{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/mysuru/the-mysore-wodeyar-dynasty-maharajas-080079.html" }, "headline": " ಮೈಸೂರು ಯದುವಂಶ ಒಡೆಯರ್ ವಂಶಾವಳಿ", "url":"https://kannada.oneindia.com/news/mysuru/the-mysore-wodeyar-dynasty-maharajas-080079.html", "image": { "@type": "ImageObject", "url": "http://kannada.oneindia.com/img/1200x60x675/2013/12/11-wodeyar-dynasty2.jpg", "width": "1200", "height":"675" }, "thumbnailUrl":"http://kannada.oneindia.com/img/128x50/2013/12/11-wodeyar-dynasty2.jpg", "datePublished": "2013-12-11T13:35:37+05:30", "dateModified": "2013-12-11T16:29:03+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Mysore", "description": "The Wodeyar dynasty was an Indian Hindu dynasty that ruled the Kingdom of Mysore from 1399 to 1947, until the independence of India from British rule and the subsequent unification of the Indian dominion and princely states into the Republic of India.", "keywords": "The Mysore Wodeyar dynasty, ಮೈಸೂರು ಯದುವಂಶ ಒಡೆಯರ್ ವಂಶಾವಳಿ", "articleBody":"ಮೈಸೂರು, ಡಿ.11: ಮೈಸೂರು ಸಂಸ್ಥಾನದ ಯದುವಂಶ ವಿಶಿಷ್ಟವಾದ ರಾಜಮನೆತನ. ಭಾರತಕ್ಕೆ ಸ್ವಾಂತಂತ್ರ್ಯ ಬಂದ ನಂತರವೂ ಒಡೆಯರ್ ಅಥವಾ ವಡೀಯಾರ್ ಸರ್ ನೇಮ್ ಬಳಕೆ ರಾಜಮನೆತನದ ಸದಸ್ಯರಲ್ಲೇ ಉಳಿಸಿಕೊಳ್ಳಲಾಗಿತ್ತು. 1399 ರಿಂದ 1947ರ ತನಕ ರಾಜ್ಯಭಾರ ಮಾಡಿದ ಯದುವಂಶ ಸ್ಥಾಪಕ ಯದುರಾಯ ಅಥವಾ ವಿಜಯ.ಸೋದರ ಕೃಷ್ಣ ಅಥವಾ ಕೃಷ್ಣರಾಯನೊಂದಿಗೆ ಯದುರಾಯ ದ್ವಾರಕೆಯಿಂದ ತೀರ್ಥಯಾತ್ರೆಗಾಗಿ ಮೈಸೂರಿಗೆ ಬಂದಿದರು. ಮೇಲುಕೋಟೆ ದೇಗುಲಕ್ಕೆ ಭೇಟಿ ಕೊಟ್ಟ ನಂತರ ದೊಡ್ಡಕೆರೆ ಸಮೀಪವಿರುವ ಕೋಡಿ ಬಸವಣ್ಣ ದೇಗುಲದಲ್ಲಿ ಇಬ್ಬರು ನೆಲೆಸಿದ್ದರು. ಪ್ರಾಂತ್ಯದ ರಾಜ ನಿಧನರಾಗಿದ್ದು ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಎಂದು ಮಹಾರಾಣಿ ಅವರಿಗೆ ಬೆದರಿಕೆ ಒಡ್ಡಿದ ಪಕ್ಕದ ರಾಜ್ಯ ಕರುಗಹಳ್ಳಿಯ ಮಾರನಾಯಕ ಪೀಡಿಸುತ್ತಿರುತ್ತಾನೆ.ಈ ಸಂದರ್ಭದಲ್ಲಿ ಯಾತ್ರಾರ್ಥಿಗಳಾಗಿದ್ದ ಯದುರಾಯ ಹಾಗೂ ಕೃಷ್ಣರಾಯರಿಗೆ ಈ ವಿಷಯ ತಿಳಿಯುತ್ತದೆ. ಜಂಗಮ ಸ್ವಾಮಿಗಳೊಬ್ಬರ ನೆರವು ಪಡೆದು ಮಾರನಾಯಕನನ್ನು ಬಗ್ಗು ಬಡಿದು ಮೈಸೂರನ್ನು ಉಳಿಸಿ ಯದುವಂಶ ಸ್ಥಾಪಿಸುತ್ತಾರೆ. ಅಲ್ಲಿಂದ ಇಲ್ಲಿವರೆಗೂ ಸುಮಾರು 25ಕ್ಕೂ ರಾಜರ ರಾಜ್ಯಭಾರ ಮಾಡಿದ್ದಾರೆ. ಸ್ವಾತಂತ್ರ್ಯದ ಬಳಿಕ ಮೈಸೂರು ರಾಜ್ಯ ಭಾರತ ಗಣರಾಜ್ಯಕ್ಕೆ ಸೇರ್ಪಡೆಗೊಳ್ಳುತ್ತದೆ. ಯದುವಂಶದ ಮೈಸೂರು ದೊರೆಗಳನ್ನು ಒಡೆಯರ್(ಒಡೆಯ) ಎಂದು ಗುರುತಿಸಲಾಗುತ್ತದೆ.ಕ್ರಿ.ಶ.1399ರಲ್ಲಿ ಮೈಸೂರಿನಲ್ಲಿ ರಾಜ್ಯಸ್ಥಾಪನೆ ಮಾಡಿದ್ದರು. ಅಂದು 23 ಹಳ್ಳಿಗಳ ರಾಜ್ಯವಾಗಿದ್ದ ಮೈಸೂರು ಕ್ರಿ.ಶ.1578ರಷ್ಟು ಸಮಯದವರೆಗೂ ಕೇವಲ 33 ಹಳ್ಳಿಗಳಿದ್ದ ಒಂದು ಸಣ್ಣ ಪಾಳೆಯಪಟ್ಟಾವಾಗಿತ್ತು. ಅಲ್ಲಿದ್ದ ಸೈನ್ಯ ಕೇವಲ 300 ಜನ ಯೋಧರಿಂದ ಕೂಡಿದ್ದು. ವಾರ್ಷಿಕ ವರಮಾನ 25 ಸಾವಿರ ವರಹಗಳಷ್ಟಿತ್ತು.ಕ್ರಿ.ಶ.1616ರವರೆಗೆ ಇವರು ವಿಜಯನಗರ ಮತ್ತು ದಿಲ್ಲಿ ಸಾಮ್ರಾಟರಿಗೆ ಕಪ್ಪಕೊಡುತ್ತಿದ್ದ ಬಗ್ಗೆ ದಾಖಲೆಗಳಿವೆ. 1761ರ ಅಕ್ಕಪಕ್ಕದ ವರ್ಷಗಳಲ್ಲಿ ಹೈದರಾಲಿ ಹಾಗೂ ಅವರ ಪುತ್ರ ಟಿಪ್ಪು ಸುಲ್ತಾನ್ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಒಡೆಯರ್ ಗಳನ್ನು ಹಿಂಬದಿಗೆ ತಳ್ಳಿ ರಾಜ್ಯವಾಳಿದ್ದು ಇತಿಹಾಸ.ಅನಂತರದ ವರ್ಷಗಳಲ್ಲಿ ಕ್ರಮೇಣ ಬಹುದೊಡ್ಡ ಸಾಮ್ರಾಜ್ಯವಾಗಿ ವಿಸ್ತಾರ ಗೊಂಡಿತು. ಯದುವಂಶದ ಮೈಸೂರು ದೊರೆಗಳನ್ನು ಒಡೆಯರ್ ಎಂದು ಗುರುತಿಸಲಾಗುತ್ತಿತ್ತು. ಕ್ರಿ.ಶ.1616ರವರೆಗೆ ಇವರು ವಿಜಯನಗರ ಮತ್ತು ದಿಲ್ಲಿಯ ಸಾಮ್ರಾಟರಿಗೆ ಕಪ್ಪಕೊಡುತ್ತಿದ್ದ ಬಗ್ಗೆ ದಾಖಲೆಗಳಿವೆ. 1761ರ ಅಕ್ಕಪಕ್ಕದ ವರ್ಷಗಳಲ್ಲಿ ಹೈದರಾಲಿ ಹಾಗೂ ಅವರ ಪುತ್ರ ಟಿಪ್ಪು ಸುಲ್ತಾನ್ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಒಡೆಯರ್ ಗಳನ್ನು ಹಿಂಬದಿಗೆ ತಳ್ಳಿ ರಾಜ್ಯವಾಳಿದ ಇತಿಹಾಸ ಪ್ರತ್ಯೇಕ.* ದೇವ ರಾಯ (1399 - 1423).* ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (1423 - 1459)* ತಿಮ್ಮರಾಜ ಒಡೆಯರ್ (1459 - 1479)* ಹಿರಿಯ ಚಾಮರಾಜ ಒಡೆಯರ್ (1479 - 1513)* ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (ಇಮ್ಮಡಿ) (1513 - 1553)* ಬೋಳ ಚಾಮರಾಜ ಒಡೆಯರ್ (1572 - 1576) (ಬೊಕ್ಕ ತಲೆಯುಳ್ಳವ ಎಂದು ಪ್ರಸಿದ್ಧಿ)* ಬೆಟ್ಟದ ಚಾಮರಾಜ ಒಡೆಯರ್ (ಮುಮ್ಮಡಿ) (1576 - 1578)* ರಾಜ ಒಡೆಯರ್ (1578 - 1617)* ಚಾಮರಾಜ ಒಡೆಯರ್ (1617 - 1637).* ಇಮ್ಮಡಿ ರಾಜ ಒಡೆಯರ್ (1637 - 1638)* ರಣಧೀರ ಕ೦ಠೀರವ ನರಸರಾಜ ಒಡೆಯರ್ (1638 - 1659)* ದೊಡ್ಡ ದೇವರಾಜ ಒಡೆಯರ್ (1659 - 1673)* ಚಿಕ್ಕ ದೇವರಾಜ ಒಡೆಯರ್ (1673 - 1704)* ಕ೦ಠೀರವ ನರಸರಾಜ ಒಡೆಯರ್ (1704 - 1714)* ದೊಡ್ಡ ಕೃಷ್ಣರಾಜ ಒಡೆಯರ್ (1732 - 1734)* ಇಮ್ಮಡಿ ಕೃಷ್ಣರಾಜ ಒಡೆಯರ್ (1734 - 1766)* ಬೆಟ್ಟದ ಚಾಮರಾಜ ಒಡೆಯರ್ (1770 - 1776)* ಖಾಸಾ ಚಾಮರಾಜ ಒಡೆಯರ್ (1766 - 1796)* ಮುಮ್ಮಡಿ ಕೃಷ್ಣರಾಜ ಒಡೆಯರ್ (1799 - 1868)* ಮುಮ್ಮಡಿ ಚಾಮರಾಜ ಒಡೆಯರ್ (1868 - 1895)* ನಾಲ್ಮಡಿ ಚಾಮರಾಜ ಒಡೆಯರ್ (1895 - 1940)* ಜಯಚಾಮರಾಜ ಒಡೆಯರ್ (1940 - 1947) * ಮೈಸೂರು ರಾಜ್ಯದ ರಾಜಪ್ರಮುಖರು (1947 - 1956)* ಮೈಸೂರು ರಾಜ್ಯದ ರಾಜ್ಯಪಾಲರು (1956 - 1964)* ಮದ್ರಾಸ್ ರಾಜ್ಯದ ರಾಜ್ಯಪಾಲರು (1964-1966)* 1971ರ ಸಂವಿಧಾನದ 26ನೇ ತಿದ್ದುಪಡಿ ಅನ್ವಯ ಮೈಸೂರಿನ ಅರಸರ ಮಹಾರಾಜ ಪದವಿ ಸರ್ಕಾರಕ್ಕೆ* ಶ್ರೀಕಂಠದತ್ತ ಒಡೆಯರ್ 1974 ರಲ್ಲಿ ಪಟ್ಟಕ್ಕೆ ಬಂದರು. ಖಾಸಗಿ ದರ್ಬಾರಿಗೆ ಅವಕಾಶ (1953-2013)ರಾಜರ ವಂಶಾವಳಿ ಗಮನಿಸಿದರೆ ರಾಜ ಒಡೆಯರ್ , ರಣಧೀರ ಕಂಠೀರವ ನರಸರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ್,ಕೃಷ್ಣರಾಜ ಒಡೆಯರ್ ಅವರ ಕಾಲಗಳನ್ನು ಸುವರ್ಣ ಯುಗ ಎಂದು ಇತಿಹಾಸಕಾರರು ಗುರುತಿಸಿದ್ದಾರೆ.ಮುಂದೆ ಹೈದರಾಲಿ ನಂತರ ಟಿಪ್ಪು ಸುಲ್ತಾನ್ ಅಧಿಕಾರಕ್ಕೆ ಬಂದರು. ಬ್ರಿಟಿಷರ ಸೇನೆ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು, ಟಿಪ್ಪುಯುದ್ಧದಲ್ಲಿ ಹತನಾದದ್ದು ಮೈಸೂರಿನ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿದೆ. ಆ ನಂತರ ಒಡೆಯರ್ ವಂಶದ ಐದು ವರ್ಷ ಪ್ರಾಯದ ಬಾಲಕ(ಮುಮ್ಮಡಿ ಕೃಷ್ಣರಾಜ ಒಡೆಯರ್) ಮೈಸೂರಿನ ದೊರೆಯಾಗಿ ಪ್ರತಿಷ್ಠಾಪಿಸಲ್ಪಟ್ಟದ್ದು ಯದುವಂಶದ ಮರುಚಾಲನೆಗೆ ಕಾರಣಕರ್ತೃವಾಯಿತು.1831ರಲ್ಲಿ ಮುಮ್ಮಡಿಯವರ ಕೈಯಿಂದ ಅಧಿಕಾರ ನಿರ್ವಹಣೆಯನ್ನು ಕಿತ್ತುಕೊಂಡು ಬ್ರಿಟಿಷರೇ ನೇರವಾಗಿ ಆಡಳಿತ ನಡೆಸತೊಡಗಿದರು. 1867ರಲ್ಲಿ ಮೈಸೂರು ರಾಜ್ಯವನ್ನು ಒಡೆಯರಿಗೆ ಹಿಂದಕ್ಕೊಪ್ಪಿಸುವ ತೀರ್ಮಾನ ಕೈಗೊಂಡಿತು.ಮುಮ್ಮಡಿಯವರ ದತ್ತು ಪುತ್ರ 10ನೆ ಚಾಮರಾಜೇಂದ್ರ ಒಡೆಯರ್ 18 ವರ್ಷದ ಪ್ರಾಯಕ್ಕೆ ಬಂದಾಗ ಬ್ರಿಟಿಷರು 1881ರಲ್ಲಿ ರಾಜ್ಯಾಧಿಕಾರವನ್ನು ಮತ್ತೆ ಹಿಂತಿರುಗಿಸಿದರು. ಚಾಮರಾಜೇಂದ್ರ ಒಡೆಯರ್ 1894ರಲ್ಲಿ ಕೇವಲ 14 ವರ್ಷಗಳ ಆಡಳಿತದ ನಂತರ ಅನಿರೀಕ್ಷಿತವಾಗಿ ಗಂಟಲು ನೋವಿನಿಂದ ನಿಧನರಾದರು.ನಾಲ್ವಡಿಯವರು ನಿಧನರಾದದ್ದು 3-8-1940ರಂದು. ಅವರಿಗೆ ಪುತ್ರ ಸಂತತಿಯಿರಲಿಲ್ಲ. ಹೀಗಾಗಿ ಅವರ ಸೋದರ ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರ್ ಅವರ ಪುತ್ರರಾದ ಜಯ ಚಾಮರಾಜ ಒಡೆಯರು ಮಹಾರಾಜರಾಗಿ ಪಟ್ಟಾಭಿಷಿಕ್ತರಾದರು.ಮೈಸೂರಿನ ಮಹಾರಾಜ ಶ್ರೀಜಯಚಾಮರಾಜೇಂದ್ರ ಒಡೆಯರ್ ಯದುವಂಶದ 25ನೆ ದೊರೆ. ನಿಧನರಾಗಿದ್ದು ಸೆ.22, 1957ರಂದು ಶ್ರೀ ಜಯಚಾಮರಾಜೇಂದ್ರ ಒಡೆಯರ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಯದುವಂಶದ ಕೊನೆಯ ಕುಡಿಯಾಗಿದ್ದರು. ಡಿ. 10, 2013ರಂದು ಇಹಲೋಕದ ವ್ಯಾಪರ ಮುಗಿಸಿದರು." }
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಯದುವಂಶ ಒಡೆಯರ್ ವಂಶಾವಳಿ

By Mahesh
|
Google Oneindia Kannada News

ಮೈಸೂರು, ಡಿ.11: ಮೈಸೂರು ಸಂಸ್ಥಾನದ ಯದುವಂಶ ವಿಶಿಷ್ಟವಾದ ರಾಜಮನೆತನ. ಭಾರತಕ್ಕೆ ಸ್ವಾಂತಂತ್ರ್ಯ ಬಂದ ನಂತರವೂ ಒಡೆಯರ್ ಅಥವಾ ವಡೀಯಾರ್ ಸರ್ ನೇಮ್ ಬಳಕೆ ರಾಜಮನೆತನದ ಸದಸ್ಯರಲ್ಲೇ ಉಳಿಸಿಕೊಳ್ಳಲಾಗಿತ್ತು. 1399 ರಿಂದ 1947ರ ತನಕ ರಾಜ್ಯಭಾರ ಮಾಡಿದ ಯದುವಂಶ ಸ್ಥಾಪಕ ಯದುರಾಯ ಅಥವಾ ವಿಜಯ.

ಸೋದರ ಕೃಷ್ಣ ಅಥವಾ ಕೃಷ್ಣರಾಯನೊಂದಿಗೆ ಯದುರಾಯ ದ್ವಾರಕೆಯಿಂದ ತೀರ್ಥಯಾತ್ರೆಗಾಗಿ ಮೈಸೂರಿಗೆ ಬಂದಿದರು. ಮೇಲುಕೋಟೆ ದೇಗುಲಕ್ಕೆ ಭೇಟಿ ಕೊಟ್ಟ ನಂತರ ದೊಡ್ಡಕೆರೆ ಸಮೀಪವಿರುವ ಕೋಡಿ ಬಸವಣ್ಣ ದೇಗುಲದಲ್ಲಿ ಇಬ್ಬರು ನೆಲೆಸಿದ್ದರು. ಪ್ರಾಂತ್ಯದ ರಾಜ ನಿಧನರಾಗಿದ್ದು ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಎಂದು ಮಹಾರಾಣಿ ಅವರಿಗೆ ಬೆದರಿಕೆ ಒಡ್ಡಿದ ಪಕ್ಕದ ರಾಜ್ಯ ಕರುಗಹಳ್ಳಿಯ ಮಾರನಾಯಕ ಪೀಡಿಸುತ್ತಿರುತ್ತಾನೆ.

ಈ ಸಂದರ್ಭದಲ್ಲಿ ಯಾತ್ರಾರ್ಥಿಗಳಾಗಿದ್ದ ಯದುರಾಯ ಹಾಗೂ ಕೃಷ್ಣರಾಯರಿಗೆ ಈ ವಿಷಯ ತಿಳಿಯುತ್ತದೆ. ಜಂಗಮ ಸ್ವಾಮಿಗಳೊಬ್ಬರ ನೆರವು ಪಡೆದು ಮಾರನಾಯಕನನ್ನು ಬಗ್ಗು ಬಡಿದು ಮೈಸೂರನ್ನು ಉಳಿಸಿ ಯದುವಂಶ ಸ್ಥಾಪಿಸುತ್ತಾರೆ. ಅಲ್ಲಿಂದ ಇಲ್ಲಿವರೆಗೂ ಸುಮಾರು 25ಕ್ಕೂ ರಾಜರ ರಾಜ್ಯಭಾರ ಮಾಡಿದ್ದಾರೆ. ಸ್ವಾತಂತ್ರ್ಯದ ಬಳಿಕ ಮೈಸೂರು ರಾಜ್ಯ ಭಾರತ ಗಣರಾಜ್ಯಕ್ಕೆ ಸೇರ್ಪಡೆಗೊಳ್ಳುತ್ತದೆ. ಯದುವಂಶದ ಮೈಸೂರು ದೊರೆಗಳನ್ನು ಒಡೆಯರ್(ಒಡೆಯ) ಎಂದು ಗುರುತಿಸಲಾಗುತ್ತದೆ.

The Mysore Wodeyar dynasty

ಕ್ರಿ.ಶ.1399ರಲ್ಲಿ ಮೈಸೂರಿನಲ್ಲಿ ರಾಜ್ಯಸ್ಥಾಪನೆ ಮಾಡಿದ್ದರು. ಅಂದು 23 ಹಳ್ಳಿಗಳ ರಾಜ್ಯವಾಗಿದ್ದ ಮೈಸೂರು ಕ್ರಿ.ಶ.1578ರಷ್ಟು ಸಮಯದವರೆಗೂ ಕೇವಲ 33 ಹಳ್ಳಿಗಳಿದ್ದ ಒಂದು ಸಣ್ಣ ಪಾಳೆಯಪಟ್ಟಾವಾಗಿತ್ತು. ಅಲ್ಲಿದ್ದ ಸೈನ್ಯ ಕೇವಲ 300 ಜನ ಯೋಧರಿಂದ ಕೂಡಿದ್ದು. ವಾರ್ಷಿಕ ವರಮಾನ 25 ಸಾವಿರ ವರಹಗಳಷ್ಟಿತ್ತು.

ಕ್ರಿ.ಶ.1616ರವರೆಗೆ ಇವರು ವಿಜಯನಗರ ಮತ್ತು ದಿಲ್ಲಿ ಸಾಮ್ರಾಟರಿಗೆ ಕಪ್ಪಕೊಡುತ್ತಿದ್ದ ಬಗ್ಗೆ ದಾಖಲೆಗಳಿವೆ. 1761ರ ಅಕ್ಕಪಕ್ಕದ ವರ್ಷಗಳಲ್ಲಿ ಹೈದರಾಲಿ ಹಾಗೂ ಅವರ ಪುತ್ರ ಟಿಪ್ಪು ಸುಲ್ತಾನ್ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಒಡೆಯರ್ ಗಳನ್ನು ಹಿಂಬದಿಗೆ ತಳ್ಳಿ ರಾಜ್ಯವಾಳಿದ್ದು ಇತಿಹಾಸ.

ಅನಂತರದ ವರ್ಷಗಳಲ್ಲಿ ಕ್ರಮೇಣ ಬಹುದೊಡ್ಡ ಸಾಮ್ರಾಜ್ಯವಾಗಿ ವಿಸ್ತಾರ ಗೊಂಡಿತು. ಯದುವಂಶದ ಮೈಸೂರು ದೊರೆಗಳನ್ನು ಒಡೆಯರ್ ಎಂದು ಗುರುತಿಸಲಾಗುತ್ತಿತ್ತು. ಕ್ರಿ.ಶ.1616ರವರೆಗೆ ಇವರು ವಿಜಯನಗರ ಮತ್ತು ದಿಲ್ಲಿಯ ಸಾಮ್ರಾಟರಿಗೆ ಕಪ್ಪಕೊಡುತ್ತಿದ್ದ ಬಗ್ಗೆ ದಾಖಲೆಗಳಿವೆ. 1761ರ ಅಕ್ಕಪಕ್ಕದ ವರ್ಷಗಳಲ್ಲಿ ಹೈದರಾಲಿ ಹಾಗೂ ಅವರ ಪುತ್ರ ಟಿಪ್ಪು ಸುಲ್ತಾನ್ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಒಡೆಯರ್ ಗಳನ್ನು ಹಿಂಬದಿಗೆ ತಳ್ಳಿ ರಾಜ್ಯವಾಳಿದ ಇತಿಹಾಸ ಪ್ರತ್ಯೇಕ.

The Mysore Wodeyar dynasty

* ದೇವ ರಾಯ (1399 - 1423).
* ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (1423 - 1459)
* ತಿಮ್ಮರಾಜ ಒಡೆಯರ್ (1459 - 1479)
* ಹಿರಿಯ ಚಾಮರಾಜ ಒಡೆಯರ್ (1479 - 1513)
* ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (ಇಮ್ಮಡಿ) (1513 - 1553)
* ಬೋಳ ಚಾಮರಾಜ ಒಡೆಯರ್ (1572 - 1576) (ಬೊಕ್ಕ ತಲೆಯುಳ್ಳವ ಎಂದು ಪ್ರಸಿದ್ಧಿ)
* ಬೆಟ್ಟದ ಚಾಮರಾಜ ಒಡೆಯರ್ (ಮುಮ್ಮಡಿ) (1576 - 1578)
* ರಾಜ ಒಡೆಯರ್ (1578 - 1617)
* ಚಾಮರಾಜ ಒಡೆಯರ್ (1617 - 1637).
* ಇಮ್ಮಡಿ ರಾಜ ಒಡೆಯರ್ (1637 - 1638)
* ರಣಧೀರ ಕ೦ಠೀರವ ನರಸರಾಜ ಒಡೆಯರ್ (1638 - 1659)
* ದೊಡ್ಡ ದೇವರಾಜ ಒಡೆಯರ್ (1659 - 1673)
* ಚಿಕ್ಕ ದೇವರಾಜ ಒಡೆಯರ್ (1673 - 1704)
* ಕ೦ಠೀರವ ನರಸರಾಜ ಒಡೆಯರ್ (1704 - 1714)
* ದೊಡ್ಡ ಕೃಷ್ಣರಾಜ ಒಡೆಯರ್ (1732 - 1734)
* ಇಮ್ಮಡಿ ಕೃಷ್ಣರಾಜ ಒಡೆಯರ್ (1734 - 1766)
* ಬೆಟ್ಟದ ಚಾಮರಾಜ ಒಡೆಯರ್ (1770 - 1776)
* ಖಾಸಾ ಚಾಮರಾಜ ಒಡೆಯರ್ (1766 - 1796)
* ಮುಮ್ಮಡಿ ಕೃಷ್ಣರಾಜ ಒಡೆಯರ್ (1799 - 1868)
* ಮುಮ್ಮಡಿ ಚಾಮರಾಜ ಒಡೆಯರ್ (1868 - 1895)
* ನಾಲ್ಮಡಿ ಚಾಮರಾಜ ಒಡೆಯರ್ (1895 - 1940)
* ಜಯಚಾಮರಾಜ ಒಡೆಯರ್ (1940 - 1947)
* ಮೈಸೂರು ರಾಜ್ಯದ ರಾಜಪ್ರಮುಖರು (1947 - 1956)
* ಮೈಸೂರು ರಾಜ್ಯದ ರಾಜ್ಯಪಾಲರು (1956 - 1964)
* ಮದ್ರಾಸ್ ರಾಜ್ಯದ ರಾಜ್ಯಪಾಲರು (1964-1966)
* 1971ರ ಸಂವಿಧಾನದ 26ನೇ ತಿದ್ದುಪಡಿ ಅನ್ವಯ ಮೈಸೂರಿನ ಅರಸರ 'ಮಹಾರಾಜ ' ಪದವಿ ಸರ್ಕಾರಕ್ಕೆ
* ಶ್ರೀಕಂಠದತ್ತ ಒಡೆಯರ್ 1974 ರಲ್ಲಿ ಪಟ್ಟಕ್ಕೆ ಬಂದರು. ಖಾಸಗಿ ದರ್ಬಾರಿಗೆ ಅವಕಾಶ (1953-2013)

ರಾಜರ ವಂಶಾವಳಿ ಗಮನಿಸಿದರೆ ರಾಜ ಒಡೆಯರ್ , ರಣಧೀರ ಕಂಠೀರವ ನರಸರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ್,ಕೃಷ್ಣರಾಜ ಒಡೆಯರ್ ಅವರ ಕಾಲಗಳನ್ನು ಸುವರ್ಣ ಯುಗ ಎಂದು ಇತಿಹಾಸಕಾರರು ಗುರುತಿಸಿದ್ದಾರೆ.
ಮುಂದೆ ಹೈದರಾಲಿ ನಂತರ ಟಿಪ್ಪು ಸುಲ್ತಾನ್ ಅಧಿಕಾರಕ್ಕೆ ಬಂದರು. ಬ್ರಿಟಿಷರ ಸೇನೆ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು, ಟಿಪ್ಪುಯುದ್ಧದಲ್ಲಿ ಹತನಾದದ್ದು ಮೈಸೂರಿನ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿದೆ. ಆ ನಂತರ ಒಡೆಯರ್ ವಂಶದ ಐದು ವರ್ಷ ಪ್ರಾಯದ ಬಾಲಕ(ಮುಮ್ಮಡಿ ಕೃಷ್ಣರಾಜ ಒಡೆಯರ್) ಮೈಸೂರಿನ ದೊರೆಯಾಗಿ ಪ್ರತಿಷ್ಠಾಪಿಸಲ್ಪಟ್ಟದ್ದು ಯದುವಂಶದ ಮರುಚಾಲನೆಗೆ ಕಾರಣಕರ್ತೃವಾಯಿತು.

1831ರಲ್ಲಿ ಮುಮ್ಮಡಿಯವರ ಕೈಯಿಂದ ಅಧಿಕಾರ ನಿರ್ವಹಣೆಯನ್ನು ಕಿತ್ತುಕೊಂಡು ಬ್ರಿಟಿಷರೇ ನೇರವಾಗಿ ಆಡಳಿತ ನಡೆಸತೊಡಗಿದರು. 1867ರಲ್ಲಿ ಮೈಸೂರು ರಾಜ್ಯವನ್ನು ಒಡೆಯರಿಗೆ ಹಿಂದಕ್ಕೊಪ್ಪಿಸುವ ತೀರ್ಮಾನ ಕೈಗೊಂಡಿತು.

ಮುಮ್ಮಡಿಯವರ ದತ್ತು ಪುತ್ರ 10ನೆ ಚಾಮರಾಜೇಂದ್ರ ಒಡೆಯರ್ 18 ವರ್ಷದ ಪ್ರಾಯಕ್ಕೆ ಬಂದಾಗ ಬ್ರಿಟಿಷರು 1881ರಲ್ಲಿ ರಾಜ್ಯಾಧಿಕಾರವನ್ನು ಮತ್ತೆ ಹಿಂತಿರುಗಿಸಿದರು. ಚಾಮರಾಜೇಂದ್ರ ಒಡೆಯರ್ 1894ರಲ್ಲಿ ಕೇವಲ 14 ವರ್ಷಗಳ ಆಡಳಿತದ ನಂತರ ಅನಿರೀಕ್ಷಿತವಾಗಿ ಗಂಟಲು ನೋವಿನಿಂದ ನಿಧನರಾದರು.

ನಾಲ್ವಡಿಯವರು ನಿಧನರಾದದ್ದು 3-8-1940ರಂದು. ಅವರಿಗೆ ಪುತ್ರ ಸಂತತಿಯಿರಲಿಲ್ಲ. ಹೀಗಾಗಿ ಅವರ ಸೋದರ ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರ್ ಅವರ ಪುತ್ರರಾದ ಜಯ ಚಾಮರಾಜ ಒಡೆಯರು ಮಹಾರಾಜರಾಗಿ ಪಟ್ಟಾಭಿಷಿಕ್ತರಾದರು.

ಮೈಸೂರಿನ ಮಹಾರಾಜ ಶ್ರೀಜಯಚಾಮರಾಜೇಂದ್ರ ಒಡೆಯರ್ ಯದುವಂಶದ 25ನೆ ದೊರೆ. ನಿಧನರಾಗಿದ್ದು ಸೆ.22, 1957ರಂದು ಶ್ರೀ ಜಯಚಾಮರಾಜೇಂದ್ರ ಒಡೆಯರ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಯದುವಂಶದ ಕೊನೆಯ ಕುಡಿಯಾಗಿದ್ದರು. ಡಿ. 10, 2013ರಂದು ಇಹಲೋಕದ ವ್ಯಾಪರ ಮುಗಿಸಿದರು.

English summary
The Wodeyar dynasty was an Indian Hindu dynasty that ruled the Kingdom of Mysore from 1399 to 1947, until the independence of India from British rule and the subsequent unification of the Indian dominion and princely states into the Republic of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X