ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನದು ಅತ್ಯಂತ ಕೆಟ್ಟ ಸರ್ಕಾರವಾಗಿತ್ತು, ಒಪ್ಪಿಕೊಳ್ತೇನೆ ಎಂದ ಕುಮಾರಸ್ವಾಮಿ

|
Google Oneindia Kannada News

Recommended Video

ಮತ್ತೊಂದು ವಿವಾದ ಹುಟ್ಟುಹಾಕಿದ ಕುಮಾರಣ್ಣ | HD Kumaraswamy

ಮೈಸೂರು, ಸೆಪ್ಟೆಂಬರ್ 21: ನನ್ನದು ಅತ್ಯಂತ ಕೆಟ್ಟ ಸರ್ಕಾರವಾಗಿತ್ತು, ಅದನ್ನು ನಾನೇ ಒಪ್ಪಿಕೊಳ್ಳುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನನ್ನದು ಕೆಟ್ಟ ಸರ್ಕಾರವಾಗಿತ್ತು ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ, ನನಗೆ ಯಾರದ್ದೂ ಬೆಂಬಲವಿರಲಿಲ್ಲ.

ಹಾಗಾಗಿಯೇ ರೈತರ ಸಾಲಮನ್ನಾ ಮಾಡುವಂತಹ ನಿರ್ಧಾರಗಳನ್ನು ಛಲದಿಂದ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಏಕಕಾಲಕ್ಕೆ ನಾಲ್ಕು ಸ್ಫೋಟಕ ಸುದ್ದಿ ತೂರಿ ಬಿಟ್ಟ ಮಾಜಿ ಸಿಎಂ ಕುಮಾರಸ್ವಾಮಿಏಕಕಾಲಕ್ಕೆ ನಾಲ್ಕು ಸ್ಫೋಟಕ ಸುದ್ದಿ ತೂರಿ ಬಿಟ್ಟ ಮಾಜಿ ಸಿಎಂ ಕುಮಾರಸ್ವಾಮಿ

ಕಾಂಗ್ರೆಸ್‌ಗೆ ಬಿಜೆಪಿಗಿಂತ ಮೊದಲ ಶತ್ರು ಜೆಡಿಎಸ್ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಕಾಂಗ್ರೆಸ್‌ಗೆ ಮೊದಲು ಶತ್ರು ಜೆಡಿಎಸ್, ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್-ಜೆಡಿಎಸ್ ನಡುವಿನ ಕಿತ್ತಾಟ ಬಿಜೆಪಿಗೆ ಸಹಕಾರಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Breaking: ಉಪಚುನಾವಣೆಗೆ ದಿನಾಂಕ ನಿಗದಿ, ಇಂದಿನಿಂದಲೇ ನೀತಿ ಸಂಹಿತೆ ಜಾರಿBreaking: ಉಪಚುನಾವಣೆಗೆ ದಿನಾಂಕ ನಿಗದಿ, ಇಂದಿನಿಂದಲೇ ನೀತಿ ಸಂಹಿತೆ ಜಾರಿ

ಅನಿವಾರ್ಯವಾಗಿ ಕಳೆದ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದವು. ಆದರೆ ಇನ್ನೆಂದೂ ಅಂತಹ ಕೆಲಸಕ್ಕೆ ಮುಂದಾಗುವುದಿಲ್ಲ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಎಂದು ಮಾಹಿತಿ ನೀಡಿದರು.

ಹುಣಸೂರಿನಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಬೇಕು. ಕರ್ನಾಟಕದಲ್ಲಿ ಜೆಡಿಎಸ್ ಗೆಲ್ಲಿಸಲು ಪ್ರಯತ್ನ ಪಡುತ್ತೇವೆ ಎಂದು ಹೇಳಿದರು.

ಎಲ್ಲರಿಗೂ ತಿಳಿದಿರುವಂತೆ ಮೈತ್ರಿ ಸರ್ಕಾರ ಪತನವಾದ ಬಳಿಕ ಮಾಜಿ ಪ್ರಧಾನಿ ದೇವೇಗೌಡರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮಧ್ಯೆ ಹಲವು ವಾಗ್ವಾದ ನಡೆದಿತ್ತು, ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟುಕೊಂಡು ಎಲ್ಲರ ಕುತೂಹಲಕ್ಕೆ ಕಾರಣರಾಗಿದ್ದರು.

ಉಪ ಚುನಾವಣೆ: ಜೆಡಿಎಸ್ ಸ್ವತಂತ್ರ ಸ್ಪರ್ಧೆ

ಉಪ ಚುನಾವಣೆ: ಜೆಡಿಎಸ್ ಸ್ವತಂತ್ರ ಸ್ಪರ್ಧೆ

ಕರ್ನಾಟಕದ 15 ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 24ಕ್ಕೆ ಫಲಿತಾಂಶ ಹೊರಬೀಳಲಿದೆ. ಈಗಾಗಲೇ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸೋತಿದ್ದ ಜೆಡಿಎಸ್ ಇದೀಗ ಸ್ವತಂತ್ರವಾಗಿ ಸ್ಪರ್ಧಿಸಲು ಒಲವು ತೋರಿಸಿದ್ದಾರೆ.

ಉಪಚುನಾವಣೆ: ಕಂಗಾಲಾದ ಅನರ್ಹ ಶಾಸಕರು

ಉಪಚುನಾವಣೆ: ಕಂಗಾಲಾದ ಅನರ್ಹ ಶಾಸಕರು

ಉಪಚುನಾವಣೆ ದಿನಾಂಕ ನಿಗದಿಯಾಗಿದೆ, ಅನರ್ಹಶಾಸಕರಿಗೆ ಆತಂಕ ಶುರುವಾಗಿದೆ, ಒಂದೊಮ್ಮೆ ತೀರ್ಪು ಬಾರದೆ ಇದ್ದರೆ ತಮ್ಮ ಕನಸು ನುಚ್ಚುನೂರಾಗುತ್ತದೆ ಎಂಬ ತಲೆನೋವು ಅವರನ್ನು ಕಾಡುತ್ತಿದೆ. ಹಾಗಾಗಿ ವಕೀಲರಿಗೆ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸೋಮವಾರ ವಿಚಾರಣೆ ವೇಳೆ ಶಾಸಕರ ಪರವಾಗಿ ಉಪ ಚುನಾವೆಗೆ ತಡೆಯೊಡ್ಡಲು ವಕೀಲರು ಅರ್ಜಿ ಸಲ್ಲಿಸಲಿದ್ದಾರೆ.

ಕಾಂಗ್ರೆಸ್‌ಗೆ ಜೆಡಿಎಸ್ ಮೊದಲ ಶತ್ರು

ಕಾಂಗ್ರೆಸ್‌ಗೆ ಜೆಡಿಎಸ್ ಮೊದಲ ಶತ್ರು

ಕಾಂಗ್ರೆಸ್‌ಗೆ ಬಿಜೆಪಿಗಿಂತಲೂ ಮೊದಲು ಜೆಡಿಎಸ್ ಶತ್ರು, ನಾವು ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಕೂಡ ನಮ್ಮ ಬಗ್ಗೆ ಹಗೆ ಸಾಧಿಸುತ್ತಲೇ ಬಂದಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ನನಗೆ ಯಾವುದೇ ಬೆಂಬಲ ನೀಡಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್‌ನಿಂದ ಕಾರ್ಯಕರ್ತರು ದೂರವಾಗುತ್ತಿದ್ದಾರೆ

ಜೆಡಿಎಸ್‌ನಿಂದ ಕಾರ್ಯಕರ್ತರು ದೂರವಾಗುತ್ತಿದ್ದಾರೆ

ಜೆಡಿಎಸ್‌ನಿಂದ ಕಾರ್ಯಕರ್ತರು ದೂರವಾಗುತ್ತಿದ್ದಾರೆ, ಅದರಿಂದ ತುಂಬಾ ನೋವಾಗಿದೆ. ಕರ್ನಾಟಕದಲ್ಲಿ ಜೆಡಿಎಸ್ ಹೋಗಲಿ ಎಂದು ತುಂಬಾ ಜನ ಕಾಯುತ್ತಿದ್ದಾರೆ ಆದರೆ ಹೈಕಮಾಂಡ್‌ನಲ್ಲಿ ಹಾಗಿಲ್ಲ. ನಮ್ಮದಂತೂ ಕೆಟ್ಟ ಸರ್ಕಾರವಾಗಿತ್ತು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಕರ್ನಾಟಕದಲ್ಲಿ ಜೆಡಿಎಸ್ ಗೆಲಿಸಲು ನನ್ನಿಂದಾಗುವ ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದರು.

English summary
Former chief minister HD Kumaraswamy has raised a new controversy as the JDS is the first enemy of the Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X