ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 25ರಿಂದ ಮೈಸೂರು-ಬೆಂಗಳೂರು ನಡುವೆ ವಿಮಾನ ಹಾರಾಟ ಖಚಿತ

By ಮೈಸೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 24: ಮೈಸೂರು ಹಾಗೂ ಬೆಂಗಳೂರು ನಡುವೆ ಮೇ 25ರಿಂದ ವಿಮಾನಗಳು ಹಾರಾಟ ನಡೆಸುವುದು ಖಚಿತವಾಗಿದೆ.

Recommended Video

ಲಾಕ್ ಡೌನ್ ನಲ್ಲಿ ಮಧುಮೇಹ ರೋಗಿಗಳ ಆರೋಗ್ಯ ಅಪಾಯದಲ್ಲಿ!! | Exercise is must in Lockdown | Oneindia Kannada

ದೇಶಾದ್ಯಂತ ದೇಶೀಯ ವಿಮಾನಗಳು ಮೇ 25ರಿಂದ ಹಾರಾಟ ನಡೆಸಲಿವೆ. ಅಂತೆಯೇ ಮೈಸೂರು ಹಾಗೂ ಬೆಂಗಳೂರು ನಡುವೆಯೂ ಕೂಡ ವಿಮಾನ ಹಾರಾಟಕ್ಕೆ ಅನುಮತಿ ದೊರೆತಿದೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಅಂತಾರಾಷ್ಟ್ರೀಯ ಹಾಗೂ ದೇಶೀಯ ವಿಮಾನಗಳ ಸಂಚಾರ ಎರಡು ತಿಂಗಳ ಹಿಂದೆಯೇ ಸ್ಥಗಿತಗೊಂಡಿತ್ತು. ಇದೀಗ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ ಪುನರಾರಂಭಗೊಳ್ಳಲಿದೆ.

flight

ಮೈಸೂರು-ಬೆಂಗಳೂರು ಹಾಗೂ ಮೈಸೂರು-ಬೆಳಗಾವಿ ಮಧ್ಯೆ‌ ಮಾತ್ರ ವಿಮಾನ ಹಾರಾಟ ನಡೆಸಲಿದೆ.ಸೋಮವಾರ ಮಧ್ಯಾಹ್ನ 4.30ಕ್ಕೆ ಬೆಂಗಳೂರಿನಿಂದ ಹೊರಟು ಸಂಜೆ 5.30ಕ್ಕೆ ಮೈಸೂರು, ಸಂಜೆ 6.15ಕ್ಕೆ ಮೈಸೂರಿನಿಂದ ಹೊರಟು ಸಂಜೆ 7.15ಕ್ಕೆ ಬೆಂಗಳೂರು, ಮಂಗಳವಾರ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಹೊರಡು ಮಧ್ಯಾಹ್ನ 4ಕ್ಕೆ ಮೈಸೂರು ತಲುಪಲಿದೆ.

ಮುಂಬೈ ಏರ್‌ಪೋರ್ಟ್‌ನಲ್ಲಿ 25 ವಿಮಾನಗಳ ಹಾರಾಟಕ್ಕೆ ಮಹಾ ಸರ್ಕಾರ ಅನುಮತಿಮುಂಬೈ ಏರ್‌ಪೋರ್ಟ್‌ನಲ್ಲಿ 25 ವಿಮಾನಗಳ ಹಾರಾಟಕ್ಕೆ ಮಹಾ ಸರ್ಕಾರ ಅನುಮತಿ

ರಾತ್ರಿ 9.45ಕ್ಕೆ ಮೈಸೂರಿನಿಂದ ಹೊರಟು 10.45ಕ್ಕೆ ಬೆಂಗಳೂರು, ಮಧ್ಯಾಹ್ಮ 3 ಗಂಟೆಗೆ ಬೆಳಗಾವಿಯಿಂದ ಸಂಜೆ‌ 4.20ಕ್ಕೆ ಮೈಸೂರು ತಲುಪಲಿದೆ.ಸಂಜೆ 4.55ಕ್ಕೆ ಮೈಸೂರಿನಿಂದ ಹೊರಟು ಸಂಜೆ 6.15ಕ್ಕೆ ಬೆಳಗಾವಿ ತಲುಪಲಿದೆ.

ವಿಮಾನ‌ ನಿಲ್ದಾಣದಲ್ಲಿ ಕೊರೋನಾ ಸೋಂಕು ಹರಡದಂತೆ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಮಾನ‌ದಲ್ಲೂ ಸಾಮಾಜಿಕ ಅಂತರ ಕಾಯ್ದಿರಿಸಿ ಸಂಚಾರಕ್ಕೆ ಸರ್ಕಾರದ ಅನುಮತಿ ನೀಡಲಾಗಿದೆ.

English summary
With the Government of India announced that domestic flights and civil aviation operations will resume from May 25 in a calibrated manner with stringent Special Operating Procedures (SOPs) for passenger movement, activities have picked up at Mysore Airport in Mandakalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X