ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ; ವೀಡಿಯೋ ವೈರಲ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 21: ಇಬ್ಬರು ರೌಡಿಶೀಟರ್ ಗಳು ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಮನಬಂದಂತೆ ಥಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು ಈ ವೀಡಿಯೋ ಈಗ ವೈರಲ್ ಆಗಿದೆ.

ಕರ್ತವ್ಯದಲ್ಲಿದ್ದ ಮುಖ್ಯಪೇದೆ ಮಂಜುನಾಥ್ ಅವರ ಮೇಲೆ ರೌಡಿಶೀಟರ್ ಸೋಮಶೇಖರ್ ಅಲಿಯಾಸ್ ಸೋಮು ಮತ್ತು ತಂಡದವರು ಹಲ್ಲೆ ನಡೆಸಿದ್ದಾರೆ. ಮಂಜುನಾಥ್ ಮೇಲೆ ಹಲ್ಲೆ ನಡೆಸಿರುವ ಈ ದೃಶ್ಯಾವಳಿಗಳು ವಾಟ್ಸ್ ಆಪ್‌ ನಲ್ಲಿ ಹರಿದಾಡುತ್ತಿವೆ.

ಮಲ್ಪೆ ಮೀನುಗಾರರ ಮೇಲೆ ಮಹಾರಾಷ್ಟ್ರದ ಮೀನುಗಾರರಿಂದ ಹಲ್ಲೆಮಲ್ಪೆ ಮೀನುಗಾರರ ಮೇಲೆ ಮಹಾರಾಷ್ಟ್ರದ ಮೀನುಗಾರರಿಂದ ಹಲ್ಲೆ

ಮಂಜುನಾಥ್ ಮತ್ತು ಆರೋಪಿ ಸೋಮು ನಡುವೆ ಅಂಗಡಿ ಮುಚ್ಚುವ ವಿಚಾರದಲ್ಲಿ ಗಲಾಟೆ ನಡೆದಿದೆ. ಅಂಗಡಿಯನ್ನು ರೌಡಿಶೀಟರ್ ಸೋಮನ ಸಹೋದರಿ ಲತಾ ನಡೆಸುತ್ತಿದ್ದರು. ಶುಕ್ರವಾರ ರಾತ್ರಿ 11 ಗಂಟೆಯಾದರೂ ಅಂಗಡಿ ತೆರೆದಿತ್ತು. ಈ ವೇಳೆ ಅಂಗಡಿ ಮುಚ್ಚುವಂತೆ ಹೇಳಲು ಮಂಜುನಾಥ್ ಹೋಗಿದ್ದರು. ಆ ಸಂದರ್ಭದಲ್ಲಿ ವಾಗ್ವಾದ ಉಂಟಾಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

The Video Of Attack On Police In Mysuru Going Viral

ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಸೋಮಶೇಖರ್, ಚಂದ್ರಶೇಖರ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಬ್ಬ ಆರೋಪಿ ರೌಡಿಶೀಟರ್ ಸಹೋದರಿ ಲತಾ ಸಹ ಪರಾರಿಯಾಗಿದ್ದಾರೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಮಾಲೀಕನ ಅಮಾನವೀಯ ವರ್ತನೆ ಕ್ಯಾಮರಾದಲ್ಲಿ ಸೆರೆಬೆಂಗಳೂರು: ಮಾಲೀಕನ ಅಮಾನವೀಯ ವರ್ತನೆ ಕ್ಯಾಮರಾದಲ್ಲಿ ಸೆರೆ

ದೇವರಾಜ ಪೋಲಿಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಆಗಿರುವ ಸೋಮಶೇಖರ್ ನನ್ನು ಕಳೆದ ಚುನಾವಣೆ ಸಂದರ್ಭ ಪೊಲೀಸರು ಗಡಿಪಾರು ಮಾಡಿದ್ದರು. ಹಲವು ಪ್ರಮುಖ ಪ್ರಕರಣಗಳಲ್ಲಿ ಸೋಮ ಪೊಲೀಸರಿಗೆ ಬೇಕಾಗಿದ್ದಾನೆ.

English summary
The video of two rowdy sheaters assualting police officer is going viral in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X