗಳನ್ನೇ ಮಾಡಿದ್ದಾರೆ. ಯಾವುದಾದರೂ ತಪ್ಪು ನಿರ್ಧಾರಗಳು ಇದ್ದರೆ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ವಿಷಯಗಳ ಬಗ್ಗೆ ಸಾಧಕ-ಬಾಧಕಗಳನ್ನ ಚರ್ಚಿಸಿ ನೂರಾರು ಬಾರಿ ಯೋಚಿಸಿ ನಿರ್ಧಾರ ಮಾಡುತ್ತಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೇಲೆ ಒಂದೇ ಒಂದು ಆರೋಪ ಇಲ್ಲ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು ಅವರ ಅಸ್ತಿತ್ವ ಉಳಿಸಿಕೊಳ್ಳುವುದಿಂದ ವಿನಾಕಾರಣ ಆರೋಪ ಮಾಡ್ತಾರೆ ಅಷ್ಟೇ. ಅವರು ವಿರೋಧ ಪಕ್ಷದ ನಾಯಕರ ಕೆಲಸ ಮಾಡುತ್ತಲೇ ಇಲ್ಲ. ಕಾಂಗ್ರಸ್ ಪಕ್ಷದಲ್ಲಿ ಇದ್ದೇನೆ ಅಂತ ತೋರಿಸೋದಕ್ಕೆ ಮಾತಾಡುತ್ತಾರೆ ಅಷ್ಟೇ.

There are four groups in the Congress party

ಜಿಟಿ ದೇವೇಗೌಡ ಭೇಟಿ ವಿಚಾರ

ಜಿಟಿ ದೇವೇಗೌಡ ಭೇಟಿ ವಿಚಾರ ಸಂಬಂಧಿಸಿದಂತೆ ಮಾತನಾಡಿದ ಅವರು, ಜಿಟಿ ದೇವೇಗೌಡರು ಅವರ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿ ಪೂಜೆ ಇದೆ ಅಂತ ಬಂದಿದ್ರು. ನೀತಿ ಸಂಹಿತೆ ಜೂನ್ 13ನೇ ತಾರೀಖಿನಚರೆಗೂ ಇದೆ. ನಾನು ಜಿಲ್ಲಾಧಿಕಾರಿಗಳನ್ನ ಕೇಳಿದಂತಹ ಸಮಯದಲ್ಲಿ ಯಾವುದೇ ಕಾರಣಕ್ಕೂ ಸರ್ಕಾರಿ ಕಾರ್ಯಕ್ರಮಗಳನ್ನ ಕಾಮಗಾರಿ ಅಥವಾ ಉದ್ಘಾಟನೆ ಮಾಡಬಾರದು ಅಂತ ಇತ್ತು. ಹಾಗಾಗಿ ಜಿಲ್ಲಾಧಿಕಾರಿಗಳ ಮುಖಾಂತರ ಸ್ಪಷ್ಟನೆ ನೀಡಿಸಿದ್ದೇನೆ. ಅವರ ಕ್ಷೇತ್ರದಲ್ಲಿ ಬೇರೆ ಏನಾದ್ರು ಸರ್ಕಾರಿ ಕಾರ್ಯಕ್ರಮಗಳ ಇದ್ರೆ ಜೂನ್‌.13 ನಂತರ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದೇನೆ.

ಸದ್ಯಕ್ಕೆ ನಾನು ಮೈಸೂರು ಜಿಲ್ಲೆ ಉಸ್ತವಾರಿ ಸಚಿವ..!

ಆಯಾ ಜಿಲ್ಲೆಯವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೊಡಬಾರದು ಅಂತ ಮೈಸೂರು ಕೊಟದಟಿದ್ದಾರೆ. ಸದ್ಯಕ್ಕೆ ನಾನು ಮೈಸೂರಿನ ಉಸ್ತವಾರಿ ಸಚಿವನಾಗಿದ್ದಾನೆ. ನೀವೇನಾದರೂ ಬೇಡ ಅಂದರೆ ಬೇರೆ ಜಿಲ್ಲೆ ನೋಡ್ಕೊತ್ತೀನಿ. ನಮ್ಮ ವರಿಷ್ಟರು ಎರಡು ಬಾರಿ ಮರು ನೇಮಕ ಮಾಡಿದ್ದಾರೆ. ಮೈಸೂರಿನಲ್ಲಿ ಸಣ್ಣಪುಟ್ಟ ಅಭಿವೃದ್ಧಿ ಕೆಲಸ ಮಾಡಿಕೊಂಡು ಹೋಗ್ತಿದ್ದೀನಿ. ನೋಡೋಣ ಮುಂದೆ ಪಕ್ಷದ ವರಿಷ್ಟರು ಏನೇನ್ ಮಾಡ್ತಾರೆ ಅಂತ

ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರ ಚುನಾವಣೆ ಬಿಜೆಪಿ ಪರ ಒಲವಿದೆ..!

ನಿನ್ನೆಯಿಂದ ಪ್ರಚಾರ ಶುರು ಮಾಡಿದ್ದೇವೆ. ಹುಣಸೂರಿನಲ್ಲಿ ಪ್ರಚಾರ ಮುಕ್ತಾಯ ಮಾಡಿದ್ದೇವೆ. ಅಲ್ಲಿ ಬೆಜೆಪಿ ಪರವಾದ ಒಲವಿದೆ. ಶಿಕ್ಷಕರು ಮತ್ತೆ ಪದವೀಧರ ಭೇಟಿ ಸಂದರ್ಭದಲ್ಲಿ ಹೊಸಬರಿಗೆ ಅವಕಾಶ ಕೊಡೋಣ ಎಂಬ ಒಲವು ತೋರಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದೆ ಆದ್ದರಿಂದ ನಮ್ಮ ಹಲವಾರು ಬೇಡಿಕೆಗಳನ್ನ ಸರ್ಕಾರದ ಮಟ್ಟದಲ್ಲಿ ಬಗೆಹರಿಸುತ್ತಾರೆ ಅಂತ ಹೇಳಿದ್ದಾರೆ ಅದಕ್ಕೆ ನಾವು ಕೂಡ ಒಪ್ಪಿದ್ದೇವೆ ಈಗ ಹೆಚ್.ಡಿ ಕೋಟೆ ಪ್ರಚಾರಕ್ಕೆ ಹೋಗುತ್ತಿದ್ದೇವೆ.

English summary
There are four groups in the Congress party, including Siddaramaiah and DK Sivakumar, said ST Somashekhar, BJP joins Mysore Congress and JDS party big leaders in next few days,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X