• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೂರು ವರ್ಷದ ಸಂಭ್ರಮದಲ್ಲಿರುವ ಮೈಸೂರು ವಿವಿ

By Vanitha
|

ಮೈಸೂರು, ಜುಲೈ,13 : ಮಾನಸಗಂಗೋತ್ರಿ ವಿಶ್ವವಿದ್ಯಾನಿಲಯ ಶತಮಾನೋತ್ಸವದ ಹೊಸ್ತಿಲಿನಲ್ಲಿದ್ದು, ಆಚರಣೆಯ ಸಂಭ್ರಮವು ಬಯಲು ರಂಗಮಂದಿರದಲ್ಲಿ ಭಾನುವಾರ ಭರ್ಜರಿಯಾಗಿ ನೆರೆವೇರಿತು.

ಮಾನಸ ವಿವಿ 1916 ಜುಲೈ 27 ರಲ್ಲಿ ಸ್ಥಾಪನೆಯಾಗಿದ್ದು, ಮುಂದಿನ ವರ್ಷಕ್ಕೆ ನೂರಾರ ಅನಂತ ಸಾಧನೆಗೆ ಹೆಜ್ಜೆ ಇಡಲಿದೆ. ಈ ಆಚರಣೆ ಸಂತಸದಲ್ಲಿರುವ ವಿವಿಯ ಶತಮಾನೋತ್ಸವ ಗೀತೆ ಮತ್ತು ಅದರ ಮಹತ್ವವನ್ನು ಸಾರುವ ಸಿಡಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಶತಮಾನೋತ್ಸವಕ್ಕೆ 50 ಕೋಟಿ ಅನುದಾನ ಘೋಷಿಸಿದ್ದೇನೆ. ಜುಲೈ 27ರ ವಿವಿ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಮಿಸಲಿದ್ದಾರೆ ಎಂದರು.[ಮೈಸೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳೆಲ್ಲ ಒಂದಾಗಿ ಬನ್ನಿ]

ಹಿರಿಯ ಸಾಹಿತಿ ಪ್ರೊ.ಸಿ.ಪಿ. ಕೃಷ್ಣಕುಮಾರ್, ರಾಜಪ್ಪ ದಳವಾಯಿ, ಕೆ.ವೈ ನಾರಾಯಣ ಸ್ವಾಮಿ, ವಿಕ್ರಂ ವಿಸಾಜಿ, ಪ್ರೊ. ಸಿ .ನಾಗಣ್ಣ, ಕೆ. ಷರೀಫಾ, ಡಾ. ಮೂಡ್ನಾಕೋಡು ಚಿನ್ನಸ್ವಾಮಿ, ಹಂಸಲೇಖ ಸೇರಿದಂತೆ ಹಲವಾರು ಸಾಹಿತಿಗಳು ಶತಮಾನೋತ್ಸವ ಗೀತೆ ರಚನೆಗೆ ಸಹಕರಿಸಿದ್ದಾರೆ. ಸಾಹಿತ್ಯಕ್ಕೆ ಹಂಸಲೇಖ, ರಾಜೇಶ್ ಕೃಷ್ನನ್, ಸುಪ್ರಿಯಾ ಲೋಹಿತ್ ರಾಗ ಸಂಯೋಜನೆ ಮಾಡಿ ದನಿಗೂಡಿಸಿದ್ದಾರೆ. ಶತಮಾನೋತ್ಸವ ಗೀತೆಯ ಸಿಡಿ ಬಿಡುಗಡೆ ಸಂದರ್ಭದಲ್ಲಿ ಅದನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ೪ ನೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ವಿವಿ ಸ್ಥಾಪನೆ ಸಾಧ್ಯವಾಯಿತು. ಸಂಸ್ಥಾನದ ಜನರಿಗೆ ಶಿಕ್ಷಣ ಒದಗಿಸಬೇಕು ಎಂಬುದು ಅವರ ಮೂಲ ಗುರಿಯಾಗಿತ್ತು, ಈ ಸದುದ್ದೇಶದಿಂದ ಸ್ಥಾಪನೆಯಾದ ವಿವಿ ಗೆ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ ಸೇರಿದಂತೆ ಸಾಕಷ್ಟು ಕುಲಪತಿಗಳು ಇದರ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.[ಮೈಸೂರಿನಿಂದ ಕೆಎಸ್‌ಟಿಡಿಸಿ ವಿಶೇಷ ಟೂರ್ ಪ್ಯಾಕೇಜ್]

ಮೈಸೂರು ವಿವಿ ಪ್ರಸಾರಾಂಗ ಪ್ರಕಟಿಸಿರುವ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ವಿರಚಿತ ಅನ್ನದಾತರ ಆತ್ಮಕತೆ ಪುಸ್ತಕ ಅನಾವರಣಗೊಳಿಸಿ ಆತ್ಮಹತ್ಯೆಯೊಂದೇ ಎಲ್ಲದಕ್ಕೂ ಪರಿಹಾರವಲ್ಲ, ಸರ್ಕಾರ ನಿಮ್ಮೊಂದಿಗಿರುತ್ತದೆ ಎಂದು ರೈತರು ಭಾವಿಸಬೇಕು ಎಂದು ಭರವಸೆಯ ಮಾತುಗಳಾಡಿದರು.

English summary
Chief Minister Siddaramaiah released the theme song CD at Open Air Theatre, Manasa gangotri on sunday. Manasa Gangotri v.v century celebration on july 27. President of Pranab Mukherjee is the chief guest on the function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X