ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

20ನೇ ಭಾರತ ರಂಗ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜು

|
Google Oneindia Kannada News

ಮೈಸೂರು, ಫೆಬ್ರವರಿ 7: ಕೇಂದ್ರ ಸರ್ಕಾರದ ವತಿಯಿಂದ 20 ನೇ ಭಾರತ ರಂಗ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ ಎಂದು ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ತಿಳಿಸಿದರು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ರಾಷ್ಟ್ರೀಯ ನಾಟಕ ಶಾಲೆಯು ಮೈಸೂರು ರಂಗಾಯಣ ಸಹಯೋಗದಲ್ಲಿ ಫೆ.11 ರಿಂದ 17 ರವರೆಗೆ ಕಲಾಮಂದಿರದ ರಂಗಾಯಣದಲ್ಲಿ ನಾಟಕೋತ್ಸವ ನಡೆಯಲಿದೆ.

ರಂಗಾಯಣದಲ್ಲಿ ಬಹುರೂಪಿಯ ಗುಂಗಿಗೆ ಮನಸೋತ ರಂಗಾಸಕ್ತರುರಂಗಾಯಣದಲ್ಲಿ ಬಹುರೂಪಿಯ ಗುಂಗಿಗೆ ಮನಸೋತ ರಂಗಾಸಕ್ತರು

ಈ ಹಿನ್ನೆಲೆಯಲ್ಲಿ ಒಟ್ಟಾರೆ 7 ನಾಟಕಗಳು ಪ್ರದರ್ಶನಗೊಳ್ಳಲಿವೆ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅಂತರಾಷ್ಟ್ರೀಯ ನಾಟಕೋತ್ಸವ ಮತ್ತು ರಂಗಶಿಕ್ಷಣ ಕುರಿತು ವಿಚಾರಸಂಕಿರಣ, ರಂಗಭೂಮಿಗೆ ಸಂಬಂಧಿಸಿದ ಹಲವಾರು ಸಂವಾದವನ್ನು ಈ ವೇಳೆ ಆಯೋಜಿಸಲಾಗಿದೆ ಎಂದರು.

Theater Festival will be held in Rangayana

ಇನ್ನು ಸಿನಿಮಾ ಶೈಲಿಯಲ್ಲಿ ನಾಟಕೋತ್ಸವ ನಡೆಯಲಿದ್ದು, ನಾಟಕೋತ್ಸವಕ್ಕೆ ಉಚಿತ ಪ್ರವೇಶ ನೀಡಲಾಗಿದೆ. ಸಾರ್ವಜನಿಕರು ಕಲಾವಿದರನ್ನು ಪ್ರೋತ್ಸಾಹಿಸಿ ನಾಟಕೋತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

 ಮದುವೆ ಮನೆ ಸಂಭ್ರಮ ಮೂಡಿಸಿದ ರಂಗಾಯಣದ ಆವರಣ ಮದುವೆ ಮನೆ ಸಂಭ್ರಮ ಮೂಡಿಸಿದ ರಂಗಾಯಣದ ಆವರಣ

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಹಿರಿಯ ಪ್ರಾಧ್ಯಾಪಕ ಆಶೋಕ್ಸಾಗರ್ ಭಗತ್ಸೇರಿದಂತೆ ವೇದಿಕೆಯ ಗಣ್ಯರು ಭಾರತರಂಗ ಮಹೋತ್ಸವ ನಾಟಕದ ಪೋಸ್ಟರ್ ಬಿಡುಗಡೆಗೊಳಿಸಿದರು.

English summary
Theater Festival will be held in Rangayana, Kalamandir at Mysuru from February 11 to 17.On this reason overall 7 plays will be screened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X