ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಸಿಗರಿಗೆ ಇನ್ನೂ ತೆರೆಯದ ಬೈಲುಕೊಪ್ಪೆಯ ಗೋಲ್ಡನ್‌ ಟೆಂಪಲ್‌

By Coovercolly Indresh
|
Google Oneindia Kannada News

ಮೈಸೂರು, ಫೆಬ್ರವರಿ 9: ಕಳೆದ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಕಾಣಿಸಿಕೊಂಡ ಕೋವಿಡ್-19 ಎಂಬ ಮಹಾಮಾರಿ ಸಾಂಕ್ರಮಿಕದ ಕಾರಣದಿಂದ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್‌ ಡೌನ್‌ ಘೋಷಿಸಲಾಗಿತ್ತು.

ನಂತರ ಕೋವಿಡ್ ಸೋಂಕು ಲಕ್ಷಣಗಳು ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ನಿಯಮಾವಳಿಯನ್ನು ಸಡಿಲಗೊಳಿಸಿ ಸಾರ್ವಜನಿಕರ ಮುಕ್ತ ಓಡಾಟಕ್ಕೆ ಅನುವು ಮಾಡಿ ಕೊಡಲಾಯಿತಲ್ಲದೆ ಸರ್ಕಾರೀ ಕಚೇರಿಗಳು, ರೈಲು, ವಿಮಾನ, ಬಸ್ಸುಗಳನ್ನು ಎಂದಿನಂತೆ ಓಡಿಸಲು ಅವಕಾಶ ಮಾಡಿಕೊಡಲಾಯಿತು.

ಬೈಲಕುಪ್ಪೆ ಗೋಲ್ಡನ್ ಟೆಂಪಲ್ ಪ್ರವಾಸಿಗರಿಗೆ ಮುಕ್ತಬೈಲಕುಪ್ಪೆ ಗೋಲ್ಡನ್ ಟೆಂಪಲ್ ಪ್ರವಾಸಿಗರಿಗೆ ಮುಕ್ತ

ಆದರೆ ಕಳೆದ ಮಾರ್ಚ್‌ ತಿಂಗಳಿನಲ್ಲಿ ಬಾಗಿಲು ಮುಚ್ಚಿದ ಬೈಲುಕೊಪ್ಪೆಯ ಗೋಲ್ಡನ್‌ ಟೆಂಪಲ್‌ ಇನ್ನೂ ಕೂಡ ಪ್ರವಾಸಿಗರಿಗೆ ತೆರೆಯಲ್ಪಟ್ಟಿಲ್ಲ. ಪ್ರವಾಸಿ ಜಿಲ್ಲೆ ಕೊಡಗಿನ ಮಗ್ಗುಲಲ್ಲೇ ಇರುವ ಈ ಪ್ರವಾಸಿ ತಾಣಕ್ಕೆ ನಿತ್ಯವೂ ನೂರಾರು ಪ್ರವಾಸಿಗರು ಭೇಟಿ ನೀಡಿ ಸಪ್ಪೆ ಮೊಗದೊಂದಿಗೆ ವಾಪಸ್ಸು ಹೋಗುತ್ತಿದ್ದಾರೆ.

Mysuru: The Golden Temple Of Bylakoppe Is Not Yet Open To Tourists

ಕೊಡಗಿನಲ್ಲೂ ಕೂಡ ಜಿಲ್ಲಾಡಳಿತ ಕೋವಿಡ್ ಲಾಕ್‌ ಡೌನ್‌ ಘೋಷಿಸಿದ್ದು, ಕಳೆದ ಅಕ್ಟೋಬರ್‌ ನಿಂದ ಪ್ರವಾಸಿ ತಾಣಗಳು ಸಾರ್ವಜನಿಕರಿಗೆ ಷರತ್ತಿನೊಂದಿಗೆ ತೆರೆಯಲ್ಪಟ್ಟಿವೆ. ಬಿಕೋ ಎನ್ನುತಿದ್ದ ಹೋಟೆಲ್‌, ಲಾಡ್ಜ್, ಹೋಂ ಸ್ಟೇ ಗಳು ಈಗ ಒಂದಷ್ಟು ವ್ಯಾಪಾರ ಪಡೆಯುತ್ತಿವೆ.

ಒನ್ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಬೆಂಗಳೂರಿನ ಪ್ರವಾಸಿ ಶ್ರೀಮತಿ ಪ್ರತಿಭಾ ಅವರು, ನಾವು ಕುಟುಂಬಸ್ಥರೆಲ್ಲರೂ ಮೊನ್ನೆ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದೆವು. ವಾಪಾಸ್ ಹೋಗುವಾಗ ಗೋಲ್ಡನ್‌ ಟೆಂಪಲ್‌ ನೋಡೋಣ ಎಂದು ಹೋದರೆ ಬೀಗ ಹಾಕಿದೆ, ಇದರಿಂದ ಎಲ್ಲರಿಗೂ ನಿರಾಸೆ ಆಗಿದೆ ಎಂದರು.

Mysuru: The Golden Temple Of Bylakoppe Is Not Yet Open To Tourists

ಮತ್ತೊಬ್ಬ ಪ್ರವಾಸಿ ಮಂಡ್ಯದ ಜನಾರ್ಧನ್‌ ಅವರೂ ಮಾತನಾಡಿ, ಎಲ್ಲರಿಗೂ ಮುಖಗವುಸು ಕಡ್ಡಾಯಗೊಳಿಸಿ ದೇವಾಲಯದ ಒಳಗೆ ಪ್ರವೇಶ ನೀಡಲಿ, ಈಗ ಕೊರೊನಾ ಸೋಂಕು ಕಡಿಮೆ ಆಗಿರುವುದರಿಂದ ಸೋಂಕು ಹರಡುವುದು ಕಡಿಮೆ ಆಗಿದೆ. ಈ ದಿಸೆಯಲ್ಲಿ ದೇವಾಲಯದ ಆಡಳಿತ ಮಂಡಳಿ ಶೀಘ್ರವೇ ಕ್ರಮ ಕೈಗೊಳ್ಳಲಿ, ಪ್ರವಾಸಿಗರು ನಿರಾಶರಾಗದಿರಲಿ ಎಂದು ಹೇಳಿದರು.

ಆದರೆ ಬೈಲುಕೊಪ್ಪೆಯ ಟಿಬೇಟಿಯನ್ ಗೋಲ್ಡನ್‌ ಟೆಂಪಲ್‌ ಗೆ ಪ್ರವಾಸಿಗರ ಪ್ರವೇಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಸಣ್ಣ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಟಿಬೇಟಿಯನ್ ಆಡಳಿತವು ಈ ಕುರಿತು ಶೀಘ್ರವೇ ಗೋಲ್ಡನ್‌ ಟೆಂಪಲ್‌ ಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿಕೊಡಲಿ ಎಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ. ಇದು ಖಾಸಗಿ ಪ್ರವಾಸಿ ತಾಣ ಆಗಿರುವುದರಿಂದ ಸರ್ಕಾರ ಸೂಚನೆ ನೀಡಲು ಆಗುತ್ತಿಲ್ಲ ಎನ್ನಲಾಗಿದೆ.

English summary
The golden temple in Bylakoppe, which closed its doors last March, is still not open to tourists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X