ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮುಂದೆ ಮೈಸೂರಿನವರೆಗೂ ಸಂಚರಿಸಲಿದೆ ಕೊಚುವೇಲಿ – ಬೆಂಗಳೂರು ಎಕ್ಸ್ ಪ್ರೆಸ್ ರೈಲು

|
Google Oneindia Kannada News

ಮೈಸೂರು, ಆಗಸ್ಟ್ 8 : ಪ್ರವಾಸಿಗರ ಒತ್ತಾಯದ ಮೇರೆಗೆ ಕೇರಳದಿಂದ ಬೆಂಗಳೂರಿಗೆ ಬರುತ್ತಿರುವ ಕೊಚುವೇಲಿ - ಬೆಂಗಳೂರು ಎಕ್ಸ್ ಪ್ರೆಸ್ ರೈಲನ್ನು ಮೈಸೂರಿನವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ.

ಮಹಾರಾಷ್ಟ್ರದಲ್ಲಿ ಮಳೆ; ಕೊಂಕಣ ರೈಲುಗಳ ಸಂಚಾರದಲ್ಲಿ ವ್ಯತ್ಯಯಮಹಾರಾಷ್ಟ್ರದಲ್ಲಿ ಮಳೆ; ಕೊಂಕಣ ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಈ ಹಿಂದೆ ಮೈಸೂರಿಗೆ ಈ ಎಕ್ಸ್‌ ಪ‍್ರೆಸ್ ರೈಲು ಸೇವೆ ವಿಸ್ತರಿಸುವಂತೆ ಕೋರಿ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರಿಗೆ ಸಂಸದ ಪ್ರತಾಪಸಿಂಹ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿರುವ ಸಚಿವರು, 16315/16316 ಸಂಖ್ಯೆಯ ರೈಲು ಸೇವೆಯನ್ನು ಮೈಸೂರಿನವರೆಗೆ ವಿಸ್ತರಿಸಲಾಗಿದೆ. ಇದರಿಂದ ಎರಡು ನಗರಿಗಳ ಸಂಪರ್ಕಕ್ಕೆ ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.

ಅಪಾಯದ ಸೂಚನೆ; ಮಧ್ಯದಲ್ಲೇ ನಿಂತ ರಾಣಿ ಚೆನ್ನಮ್ಮ ಎಕ್ಸ್‌ ಪ್ರೆಸ್ಅಪಾಯದ ಸೂಚನೆ; ಮಧ್ಯದಲ್ಲೇ ನಿಂತ ರಾಣಿ ಚೆನ್ನಮ್ಮ ಎಕ್ಸ್‌ ಪ್ರೆಸ್

ಆಗಸ್ಟ್ ನೊಳಗೆ ಈ ಸೇವೆ ಆರಂಭವಾಗಲಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಇದಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಜೊತೆಗೆ ನವೀಕರಣಗೊಂಡಿರುವ ರೈಲು ನಿಲ್ದಾಣದ ಉದ್ಘಾಟನೆಯನ್ನೂ ನೆರವೇರಿಸಲಿದ್ದಾರೆ. ಇದರೊಂದಿಗೆ ಪ್ರವಾಸಿಗಳ ಸ್ವರ್ಗ ಕೇರಳ ಹಾಗೂ ಸಾಂಸ್ಕೃತಿಕ ನಗರಿ ನಡುವೆ ನೇರ ರೈಲು ಸಂಪರ್ಕ ಏರ್ಪಟ್ಟಂತಾಗಿದೆ.

the-kochuveli-bangalore-express-train-will-run-till-mysuru

ಈಚೆಗೆ ಉಡಾನ್-3 ಯೋಜನೆಯಡಿ ಮೈಸೂರಿನಿಂದ ಕೊಚ್ಚಿಗೆ ವಿಮಾನಯಾನ ಸಂಪರ್ಕ ಆರಂಭವಾಗಿತ್ತು.
ಈಗಾಗಲೇ ಮೈಸೂರಿನಿಂದ ಹೈದರಾಬಾದ್, ಚೆನ್ನೈಗೆ ರೈಲು ಸಂಪರ್ಕ ಕಲ್ಪಿಸಲಾಗಿದೆ. ಈ ಮೂಲಕ ದಕ್ಷಿಣ ರಾಜ್ಯದ ಪ್ರಮುಖ ನಗರಗಳಿಗೆ ಮೈಸೂರಿನಿಂದ ರೈಲ್ವೆ ಸಂಪರ್ಕ ಲಭಿಸಿದಂತಾಗಿದ್ದು ಪ್ರಯಾಣಿಕರಿಗೆ ಸಂತಸ ತಂದಿದೆ.

English summary
The railway department has agreed to extend the Kochuveli-Bangalore express train from Kerala to Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X